ಶಾರ್ಜಾ(ಅ.09): ಆರಂಭಿಕರ ವೈಫಲ್ಯ, ನಾಯಕನ ರನೌಟ್ ಸೇರಿದಂತೆ ದಿಗ್ಗಜರ ವಿಕೆಟ್ ಪತನದಿಂದ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಡೆಲ್ಲಿ ತಂಡಕ್ಕೆ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಹೋರಾಟ ನೆರವಾಯಿತು. ಈ ಮೂಲಕ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು.

ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲು ಸಾಧ್ಯವಾಗಿಲ್ಲ. 12 ರನ್ ಗಳಿಸುವಷ್ಟರಲ್ಲೇ ಡೆಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಧವನ್ ಕೇವಲ 5 ರನ್ ಸಿಡಿಸಿ ಔಟಾದರು. ಪೃಥ್ವಿ ಶಾ 19 ರನ್ ಸಿಡಿಸಿ ಔಟಾದರು.

ರಿಷಬ್ ಪಂತ್ ಕೂಡ ಅಬ್ಬರಿಸಲಿಲ್ಲ. ಕೇವಲ 5 ರನ್ ಸಿಡಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ 22 ರನ್ ಸಿಡಿಸಿ ಔಟಾದರು. ಮಾರ್ಕಸ್ ಸ್ಟೊಯ್ನಿಸ್ ಹೋರಾಟ ನೀಡಿದರು. 30 ಎಸೆತದಲ್ಲಿ 39 ರನ್ ಸಿಡಿಸಿ ಸ್ಟೊಯ್ನಿಸ್ ಔಟಾದರು.

ಶಿಮ್ರೊನ್ ಹೆಟ್ಮೆಯರ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡ ದಿಟ್ಟ ತಿರುಗೇಟು ನೀಡಿತು. ಹೆಟ್ಮೆಯರ್ 24 ಎಸೆತದಲ್ಲಿ 45 ರನ್ ಸಿಡಿಸಿ ಔಟಾದರು. ಹರ್ಶಲ್ ಪಟೇಲ್ 16 ಹಾಗೂ ಅಕ್ಸರ್ ಪಟೇಲ್ 17 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು.