ಅಬುದಾಬಿ(ಅ. 30)  ಯುನಿವರ್ಸ್   ಬಾಸ್ ಕ್ರಿಸ್ ಗೇಲ್ ಅಬ್ಬರಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಳಿದ ಪಂಜಾಬ್ ಇಪ್ಪತ್ತು ಓವರ್ ಗಳಲ್ಲಿ 185 ರನ್ ಗಳಿಸಿದೆ.

ಆರಂಭದಲ್ಲೆ ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಗೆ ಗೇಲ್ ಆಸರೆಯಾಗಿ ನಿಂತರು. ಕೊನೆ ಓವರ್ ತನಕ ಆಡಿದ ಗೇಲ್ ಕೇವಲ ಒಂದು ರನ್ ನಿಂದ ಶತಕ ವಂಚಿತರಾದರು.  ರನ್ ಗಳಿಸಿದರು. ಸತತ ಐದು ಗೆಲುವು ದಾಖಲಿಸಿರುವ ಪಂಜಾಬ್ ಗೆ ಇದು ಅತ್ಯಂತ ಪ್ರಮುಖ ಪಂದ್ಯ.

ಇನ್ನೊಂದು ಕಡೆ ರಾಜಸ್ಥಾನಕ್ಕೂ ಪ್ರಮುಖ ಪಂದ್ಯವಾಗಿದ್ದು ಬ್ಯಾಟಿಂಗ್ ಗೆ ನೆರವು ನೀಡುವ ಪಿಚ್ ನಲ್ಲಿ ರಾಜಸ್ಥಾನದ ದಾಂಢಿಗರು ಯಾವ ರೀತಿ ಅಬ್ಬರಿಸುತ್ತಾರೆ ಎಂದು ನೋಡಬೇಕು.  ಗೆಲುವಿಗೆ ರಾಜಸ್ಥಾನ  186  ರನ್ ಗಳಿಸಬೇಕಿದೆ.   ರಾಜಸ್ಥಾನದ ಕಳಪೆ ಕ್ಷೇತ್ರರಕ್ಷಣೆ ಪಂಜಾಬ್ ಗೆ ಲಾಭ ತಂದುಕೊಟ್ಟಿತು.