ಶಾರ್ಜಾ(ಸೆ.22): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 13ನೇ ಆವೃತ್ತಿ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ದಿಟ್ಟ ತಿರುಗೇಟು ನೀಡಿದೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ ರಾಜಸ್ಥಾನಕ್ಕೆ ನಾಯಕ ಸ್ಟೀವ್ ಸ್ಮಿತ್ ಹಾಗೂ ಸಂಜು ಸಾಮ್ಸನ್ ಬ್ಯಾಟಿಂಗ್ ನೆರವಾಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸಾಮ್ಸನ್, ಬರೀ ಸಿಕ್ಸರ್ ಮೂಲಕವೇ ಗಮನಸೆಳೆದಿದ್ದಾರೆ.

ಐಪಿಎಲ್ 2020: ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸಾಮ್ಸನ್ ಕೇವಲ 19 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ ಪರ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ 3ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ರಾಜಸ್ಥಾನ ರಾಯಲ್ಸ್ ಪರ ಅತೀ ವೇಗದ ಅರ್ಧಶತಕ
18 ಎಸೆತ, ಜೋಸ್ ಬಟ್ಲರ್ v ಡೆಲ್ಲಿ,  2019
19 ಓವೈಸ್ ಶಾ vs ಆರ್‌ಸಿಬಿ, 2012
19 ಸಂಜು ಸಮ್ಸನ್ vs ಸಿಎಸ್‌ಕೆ, 2020 

ಹಾಫ್ ಸೆಂಚುರಿ ಬಳಿಕವೂ ಸಾಮ್ಸನ್ ಆರ್ಭಟ ಮುಂದುವರಿಯಿತು. 32 ಎಸೆತದಲ್ಲಿ 1 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿ 74 ರನ್ ಸಿಡಿಸಿದರು. 231.25 ಸ್ಟ್ರೈಕ್ ರೇಟ್‌ನಲ್ಲಿ ಸಾಮ್ಸನ್ ಬ್ಯಾಟ್ ಬೀಸಿದ್ದಾರೆ.