Asianet Suvarna News Asianet Suvarna News

IPL 2020 ಸಂಪೂರ್ಣ ವೇಳಾಪಟ್ಟಿ ಕೆಲವೇ ಗಂಟೆಗಳಲ್ಲಿ ರಿಲೀಸ್..?

ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿದ್ದರೂ ಬಿಸಿಸಿಐ ಸಂಪೂರ್ಣ ವೇಳಾಪಟ್ಟಿ ಇನ್ನೂ ಪ್ರಕಟಿಸಿಲ್ಲ. ಇದರ ಬೆನ್ನಲ್ಲೇ ಇನ್ನು ಕೆಲವೇ ಗಂಟೆಗಳಲ್ಲಿ ಐಪಿಎಲ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬೀಳಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

IPL 2020 Full schedule to be announced by BCCI by Tuesday evening or Friday
Author
New Delhi, First Published Sep 3, 2020, 4:33 PM IST

ನವದೆಹಲಿ(ಸೆ.03): ಹಲವು ಸರ್ಕಸ್‌ಗಳ ಬಳಿಕ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಗೊಂಡಿದೆ. ಟೂರ್ನಿ ಆರಂಭ ಹಾಗೂ ಫೈನಲ್‌ ದಿನಾಂಕ ನಿಗದಿಯಾಗಿದ್ದರೂ ಇದುವರೆಗೂ ಬಿಸಿಸಿಐ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಚೆನ್ನೈ ಸೂಪರ್‌ ಕಿಂಗ್ಸ್ ಪಾಳಯದಲ್ಲಿ ಕೊರೋನಾತಂಕ ಇರುವುದರಿಂದ ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗುತ್ತಿಲ್ಲ ಎನ್ನಲಾಗಿದೆ.

ಇದೀಗ ವೇಳಾಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಟೈಮ್ಸ್‌ನೌ ನ್ಯೂಸ್.ಕಾಂ ವರದಿಯ ಪ್ರಕಾರ ಇಂದು(ಸೆ.03) ಸಂಜೆ ಇಲ್ಲವೇ ನಾಳೆ ಅಂದರೆ ಶುಕ್ರವಾರದೊಳಗಾಗಿ 2020ನೇ ಸಾಲಿನ ಐಪಿಎಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೊರಬೀಳಲಿದೆ ಎಂದು ವರದಿ ಮಾಡಿದೆ.

ಈ ಮೊದಲೇ ನಿರ್ಣಯವಾದಂತೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಏಪ್ರಿಲ್‌ 15ರವರೆಗೆ ಮುಂದೂಡಲಾಗಿತ್ತು. ಆದರೆ ಕೊರೋನಾ ನಿಯಂತ್ರಣಕ್ಕೆ ಬಾರದೇ ಇದ್ದಿದ್ದರಿಂದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಠಾವಧಿಗೆ ಮುಂದೂಡಲಾಯಿತು. ಕೆಲವು ತಿಂಗಳುಗಳ ಬಳಿಕ ಐಸಿಸಿ ಕೂಡಾ ಟಿ20 ವಿಶ್ವಕಪ್ ಮುಂದೂಡಲು ತೀರ್ಮಾನಿಸಿದ್ದರಿಂದ ಬಿಸಿಸಿಐ ಕೊನೆಗೂ ಈ ಬಾರಿ ಐಪಿಎಲ್ ಆಯೋಜಿಸಲು ಸಜ್ಜಾಗಿಯಿತು.

ಐಪಿಎಲ್ 2020: ಡೆಲ್ಲಿ ಯುವ ನಾಯಕ ಶ್ರೇಯಸ್ ಅಯ್ಯರ್ ಗುಣಗಾನ ಮಾಡಿದ ಅಶ್ವಿನ್

ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುದರಿಂದ ಬಿಸಿಸಿಐ ಮಿಲಿಯನ್ ಡಾಲರ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಿದೆ. ಯುಎಇನ ಮೂರು ಸ್ಟೇಡಿಯಂಗಳಲ್ಲಿ ಐಪಿಎಲ್ ಟೂರ್ನಿ ಜರುಗಲಿದೆ.

Follow Us:
Download App:
  • android
  • ios