ಅಬು​ಧಾ​ಬಿ(ನ.01): ಐಪಿಎಲ್‌ ಪ್ಲೇ-ಆಫ್‌ ಲೆಕ್ಕಾ​ಚಾರ ರೋಚ​ಕ​ಗೊ​ಳ್ಳು​ತ್ತಿದ್ದು, ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ ತಂಡದ ಭವಿಷ್ಯ ಭಾನು​ವಾರ ನಿರ್ಧಾರವಾಗ​ಲಿದೆ. 

ಈಗಾ​ಗಲೇ ಪ್ಲೇ-ಆಫ್‌ ರೇಸ್‌ನಿಂದ ಹೊರ​ಬಿ​ದ್ದಿ​ರುವ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣ​ಸ​ಲಿರುವ ಪಂಜಾಬ್‌, ಗೆಲು​ವಿನ ನಿರೀಕ್ಷೆಯಲ್ಲಿದೆ. ಕಳೆದ ಪಂದ್ಯ​ದಲ್ಲಿ ರಾಜ​ಸ್ಥಾನ ವಿರುದ್ಧ ಸೋಲುಂಡಿದ್ದು ಕೆ.ಎಲ್‌.ರಾ​ಹುಲ್‌ ಪಡೆಗೆ ಹಿನ್ನಡೆ ಉಂಟು ಮಾಡಿದೆ. ಈ ಪಂದ್ಯ​ದಲ್ಲಿ ಜಯಿ​ಸಿ​ದರೂ, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗು​ವು​ದಿಲ್ಲ. ಇತರ ತಂಡಗಳ ಫಲಿ​ತಾಂಶ​ಕ್ಕಾಗಿ ಕಾಯ​ಬೇ​ಕಾ​ಗು​ತ್ತದೆ.

ಸದ್ಯ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 13 ಪಂದ್ಯಗಳನ್ನಾಡಿದ್ದು, 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೆ, ಮತ್ತೊಂದೆಡೆ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳನ್ನಾಡಿದ್ದು 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿದ ಆರ್‌ಸಿಬಿ...!

ಪಿಚ್‌ ರಿಪೋರ್ಟ್‌: ಹಿಂದಿನ ಪಂದ್ಯ​ದಲ್ಲಿ ದೊಡ್ಡ ಮೊತ್ತ ದಾಖ​ಲಾ​ಗಿತ್ತು. ಮೊದಲು ಫೀಲ್ಡ್‌ ಮಾಡುವ ತಂಡಕ್ಕೆ ಗೆಲ್ಲುವ ಅವ​ಕಾಶ ಹೆಚ್ಚಿ​ರ​ಲಿದೆ. ಟಾಸ್‌ ಪ್ರಮುಖ ಪಾತ್ರ ವಹಿ​ಸ​ಲಿದೆ.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಕಿಂಗ್ಸ್ ಇಲೆವನ್ ಪಂಜಾಬ್‌: ಕೆ ಎಲ್ ರಾಹುಲ್‌, ಮನ್‌ದೀಪ್ ಸಿಂಗ್‌, ಕ್ರಿಸ್ ಗೇಲ್‌, ನಿಕೋಲಸ್ ಪೂರನ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ದೀಪಕ್ ಹೂಡಾ, ಕ್ರಿಸ್ ಜೋರ್ಡನ್‌, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಮುರುಗನ್ ಅಶ್ವಿನ್‌, ಅಶ್‌ರ್‍ದೀಪ್ ಸಿಂಗ್‌.

ಚೆನ್ನೈ ಸೂಪರ್ ಕಿಂಗ್ಸ್: ಋುತು​ರಾಜ್‌ ಗಾಯಕ್ವಾಡ್, ಶೇನ್ ವ್ಯಾಟ್ಸನ್‌, ಅಂಬಟಿ ರಾಯುಡು, ಎಂ ಎಸ್ ಧೋನಿ, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್‌, ಮಿಚೆಲ್ ಸ್ಯಾಂಟ್ನರ್‌, ಕರಣ್ ಶರ್ಮಾ‍, ದೀಪಕ್ ಚಹರ್‌, ಶಾರ್ದೂಲ್ ಠಾಕೂರ್‌, ಲುಂಗಿ ಎನ್‌ಗಿಡಿ.

ಸ್ಥಳ: ಅಬು​ಧಾಬಿ,

ಪಂದ್ಯ: ಮಧ್ಯಾಹ್ನ 3.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್