ದುಬೈ(ಅ.20): ಐಪಿಎಲ್‌ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಡಬಲ್‌ ಸೂಪರ್‌ ಓವರಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮಣಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಇಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿದೆ. 

3ನೇ ಜಯದೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿರುವ ಪಂಜಾಬ್‌ ಉಳಿದ 5 ಪಂದ್ಯದಲ್ಲಿ ಗೆದ್ದರೇ ಮಾತ್ರ ಪ್ಲೇ ಆಫ್‌ ಹಂತ ಉಳಿಸಿಕೊಳ್ಳಲಿದೆ. ಇನ್ನು 7 ಗೆಲುವಿನೊಂದಿಗೆ 14 ಅಂಕಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ ಹಂತದ ಸಮೀಪದಲ್ಲಿದೆ. ಪಂಜಾಬ್‌ ವಿರುದ್ಧ ಗೆದ್ದು ಮೊದಲ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಯೋಚನೆಯಲ್ಲಿ ಡೆಲ್ಲಿ ತಂಡವಿದೆ.

ರಾಜಸ್ಥಾನ ವಿರುದ್ಧ ಚೆನ್ನೈಗೆ ಸೋಲು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ!

ಇನ್ನು ಕಳೆದ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಎರಡೆರಡು ಸೂಪರ್ ಓವರ್ ಹೋರಾಟದಲ್ಲಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಕೆ.ಎಲ್ ರಾಹುಲ್ ಪಡೆ, ಇಂದು ಕೂಡಾ ಮತ್ತದೇ ಪ್ರದರ್ಶನ ತೋರುವ ಉತ್ಸಾಹದಲ್ಲಿದೆ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್ ಹಾಗೂ ಪೂರನ್‌ ಜವಾಬ್ದಾರಿಯರಿತು ಬ್ಯಾಟಿಂಗ್ ಮಾಡಬೇಕಾಗಿದೆ. 

ಪಿಚ್‌ ರಿಪೋರ್ಟ್‌: ದುಬೈನ ಪಿಚ್‌ ನಿಧಾನಗತಿಯಲ್ಲಿರಲಿದೆ. ಇಲ್ಲಿನ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 170 ರಿಂದ 180 ಆಗಿದೆ. ಪಂದ್ಯದಲ್ಲಿ ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಪೃಥ್ವಿ ಶಾ, ಶಿಖರ್ ಧವನ್‌, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯ್ನಿಸ್‌, ಅಲೆಕ್ಸ್ ಕ್ಯಾರಿ‌, ಅಕ್ಷರ್ ಪಟೇಲ್‌, ಆರ್‌. ಅಶ್ವಿನ್‌, ತುಷಾರ್‌ ದೇಶ್‌ಪಾಂಡೆ, ಕಗಿಸೊ ರಬಾಡ, ಏನ್ರಿಚ್‌ ನೋಕಿಯೆ.

ಪಂಜಾಬ್‌: ಕೆ ಎಲ್ ರಾಹುಲ್‌ (ನಾಯಕ), ಮಯಾಂಕ್ ಅಗರ್‌ವಾಲ್‌, ಕ್ರಿಸ್ ಗೇಲ್‌, ನಿಕೋಲಸ್ ಪೂರನ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ದೀಪಕ್ ಹೂಡಾ, ಕ್ರಿಸ್ ಜೋರ್ಡನ್‌, ಮುರುಗನ್ ಅಶ್ವಿನ್‌, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಆರ್ಶ್‌ದೀಪ್ ಸಿಂಗ್‌.

ಸ್ಥಳ: ದುಬೈ
ಆರಂಭ: ರಾತ್ರಿ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್