Asianet Suvarna News Asianet Suvarna News

IPL 2020: ಬೈರ್‌ಸ್ಟೋ, ವಾರ್ನರ್ ಅಬ್ಬರ, ಪಂಜಾಬ್‌ಗೆ ಬೃಹತ್ ಟಾರ್ಗೆಟ್!

  • ಜಾನಿ ಬೈರ್‌ಸ್ಟೋ ಹಾಗೂ ಡೇವಿಡ್ ವಾರ್ನರ್ ಅರ್ಧಶತಕ
  • ಪಂಜಾಬ್ ತಂಡಕ್ಕೆ 202 ರನ್ ಟಾರ್ಗೆಟ್
IPL 2020 Jonny Bairstow help srh to set 202 run target to kxip ckm
Author
Bengaluru, First Published Oct 8, 2020, 9:30 PM IST
  • Facebook
  • Twitter
  • Whatsapp

ದುಬೈ(ಅ.08): ಜಾನಿ ಬೈರ್‌ಸ್ಟೋ ಸ್ಫೋಟಕ ಬ್ಯಾಟಿಂಗ್ ಮೂಲಕ 97 ರನ್  ಹಾಗೂ ನಾಯಕ ಡೇವಿಡ್ ವಾರ್ನರ್ ಸಿಡಿಸಿದ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ 201 ರನ್ ಸಿಡಿಸಿದೆ. ಇದೀಗ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಪಂಜಾಬ್ ಈ ಮೊತ್ತ ಚೇಸ್ ಮಾಡುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಹೈದರಾಬಾದ್ ತಂಡಕ್ಕೆ ದಾಖಲೆಯ ಆರಂಭ ಸಿಕ್ಕಿತು. ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಸ್ಫೋಟಕ ಬ್ಯಾಟಿಂಗ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮತ್ತೆ ತಲೆನೋವಾಯಿತು. ಮೊದಲ ವಿಕೆಟ್‌ಗೆ ಈ ಜೋಡಿ ದಾಖಲೆಯ 160 ರನ್ ಜೊತೆಯಾಟ ನೀಡಿತು. 

ವಾರ್ನರ್ 52 ರನ್ ಸಿಡಿಸಿ ಔಟಾದರು. ಜಾನಿ ಬೈರ್‌ಸ್ಟೋ 97 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು. ಇದು ಜಾನಿ ಬೈರ್‌ಸ್ಟೋ ಹೈದರಾಬಾದ್ ಪರ ಸಿಡಿಸಿದ 2ನೇ ಗರಿಷ್ಠ ಮೊತ್ತವಾಗಿದೆ. 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 114 ರನ್ ಸಿಡಿಸಿದ್ದರು.

ಆರಂಭಿಕರ ವಿಕೆಟ್ ಪತನದ ನಂತರ ಸನ್‌ರೈಸರ್ಸ್ ಹೈದರಾಬಾದ್ ಅಬ್ಬರಿಸಿಲ್ಲ. ಬಹುಬೇಗನೆ ವಿಕೆಟ್ ಕಳೆದುಕೊಂಡಿತು. ಬ್ಯಾಟಿಂಗ್ ಆರ್ಡರ್ನಲ್ಲಿ ಬಡ್ತಿ ಪಡೆದ ಅಬ್ದುಲ್ ಸಮಾದ್ 8 ರನ್ ಸಿಡಿಸಿ ಔಟಾದರು. ಇನ್ನು ಮನೀಶ್ ಪಾಂಡೆ 1 ರನ್ ಸಿಡಿಸಿ ಔಟಾದರು.  ಪ್ರಿಯಂ ಗರ್ಗ್ ಅಬ್ಬರಿಸಲಿಲ್ಲ.

ಅಭಿಷೇಕ್ ಶರ್ಮಾ 12ರನ್ ಸಿಡಿಸಿದರು. ಇನ್ನು ಕೇನ್ ವಿಲಿಯಮ್ಸನ್ ಅಜೇಯ 20 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿತು. 

Follow Us:
Download App:
  • android
  • ios