ದುಬೈ(ಆ.27): ಕಳೆದ ವಾರ ಯುಎಇ ತಲು​ಪಿದ ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ಹಾಗೂ ರಾಜ​ಸ್ಥಾನ ರಾಯಲ್ಸ್‌ ತಂಡದ ಆಟ​ಗಾ​ರರು ಬುಧ​ವಾರ ಅಭ್ಯಾಸ ಆರಂಭಿ​ಸಿ​ದರು. 

6 ದಿನ​ಗಳ ಹೋಟೆಲ್‌ ಕ್ವಾರಂಟೈನ್‌ ಮುಕ್ತಾ​ಯ​ಗೊ​ಳಿ​ಸಿದ ಆಟ​ಗಾ​ರರು, ಮೈದಾ​ನ​ಕ್ಕಿ​ಳಿದು ಬೆವರು ಹರಿ​ಸಿ​ದರು. ಮೊದಲ, 3ನೇ ಹಾಗೂ 5ನೇ ದಿನ​ದಂದು ಆಟ​ಗಾ​ರರು, ಸಹಾ​ಯಕ ಸಿಬ್ಬಂದಿಯ ಕೋವಿಡ್‌ ಪರೀಕ್ಷೆ ನಡೆ​ಸ​ಲಾ​ಗಿತ್ತು, ಎಲ್ಲರ ವರ​ದಿಯೂ ನೆಗೆಟಿವ್‌ ಬಂದಿದೆ ಎಂದು ಐಪಿ​ಎಲ್‌ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾರೆ.

ಇಂದಿ​ನಿಂದ ಆರ್‌ಸಿಬಿ ಅಭ್ಯಾಸ ಆರಂಭ

ದುಬೈ: ವಿರಾಟ್‌ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್ ಬೆಂಗ​ಳೂರು (ಆರ್‌ಸಿಬಿ) ತಂಡ ಗುರು​ವಾರದಿಂದ ಇಲ್ಲಿನ ಐಸಿಸಿ ಕ್ರಿಕೆಟ್‌ ಅಕಾ​ಡೆ​ಮಿ​ಯಲ್ಲಿ ಅಭ್ಯಾಸ ಆರಂಭಿ​ಸ​ಲಿದೆ. ಆ.21ರಂದು ದುಬೈಗೆ ಬಂದಿ​ಳಿ​ದಿದ್ದ ಆಟ​ಗಾ​ರರು, 6 ದಿನ​ಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳ​ಪ​ಟ್ಟಿ​ದ್ದರು. 

IPL ವೇಳಾಪಟ್ಟಿ ಬಿಡುಗಡೆ ತಡವಾಗುತ್ತಿರುವುದೇಕೆ? ಬಯಲಾಯ್ತು ಸೀಕ್ರೇಟ್

ಬುಧ​ವಾರ ಕ್ವಾರಂಟೈನ್‌ ಮುಕ್ತಾ​ಯ​ಗೊಂಡಿದೆ. ‘ಆ​ಟ​ಗಾ​ರರು ಕಳೆದ ಕೆಲ ತಿಂಗ​ಳು​ಗ​ಳನ್ನು ವಿವಿಧ ವಾತಾ​ವ​ರಣದಲ್ಲಿ ಕಳೆದಿದ್ದಾರೆ. ಹಲವು ಫಿಟ್ನೆಸ್‌ ವಿಧಾ​ನ​ಗ​ಳನ್ನು ಅನು​ಸ​ರಿ​ಸಿ​ದ್ದಾರೆ. ಹೀಗಾಗಿ ಏಕಾ​ಏಕಿ ಒಂದೇ ಮಾದ​ರಿಯ ಅಭ್ಯಾಸಕ್ಕೆ ಮುಂದಾ​ಗು​ವು​ದಿಲ್ಲ. ಎಲ್ಲ​ರಿಗೂ ಅನು​ಕೂ​ಲ​ವಾ​ಗು​ವಂತಹ ಶಿಬಿರವನ್ನು ಆಯೋ​ಜಿ​ಸ​ಲಾ​ಗು​ತ್ತಿದೆ. 3 ವಾರಗಳ ಅಭ್ಯಾಸ ಶಿಬಿರದೊಂದಿಗೆ ಟೂರ್ನಿಗೆ ಸಕಲ ಸಿದ್ಧತೆ ನಡೆ​ಸ​ಲಿ​ದ್ದೇವೆ’ ಎಂದು ತಂಡದ ಕ್ರಿಕೆಟ್‌ ವ್ಯವ​ಹಾರಗಳ ನಿರ್ದೇ​ಶಕ ಮೈಕ್‌ ಹೆಸನ್‌ ಹೇಳಿ​ದ್ದಾರೆ.