Asianet Suvarna News Asianet Suvarna News

IPL 2020: ಪ್ರಿಯಂ ಗರ್ಗ್ ಹಾಫ್ ಸೆಂಚುರಿ, ಚೆನ್ನೈಗೆ 165ರನ್ ಗುರಿ!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಅಂತಿಮ ಹಂತದಲ್ಲಿ ಪ್ರಿಯಂ ಗರ್ಗ್ ಹಾಗೂ ಅಭಿಷೇಕ್ ಶರ್ಮಾ ಹೋರಾಟ ಹೈದರಾಬಾದ್ ತಂಡದ ಕೈಹಿಡಿಯಿತು.

IPL 2020 priyam garg half century help srh to set 165 run target to CSK ckm
Author
Bengaluru, First Published Oct 2, 2020, 9:20 PM IST
  • Facebook
  • Twitter
  • Whatsapp

ದುಬೈ(ಅ.02): ಎರಡು ಸೋಲು ಎರಡೂ ತಂಡದ ನಿದ್ದೆಗೆಡಿಸಿತು. ಹೀಗಾಗಿ ಗೆಲ್ಲಲೇಬೇಕೆಂಬ ಛಲದಲ್ಲಿ ಕಣಕ್ಕಿಳಿದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕಠಿಣ ಹೋರಾಟ ನೀಡುತ್ತಿದೆ. ಪ್ರಿಯಂ ಗರ್ಗ್ ಹಾಗೂ ಅಭಿಷೇಕ್ ಶರ್ಮಾ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅಲ್ಪಮೊತ್ತದಿಂದ ಪಾರುಮಾಡಿದರು. ಸಿಎಸ್‌ಕೆ ವಿರುದ್ಧ ದಿಟ್ಟ ಹೋರಾಟ ನೀಡಿದ ಹೈದರಾಬಾದ್ 5 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜಾನಿ ಬೈರ್‌ಸ್ಟೋ ಶೂನ್ಯಕ್ಕೆ ಔಟಾದರು. ಬಳಿಕ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಳ್ಳುವ ಸೂಚನೆ ನೀಡಿತು. ಆದರೆ ಪಾಂಡೆ ವಿಕೆಟ್ ಪತನ ತಂಡದ ಆತಂಕ ಮತ್ತಷ್ಟು ಹೆಚ್ಚಿಸಿತು.

ಮನೀಶ್ ಪಾಂಡೆ 29 ರನ್ ಸಿಡಿಸಿ ಔಟಾದರು. ಇತ್ತ ಡೇವಿಡ್ ವಾರ್ನರ್ 28 ರನ್  ಸಿಡಿಸಿ ನಿರ್ಗಮಿಸಿದರು. ಕೇನ್ ವಿಲಿಯಮ್ಸನ್ ಕೇವಲ 9 ರನ್ ಸಿಡಿಸಿ ರನೌಟ್ ಆದರು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಪ್ರಿಯಂ ಗರ್ಗ್ ಹಾಗೂ ಅಭಿಷೇಕ್ ಶರ್ಮಾ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ಮೂಲಕ ಚೆನ್ನೈಗೆ ತಲೆನೋವಾದರು.

ಒತ್ತಡಕ್ಕೆ ಸಿಲುಕಿದ ಚೆನ್ನೈ ಸತತ 2 ಕ್ಯಾಚ್ ಕೈಚೆಲ್ಲಿತು. ಅಭಿಷೇಕ್ ಶರ್ಮಾ 31 ರನ್ ಸಿಡಿಸಿ ಔಟಾದರು. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟಿಗ ಅಬ್ದುಲ್ ಸಮಾದ್ ಜೊತೆ ಸೇರಿದ ಗರ್ಗ್ ಹೊಡಿ ಬಡಿ ಆಟಕ್ಕೆ ಮುಂದಾದರು. ಗರ್ಗ್ ಅಜೇಯ 51 ರನ್ ಸಿಡಿಸಿದರೆ, ಸಮದ್ ಅಜೇಯ 8 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿತು. 

Follow Us:
Download App:
  • android
  • ios