Asianet Suvarna News Asianet Suvarna News

IPL 2020: ಕನ್ನಡಿಗರಿಂದ ತುಂಬಿರುವ ಪಂಜಾಬ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು!

  • 13ನೇ ಆವೃತ್ತಿ 2ನೇ ಲೀಗ್ ಪಂದ್ಯದಲ್ಲಿ KXIP ಹಾಗೂ ಡೆಲ್ಲಿ ಮುಖಾಮುಖಿ
  • ನಾಯಕ, ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡಕ್ಕೆ
  • ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನದ ಪಂಜಾಬ್ ತಂಡ
  • ರಿಕಿ ಪಾಂಟಿಂಗ್ ಕೋಚಿಂಗ್‌ನಿಂದ ಮತ್ತಷ್ಟು ಬಲಿಷ್ಠವಾಗಿದೆ ಡೆಲ್ಲಿ
IPL 2020 Kings XI Punjab face Delhi capitals challenge in 2nd league match dubai
Author
Bengaluru, First Published Sep 20, 2020, 2:41 PM IST

ದುಬೈ(ಸೆ.20): ಐಪಿಎಲ್‌ 13ನೇ ಆವೃತ್ತಿಗೆ ಭರ್ಜರಿ ಆರಂಭ ಸಿಕ್ಕಿದ್ದು, ಭಾನುವಾರ ಟೂರ್ನಿಯ 2ನೇ ಪಂದ್ಯದಲ್ಲಿ ಕನ್ನಡಿಗರಿಂದಲೇ ಕೂಡಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಯುವ ಹಾಗೂ ಅನುಭ ಆಟಗಾರರೊಂದಿಗೆ ಸಮತೋಲನ ಕಂಡುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಲಿವೆ.

IPL 2020: ಕಪ್ ಗೆದ್ದು ಗುರು ಕಾಣಿಕೆ ನೀಡ್ತಾರಾ ಕೆ.ಎಲ್. ರಾಹುಲ್..?

ಕರ್ನಾಟಕದ ತಾರಾ ಆಟಗಾರ ಕೆ.ಎಲ್‌.ರಾಹುಲ್‌, ಇದೇ ಮೊದಲ ಬಾರಿಗೆ ಐಪಿಎಲ್‌ ತಂಡ ಮುನ್ನಡೆಸಲಿದ್ದು, ಅವರ ನಾಯಕತ್ವದಲ್ಲಿ ಕಿಂಗ್ಸ್‌ ಇಲೆವೆನ್‌ ಚೊಚ್ಚಲ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ. ತಂಡಕ್ಕೆ ಟೀಂ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ಅನಿಲ್‌ ಕುಂಬ್ಳೆ ಕೋಚ್‌ ಆಗಿದ್ದಾರೆ. ರಾಹುಲ್‌ಗೆ ಟಿ20 ಕ್ರಿಕೆಟ್‌ನ ಯೂನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌, ಕನ್ನಡಿಗರಾದ ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌, ಕೆ.ಗೌತಮ್‌, ಜೆ.ಸುಚಿತ್‌ ಸೇರಿದಂತೆ ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌, ಭಾರತದ ವೇಗಿ ಮೊಹಮದ್‌ ಶಮಿ, ಅಂಡರ್‌-19 ವಿಶ್ವಕಪ್‌ನಲ್ಲಿ ಮಿಂಚಿದ್ದ ಲೆಗ್‌ ಸ್ಪಿನ್ನರ್‌ ರವಿ ಬಿಶ್ನೋಯ್‌ ಸಾಥ್‌ ನೀಡಲಿದ್ದಾರೆ.

ಈ ಸಲ ಐಪಿಎಲ್ ಆಡಲಿದ್ದಾರೆ ಒಂದು ಡಜನ್ ಕನ್ನಡಿಗರು..!

ಮತ್ತೊಂದೆಡೆ ಆಸ್ಪ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್‌ ಮಾರ್ಗದರ್ಶನದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಅನುಭಗಳಾದ ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಆರ್‌.ಅಶ್ವಿನ್‌, ಇಶಾಂತ್‌ ಶರ್ಮಾ, ಅಮಿತ್‌ ಮಿಶ್ರಾ ಜೊತೆಗೆ ಯುವ ತಾರೆಗಳಾದ ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಪೃಥ್ವಿ ಶಾ, ಶಿಮ್ರೊನ್‌ ಹೆಟ್ಮೇಯರ್‌ ಇದ್ದಾರೆ. ಸಮಬಲರ ನಡುವೆ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.

ಒಟ್ಟು ಮುಖಾಮುಖಿ: 24
ಪಂಜಾಬ್‌: 14
ಡೆಲ್ಲಿ: 10

ಪ್ರಾಬಲ್ಯ
ಗೇಲ್‌, ರಾಹುಲ್‌ ಉಪಸ್ಥಿತಿ
ಯುಎಇನಲ್ಲಿ ಮ್ಯಾಕ್ಸಿ ಉತ್ತಮ ದಾಖಲೆ
ಉತ್ತಮ ಸ್ಪಿನ್ನರ್‌ಗಳ ಬಲ
ಅತ್ಯುತ್ತಮ ಮೇಲ್ಕ್ರಮಾಂಕ
ವೇಗಿ ರಬಾಡ ತಂಡದ ಬಲ
ಅನುಭ ಸ್ಪಿನ್ನರ್‌ ಮಿಶ್ರಾ ಉಪಸ್ಥಿತಿ

ದೌರ್ಬಲ್ಯ
3ನೇ ವೇಗಿಯ ಕೊರತೆ
ರಾಹುಲ್‌ಗೆ ನಾಯಕತ್ವದ ಅನುಭವಲ್ಲ
ಜೊರ್ಡನ್‌ ದುಬಾರಿಯಾಗುವ ಆತಂಕ
ಬ್ಯಾಟಿಂಗ್‌ ಕ್ರಮಾಂಕದಲ್ಲಿ ಗೊಂದಲ
ಆಲ್ರೌಂಡರ್‌ಗಳ ಕೊರತೆ
ಭಾರತೀಯ ವೇಗಿಯ ಕೊರತೆ

ಪಂದ್ಯ ಆರಂಭ: ಸಂಜೆ 7.30ಕ್ಕೆ

Follow Us:
Download App:
  • android
  • ios