ಅಬು ಧಾಬಿ(ಅ.18): ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಓವರ್ ಪಂದ್ಯದಲ್ಲಿ ಕೆಕೆಆರ್ ಗೆಲುವು ದಾಖಲಿಸಿದೆ. 3 ರನ್ ಗುರಿ ಪಡೆದ ಕೆಕೆಆರ್ ಹರಸಾಹಸಪಟ್ಟು 4ನೇ ಎಸೆತದಲ್ಲಿ ಲೆಗ್‌ಬೈ ಮೂಲಕ ಗೆಲುವು ದಾಖಲಿಸಿತು. 

ಕೆಕೆಆರ್-ಹೈದರಾಬಾದ್ ಪಂದ್ಯ ರೋಚಕ ಟೈ; ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ...

ಕೋಲ್ಕತಾ ನೈಟ್ ರೈಡರ್ಸ್ 5 ವಿಕೆಟ್ ಕಳೆದುಕೊಂಡು 163 ರನ್ ಸಿಡಿಸಿತು. ಈ ಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಅಜೇಯ 47 ರನ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ  163 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು. 

ಫರ್ಗ್ಯುಸನ್ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಕ್ಲೀನ್ ಬೋಲ್ಡ್ ಆದರು. ನಂತರ ಬಂದ ಅಬ್ದುಲ್ ಸಮಾದ್ ಕೂಡ ವಿಕೆಟ್ ಒಪ್ಪಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಕೇವಲ 2 ರನ್ ಸಿಡಿಸಿತು. 

3 ರನ್ ಗುರಿ ಪಡೆದ ಕೆಕೆಆರ್ ತಂಡ, ರಶೀದ್ ಖಾನ್ ಬೌಲಿಂಗ್ ಎದುರಿಸಲ ಹರಹಾಸ ಪಟ್ಟಿತು. 3 ರನ್ ಗುರಿಗೆ 4 ಎಸೆತ ತೆಗೆದುಕೊಂಡಿತು. ಕೆಕೆಆರ್ ಗೆಲುವಿನೊಂದಿಗೆ ಇದೀಗ ಪ್ಲೇ ಆಫ್ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಿದೆ.