ಅಬುದಾಬಿ(ಅ. 07) ಪ್ರಮುಖ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾಗೆ ತಲೆಬಾಗಿದೆ. ಅತ್ಯುತ್ತಮ ಬೌಲಿಂಗ್ ಸಂಘಟನೆ ಮಾಡಿದ ನೈಟ್ ರೈಡರ್ಸ್ 10 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 167  ರನ್ ಕಲೆ ಹಾಕಿತ್ತು. ಭರ್ಜರಿ ಬ್ಯಾಟಿಂಗ್ ಮಾಡಿದ ರಾಹುಲ್ ತ್ರಿಪಾಠಿ 51 ಎಸೆತದಲ್ಲಿ 81 ರನ್ ಬಾರಿಸಿ ಕೊಡುಗೆ ನೀಡಿದರು.

ಮಂಕಡಿಂಗ್ ಬಿಡದ ಅಶ್ವಿನ್.. ಅಶ್ವಿನ್ ಕಾಂಟ್ರವರ್ಸಿ

168 ಚೇಸಿಂಗ್ ಗೆ ಇಳಿದ ಸಿಎಸ್‌ಕೆ ಆರಂಭ ಉತ್ತಮವಾಗಿಯೇ ಇತ್ತು. ಅಚ್ಚರಿಸಿದ ವಾಟ್ಸನ್ ಅರ್ಧಶತಕ ದಾಖಲಿಸಿದರು. ಆದರೆ ವಾಟ್ಸನ್ ವಿಕೆಟ್ ಒಪ್ಪಿಸಿದ ಮೇಲೆ ಸಿಎಸ್‌ಕೆ ರನ್ ಗಳಿಕೆ ನಿಧಾನವಾಗುತ್ತಾ ಹೋಯಿತು. ಮಹೇಂದ್ರ ಸಿಂಗ್ ಧೋನಿ ಅವರಿಂದಲೂ ಕೊಡುಗೆ ಬರಲಿಲ್ಲ. ಕೇದಾರ್ ಜಾಧವ್  12 ಚೆಂಡುಗಳಲ್ಲಿ ಕೇವಲ  7 ರನ್ ದಾಖಲಿಸಿದ್ದು ಚೆನ್ನೈಗೆ ಭಾರಿ ಹೊಡೆತ ನೀಡಿತು.

ಕೊನೆಯಲ್ಲಿ ಅದ್ಭುತ ಬೌಲಿಂಗ್ ಮಾಡಿದ ಸುನೀಲ್ ನರೇನ್ ಮತ್ತು ರಸಲ್ ಕೋಲ್ಕತ್ತಾಕ್ಕೆ ಕೈತಪ್ಪಿದ್ದ ಪಂದ್ಯವನ್ನು ತಂದುಕೊಟ್ಟರು.  ಹಿಂದಿನ ಪಂದ್ಯದಲ್ಲಿ ಗೆದ್ದು ಬೀಗಿದ್ದ ಸಿಎಸ್‌ಕೆಗೆ ಕೋಲ್ಕತ್ತಾ ಆಘಾತ ನೀಡಿತು.