ಶಾರ್ಜಾ(ಸೆ.22): 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಈ ವರೆಗಿನ ಪಂದ್ಯದ ಗರಿಷ್ಠ ಮೊತ್ತ ದಾಖಲಾಗಿದೆ. ಈ ಬಾರಿ 200 ರನ್ ಗಡಿ ದಾಟಿದ ಮೊದಲ ತಂಡ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಸಂಜು ಸಾಮ್ಸನ್ ಸಿಡಿಸಿದ 74 ರನ್ ಹಾಗೂ ಸ್ಟೀವ್ ಸ್ಮಿತ್ ಸಿಡಿಸಿದ  ರನ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್ ನಷ್ಟಕ್ಕೆ  216 ರನ್ ಸಿಡಿಸಿದೆ.

IPL 2020: ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್...

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜಸ್ವಾಲ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಆದರೆ ನಾಯಕ ಸ್ಟೀವ್ ಸ್ಮಿತ್ ಹಾಗೂ ಸಂಜು ಸಾಮ್ಸನ್ ಸಿಎಸ್‌ಕೆ ಲೆಕ್ಕಾಚಾರ ಉಲ್ಟಾ ಮಾಡಿದರು. ಸಂಜು ಸಾಮ್ಸನ್ ಸಿಕ್ಸರ್ ಆಟಕ್ಕೆ ಚೆನ್ನೈ ಬೆಚ್ಚಿ ಬಿದ್ದಿತು. ಕೇವಲ 19 ಎಸೆತದಲ್ಲಿ ಸಂಜು ಸಾಮ್ಸನ್ ಹಾಫ್ ಸೆಂಚುರಿ ಪೂರೈಸಿದರು.

ಸಂಜು ಸಾಮ್ಸನ್ 32 ಎಸೆತದಲ್ಲಿ 74 ರನ್ ಸಿಡಿಸಿ ಔಟಾದರು. ಇನ್ನು ಡೇವಿಡ್ ಮಿಲ್ಲರ್ ಅಬ್ಬರಿಸಲೇ ಇಲ್ಲ. ಕೆಕೆಆರ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ರಾಬಿನ್ ಉತ್ತಪ್ಪ, ಈ ಬಾರಿ ರಾಜಸ್ಥಾನ ರಾಯಲ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆದರೆ 5 ರನ್ ಸಿಡಿಸಿ ಔಟಾದರು. 

ಸ್ಟೀವ್ ಸ್ಮಿತ್ ಹೋರಾಟ ಮುಂದುವರಿಸಿದರೆ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಸ್ಮಿತ್ 47 ಎಸೆತದಲ್ಲಿ 69 ರನ್ ಸಿಡಿಸಿ ಔಟಾದರು. ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದ ರಾಜಸ್ಥಾನಕ್ಕೆ ಸ್ಯಾಮ್ ಕುರನ್ ಶಾಕ್ ನೀಡಿದರು. ಆದರೆ ಜೋಫ್ರಾ ಆರ್ಟರ್ ಕೇವಲ 8 ಎಸೆತದಲ್ಲಿ ಅಜೇಯ 27 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 7 ವಿಕೆಟ್ ನಷ್ಟಕ್ಕೆ 216 ರನ್ ಸಿಡಿಸಿತು.