Asianet Suvarna News Asianet Suvarna News

ಹಾಲಿ ಚಾಂಪಿಯನ್ ಮುಂಬೈಗಿಂದು ಎಂ ಎಸ್ ಧೋನಿ ಪಡೆ ಸವಾಲು..!

ಶಾರ್ಜಾ ಮೈದಾನದಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ವೀಕರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 MS Dhoni Led CSK faces Mumbai Indians In Sharjah kvn
Author
Sharjah - United Arab Emirates, First Published Oct 23, 2020, 7:52 AM IST

ಶಾರ್ಜಾ(ಅ.23): ಸತತ ಸೋಲುಗಳಿಂದ ಹತಾಶೆಗೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಇಲ್ಲಿ ಶುಕ್ರವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿದೆ. 

ಧೋನಿ ಬಳಗ ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಚೆನ್ನೈ 10 ಪಂದ್ಯಗಳನ್ನಾಡಿದ್ದು 6 ಅಂಕಗಳಿಸಿ ಕೊನೆಯ ಸ್ಥಾನದಲ್ಲಿದೆ. ಉಳಿದ 4 ಪಂದ್ಯದಲ್ಲಿ ಚೆನ್ನೈ ಗೆದ್ದರು 14 ಅಂಕಗಳಿಸಲಿದ್ದು, ಪ್ಲೇ ಆಫ್‌ ಹಂತಕ್ಕೇರಲು ಪವಾಡ ನಡೆಯಬೇಕಿದೆ. 2018ರಲ್ಲಿ ಚಾಂಪಿಯನ್‌ ಆಗಿದ್ದ ಚೆನ್ನೈ, ಕಳೆದ ವರ್ಷ ರನ್ನರ್‌ ಅಪ್‌ ಆಗಿತ್ತು. ಈ ಆವೃತ್ತಿಯಲ್ಲಿ ಗುಂಪು ಹಂತದಲ್ಲೇ ಹೊರಬೀಳುತ್ತಿದೆ. 

IPL 2020: ಹೈದರಾಬಾದ್ ಪ್ಲೇ ಆಫ್ ಆಸೆ ಜೀವಂತ, ರಾಜಸ್ಥಾನಕ್ಕೆ ಆಘಾತ

ಐಪಿಎಲ್‌ ಇತಿಹಾಸದಲ್ಲೇ ಚೆನ್ನೈ ಇದೇ ಮೊದಲ ಬಾರಿ ಗುಂಪು ಹಂತದಲ್ಲಿ ನಿರ್ಗಮಿಸಿತ್ತಿರುವುದಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದಿದ್ದ ಚೆನ್ನೈ, ಮತ್ತೊಂದು ಜಯದ ವಿಶ್ವಾಸದಲ್ಲಿದೆ. ಇತ್ತ ಮುಂಬೈ, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆದ್ದು ಜಯದ ಲಯಕ್ಕೆ ಮರಳುವ ಉತ್ಸಾಹದಲ್ಲಿದೆ.

ಪಿಚ್‌ ರಿಪೋರ್ಟ್‌: ಪಂದ್ಯಗಳು ನಡೆದಂತೆ ಶಾರ್ಜಾ ಪಿಚ್‌ನಲ್ಲಿ ವೇಗ ಕುಂಠಿತಗೊಂಡಿದೆ. ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಪರದಾಡುತ್ತಿದ್ದಾರೆ. ಸ್ಪಿನ್ನರ್‌ಗಳು ವಿಕೆಟ್‌ ಕೀಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್: ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್ ಡಿಕಾಕ್‌, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್‌, ಕೃನಾಲ್ ಪಾಂಡ್ಯ‌, ಹಾರ್ದಿಕ್ ಪಾಂಡ್ಯ‌, ಕಿರಾನ್ ಪೊಲ್ಲಾರ್ಡ್‌, ನೇಥನ್ ಕೌಲ್ಟರ್‌ ನೈಲ್‌, ರಾಹುಲ್ ಚಹಾರ್‌, ಟ್ರೆಂಟ್ ಬೌಲ್ಟ್‌, ಜಸ್ಪ್ರೀತ್ ಬುಮ್ರಾ

ಚೆನ್ನೈ ಸೂಪರ್ ಕಿಂಗ್ಸ್: ಸ್ಯಾಮ್ ಕರ್ರನ್‌, ಫಾಫ್ ಡುಪ್ಲೆಸಿ, ಶೇನ್ ವಾಟ್ಸನ್‌, ಅಂಬಟಿ ರಾಯುಡು, ಎಂ ಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಕೇದಾರ್ ಜಾಧವ್‌, ದೀಪಕ್ ಚಹಾರ್‌, ಪೀಯೂಸ್ ಚಾವ್ಲಾ, ಶಾರ್ದೂಲ್ ಠಾಕೂರ್‌, ಜೋಸ್ ಹೇಜಲ್‌ವುಡ್‌.

ಸ್ಥಳ: ಶಾರ್ಜಾ
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Follow Us:
Download App:
  • android
  • ios