ದುಬೈ(ಅ.17): ತಂತ್ರಗಾರಿಕೆಯಲ್ಲಿ ಎಡವಿ ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ವಿರುದ್ಧ ವೀರೋ​ಚಿತ ಸೋಲು ಅನು​ಭ​ವಿ​ಸಿದ ಆರ್‌ಸಿಬಿ, ಶನಿ​ವಾರ ನಡೆ​ಯ​ಲಿ​ರುವ ರಾಜಸ್ಥಾನ ರಾಯಲ್ಸ್‌ ವಿರು​ದ್ಧದ ಪಂದ್ಯ​ದಲ್ಲಿ ಜಯದ ಲಯಕ್ಕೆ ಮರ​ಳಲು ಎದು​ರು ನೋಡುತ್ತಿದೆ. 

ವಿರಾಟ್‌ ಕೊಹ್ಲಿ ಪಡೆ ಆಡಿ​ರುವ 8 ಪಂದ್ಯ​ಗ​ಳಲ್ಲಿ 5ರಲ್ಲಿ ಜಯಿಸಿ 3ರಲ್ಲಿ ಸೋಲುಂಡಿದೆ. ತಂಡ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿ​ತ​ಪ​ಡಿ​ಸಿ​ಕೊ​ಳ್ಳಲು ಉಳಿದಿರುವ 6 ಪಂದ್ಯ​ಗ​ಳಲ್ಲಿ ಕನಿಷ್ಠ 3ರಲ್ಲಿ ಗೆಲ್ಲ​ಬೇ​ಕಿದೆ. ಹೀಗಾಗಿ, ಈ ಪಂದ್ಯ ತಂಡಕ್ಕೆ ಮುಖ್ಯ​ವೆ​ನಿ​ಸಿದೆ.

ಮತ್ತೊಂದೆಡೆ ರಾಜ​ಸ್ಥಾನ ಆಡಿ​ರುವ 8 ಪಂದ್ಯ​ಗ​ಳಲ್ಲಿ 3ರಲ್ಲಿ ಗೆದ್ದು 5ರಲ್ಲಿ ಸೋಲುಂಡಿದೆ. ಪ್ಲೇ-ಆಫ್‌ ದೃಷ್ಟಿ​ಯಿಂದ ರಾಯಲ್ಸ್‌ಗಿದು ಮಹ​ತ್ವದ ಪಂದ್ಯ. ಬೆನ್‌ ಸ್ಟೋಕ್ಸ್ ಸೇರ್ಪಡೆ ಹಾಗೂ ಅವರು ಆರಂಭಿ​ಕ​ನಾಗಿ ಆಡು​ತ್ತಿ​ರು​ವುದು ರಾಯಲ್ಸ್‌ ಬಲ ಹೆಚ್ಚಿ​ಸಿದೆ. ಜೋಫ್ರಾ ಆರ್ಚರ್‌ ವೇಗಕ್ಕೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಹೇಗೆ ಉತ್ತ​ರಿ​ಸ​ಲಿ​ದ್ದಾರೆ ಎನ್ನುವ ಕುತೂ​ಹಲ ಅಭಿ​ಮಾ​ನಿ​ಗ​ಳ​ಲ್ಲಿದೆ.

KKR ನಾಯಕತ್ವ ಬದಲಾದರೂ ಫಲಿತಾಂಶ ಬದಲಾಗಲಿಲ್ಲ; ಮುಂಬೈಗೆ 8 ವಿಕೆಟ್ ಗೆಲುವು!

ಪಿಚ್‌ ರಿಪೋರ್ಟ್‌: ಇಲ್ಲಿನ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾ​ಸರಿ ಮೊತ್ತ 160-165 ರನ್‌. ಮೊದಲು ಬ್ಯಾಟ್‌ ಮಾಡುವ ತಂಡ 160ಕ್ಕಿಂತ ಹೆಚ್ಚು ರನ್‌ ದಾಖ​ಲಿ​ಸಿ​ದರೆ ಗೆಲ್ಲು​ವ ಸಾಧ್ಯತೆ ಹೆಚ್ಚು. ಮಧ್ಯಾಹ್ನದ ಪಂದ್ಯ​ವಾ​ಗಿ​ರುವ ಕಾರಣ ಇಬ್ಬನಿಯ ಸಮಸ್ಯೆ ಇರು​ವು​ದಿಲ್ಲ. ವೇಗಿ​ಗಳ ಪಾತ್ರ ಮಹ​ತ್ವ​ದಾಗಲಿದೆ.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಆರ್‌ಸಿಬಿ: ಆ್ಯರೋನ್‌ ಫಿಂಚ್‌, ದೇವ​ದತ್‌ ಪಡಿ​ಕ್ಕಲ್‌, ವಿರಾಟ್‌ ಕೊಹ್ಲಿ​(​ನಾ​ಯ​ಕ​), ಎಬಿ ಡಿವಿ​ಲಿ​ಯ​ರ್‍ಸ್, ಶಿವಂ ದುಬೆ, ಕ್ರಿಸ್‌ ಮೋರಿಸ್‌, ವಾಷಿಂಗ್ಟನ್‌ ಸುಂದರ್‌, ಇಸುರು ಉಡಾನ, ನವ್‌ದೀಪ್‌ ಸೈನಿ, ಮೊಹ​ಮದ್‌ ಸಿರಾಜ್‌, ಯಜು​ವೇಂದ್ರ ಚಹಲ್‌.

ರಾಜ​ಸ್ಥಾ​ನ: ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌, ಸ್ಟೀವ್‌ ಸ್ಮಿತ್‌ (ನಾ​ಯ​ಕ), ಸಂಜು ಸ್ಯಾಮ್ಸನ್‌, ರಾಬಿನ್‌ ಉತ್ತಪ್ಪ, ರಿಯಾನ್‌ ಪರಾಗ್‌, ರಾಹುಲ್‌ ತೆವಾ​ಟಿಯಾ, ಶ್ರೇಯಸ್‌ ಗೋಪಾಲ್‌, ಜೋಫ್ರಾ ಆರ್ಚರ್‌, ಕಾರ್ತಿಕ್‌ ತ್ಯಾಗಿ, ಜಯ​ದೇವ್‌ ಉನಾ​ದ್ಕತ್‌.

ಸ್ಥಳ: ದುಬೈ
ಪಂದ್ಯ: ಮಧ್ಯಾಹ್ನ 3.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್