ದುಬೈ(ನ.01): ಪ್ಲೇ-ಆಫ್‌ಗೇರುವ ಕನಸು ಕಾಣು​ತ್ತಿ​ರುವ ರಾಜ​ಸ್ಥಾನ ರಾಯಲ್ಸ್‌ ಹಾಗೂ ಕೋಲ್ಕತ ನೈಟ್‌ರೈಡ​ರ್ಸ್ ಭಾನು​ವಾರ ಇಲ್ಲಿ ಮುಖಾ​ಮುಖಿ​ಯಾ​ಗ​ಲಿದ್ದು, ಸೋಲುವ ತಂಡ ಟೂರ್ನಿ​ಯಿಂದ ಹೊರ​ಬೀ​ಳ​ಲಿದೆ. 

ರಾಜಸ್ಥಾನ-ಕೋಲ್ಕತ ನಡುವಿನ ಗೆಲ್ಲುವ ತಂಡ ಪ್ಲೇ-ಆಫ್‌ ಪ್ರವೇ​ಶಿ​ಸ​ಬೇ​ಕಿ​ದ್ದರೆ ಉಳಿದ ಪಂದ್ಯ​ಗಳ ಫಲಿ​ತಾಂಶ ತನ್ನ ಪರವಾಗಿ ಬರು​ವಂತೆ ಬೇಡಿ​ಕೊ​ಳ್ಳ​ಬೇ​ಕಿದೆ. ರಾಯಲ್ಸ್‌ ತನ್ನ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ರನ್ನು ನೆಚ್ಚಿ​ಕೊಂಡಿ​ದ್ದರೆ, ಕೆಕೆ​ಆರ್‌ ತನ್ನ ನಾಯಕ ಇಯಾನ್‌ ಮೊರ್ಗನ್‌ ಮೇಲೆ ಅವ​ಲಂಬಿತಗೊಂಡಿದೆ.

ಚೆನ್ನೈ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಪಂಜಾಬ್

ಸದ್ಯ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ 13 ಪಂದ್ಯಗಳನ್ನಾಡಿದ್ದು, 6  ಗೆಲುವು ಹಾಗೂ 7 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಕೋಲ್ಕತ ನೈಟ್‌ ರೈಡರ್ಸ್ ತಂಡ ಕೂಡಾ 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಸೂಪರ್ ಸಂಡೇಯ ಎರಡನೇ ಪಂದ್ಯ ಕೂಡಾ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆಯಿದೆ.

ಪಿಚ್‌ ರಿಪೋರ್ಟ್‌: ಹಿಂದಿ​ನ ಪಂದ್ಯ​ದ​ಲ್ಲಿ ಪಿಚ್‌ ನಿಧಾ​ನ​ಗ​ತಿಯಲ್ಲಿತ್ತು. ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ದೊರೆ​ತಿತ್ತು. ಮೊದಲು ಬೌಲ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಕೆಕೆ​ಆರ್‌: ಶುಭ್‌ಮನ್ ಗಿಲ್‌, ನಿತೀಶ್ ರಾಣಾ, ಸುನಿಲ್ ನರೇನ್‌, ರಿಂಕು ಸಿಂಗ್, ಇಯಾನ್ ಮಾರ್ಗನ್‌, ದಿನೇಶ್ ಕಾರ್ತಿಕ್‌, ರಾಹುಲ್ ತ್ರಿಪಾಠಿ, ಕಮ್ಲೇಶ್ ನಾಗರಕೋಟಿ‌, ಪ್ಯಾಟ್ ಕಮಿನ್ಸ್‌, ಲಾಕಿ ಫಗ್ರ್ಯೂ​ಸನ್‌, ವರುಣ್ ಚಕ್ರವರ್ತಿ‌.

ರಾಜ​ಸ್ಥಾ​ನ: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್‌, ಸಂಜು ಸ್ಯಾಮ್ಸನ್‌, ಸ್ಟೀವ್ ಸ್ಮಿತ್‌, ಜೋಸ್ ಬಟ್ಲರ್‌, ರಿಯಾನ್ ಪರಾಗ್‌, ರಾಹುಲ್ ತೆವಾ​ಟಿಯಾ, ಜೋಫ್ರಾ ಆರ್ಚರ್‌, ಶ್ರೇಯಸ್ ಗೋಪಾಲ್‌, ಕಾರ್ತಿಕ್ ತ್ಯಾಗಿ, ವರುಣ್ ಆ್ಯರೋನ್‌.

ಸ್ಥಳ: ದುಬೈ
ಸಮಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್