Asianet Suvarna News Asianet Suvarna News

IPL ವೇಳಾಪಟ್ಟಿ ಬಿಡುಗಡೆ ತಡವಾಗುತ್ತಿರುವುದೇಕೆ? ಬಯಲಾಯ್ತು ಸೀಕ್ರೇಟ್

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಮತ್ತೊಂದು ವಿಘ್ನ ಎದುರಾಗಿದೆ. ಹೀಗಾಗಿಯೇ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಹೊರಬೀಳುತ್ತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Corona Threat IPL 2020 Abu Dhabi riddle leads to delay in Schedules
Author
Abu Dhabi - United Arab Emirates, First Published Aug 27, 2020, 9:37 AM IST

ದುಬೈ(ಆ.27): ಐಪಿಎಲ್‌ 13ನೇ ಆವೃ​ತ್ತಿ ಆರಂಭಕ್ಕೆ ಕೇವಲ 3 ವಾರಗಳು ಮಾತ್ರ ಬಾಕಿ ಇದ್ದು, ಬಿಸಿ​ಸಿಐ ಇನ್ನೂ ವೇಳಾಪಟ್ಟಿ ಪ್ರಕಟಿಸಿಲ್ಲ. ಅಬು​ಧಾ​ಬಿ​ಯಲ್ಲಿ ಕೊರೋನಾ ಪ್ರಕ​ರಣಗಳು ಹೆಚ್ಚು​ತ್ತಿ​ರು​ವುದೇ ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರದಿ ಮಾಡಿದೆ. 

ಅಬುಭಾಬಿಯಲ್ಲಿ ಕೊರೋನಾ  ಪ್ರಕ​ರಣಗಳು ಹೆಚ್ಚುತ್ತಿ​ರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡ​ಳಿತ, ಯಾರೇ ಅಬು​ಧಾ​ಬಿಗೆ ಪ್ರವೇ​ಶಿ​ಸ​ಬೇ​ಕಿ​ದ್ದರೂ ಕಡ್ಡಾ​ಯ​ವಾಗಿ 48 ಗಂಟೆಗಳ ಹಿಂದೆ ಕೋವಿಡ್‌ ಪರೀಕ್ಷೆಗೆ ಒಳ​ಗಾಗಿ ನೆಗೆ​ಟಿವ್‌ ವರದಿ ಹೊಂದಿ​ರ​ಬೇ​ಕು ಎನ್ನು​ವ ಷರತ್ತು ವಿಧಿ​ಸಿದೆ. ಅಬು​ಧಾ​ಬಿ​ಯಲ್ಲಿ ಗ್ರೂಪ್‌ ಹಂತದ 21 ಹಾಗೂ ಪ್ಲೇ-ಆಫ್‌ನ ಕೆಲ ಪಂದ್ಯ​ಗ​ಳನ್ನು ನಡೆ​ಸಲು ಉದ್ದೇ​ಶಿ​ಸ​ಲಾ​ಗಿದ್ದು, ಹೊಸ ಷರ​ತ್ತಿ​ನಿಂದಾಗಿ ಬಿಸಿ​ಸಿಐ ವೇಳಾ​ಪಟ್ಟಿ ಸಿದ್ಧ​ಪ​ಡಿ​ಸಲು ತಡ​ವಾ​ಗುತ್ತಿದೆ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.

Corona Threat IPL 2020 Abu Dhabi riddle leads to delay in Schedules

ಕೆಲವು ದಿನಗಳ ಹಿಂದಷ್ಟೇ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಬ್ರಿಜೇಶ್ ಪಟೇಲ್ ಈ ವಾರಾಂತ್ಯದೊಳಗಾಗಿ ಸಂಪೂರ್ಣ ಐಪಿಎಲ್ ವೇಳಾಪಟ್ಟಿ ಪ್ರಕಟಿಸುವುದಾಗಿ ತಿಳಿಸಿದ್ದರು. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಆದರೆ ಇದುವರೆಗೂ ಸಂಪೂರ್ಣ ವೇಳಾಪಟ್ಟಿ ಮಾತ್ರ ಪ್ರಕಟಗೊಂಡಿಲ್ಲ.

ಐಪಿ​ಎಲ್‌ ವೇಳೆ 20,000 ಕೋವಿಡ್‌ ಪರೀಕ್ಷೆ

ದುಬೈ: 13ನೇ ಆವೃ​ತ್ತಿಯ ಐಪಿಎಲ್‌ ಟೂರ್ನಿ ವೇಳೆ 20000ಕ್ಕೂ ಹೆಚ್ಚು ಕೋವಿಡ್‌-19 ಪರೀಕ್ಷೆ ನಡೆ​ಸಲು ಉದ್ದೇ​ಶಿ​ಸಿ​ರುವ ಬಿಸಿ​ಸಿಐ, ಅಬು​ಧಾ​ಬಿ ಮೂಲದ ಆರೋಗ್ಯ ಸಂಸ್ಥೆಯೊಂದರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. 

IPL ಸಂಪೂರ್ಣ ವೇಳಾಪಟ್ಟಿ ಪ್ರಕಟ ಯಾವಾಗ..? ಬ್ರಿಜೇಶ್ ಪಟೇಲ್‌ ಕೊಟ್ರು ಸುಳಿವು

3 ತಿಂಗ​ಳು​ಗಳ ಕಾಲ ಐಪಿ​ಎಲ್‌ ನಡೆ​ಯ​ಲಿದ್ದು, ಪ್ರತಿ 5 ದಿನ​ಕ್ಕೊಮ್ಮೆ ಎಲ್ಲಾ ಆಟ​ಗಾ​ರರು, ಸಹಾ​ಯಕ ಸಿಬ್ಬಂದಿ, ಬಿಸಿ​ಸಿಐ ಅಧಿ​ಕಾ​ರಿ​ಗಳು ಸೇರಿ​ದಂತೆ ಟೂರ್ನಿ​ಯಲ್ಲಿ ಪಾಲ್ಗೊಂಡಿ​ರುವ ಪ್ರತಿ​ಯೊ​ಬ್ಬರ ಪರೀಕ್ಷೆ ನಡೆ​ಸಲು ಸಿದ್ಧತೆ ಮಾಡಿ​ಕೊ​ಳ್ಳ​ಲಾ​ಗುತ್ತಿದೆ ಎಂದು ಅಧಿ​ಕಾ​ರಿ​ಯೊ​ಬ್ಬ​ರು ತಿಳಿ​ಸಿ​ದ್ದಾರೆ.

Follow Us:
Download App:
  • android
  • ios