ಶಾರ್ಜಾ(ಅ.17) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಿಟ್ಟ ಬ್ಯಾಟಿಂಗ್ ಪ್ರದರ್ಶ ನೀಡಿದೆ. ಸ್ಯಾಮ್ ಕುರನ್, ನಾಯಕ ಎಂ.ಎಸ್.ಧೋನಿ ಬಹುಬೇಗನೆ ಔಟಾದರೂ, ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಕಳೆದುಕೊಂಡು 179 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಚೆನ್ನೈ ಆರಂಭದಲ್ಲೇ ಸ್ಯಾಮ್ ಕುರನ್ ವಿಕೆಟ್ ಕಳೆದುಕೊಂಡಿತು. ಆದರೆ ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಹೋರಾಟದಿಂದ ಚೆನ್ನೈ ಚೇತರಿಸಿಕೊಂಡಿದು. ವ್ಯಾಟ್ಸನ್ 36 ರನ್ ಸಿಡಿಸಿ ಔಟಾದರು.

ಫಾಫ್ ಡುಪ್ಲೆಸಿಸ್ ದಿಟ್ಟ ಹೋರಾಟದ ಮೂಲಕ 58 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಅಂಬಾಟಿ ರಾಯುಡು ಅಜೇಯ 45 ರನ್ ಕಾಣಿಕೆ ನೀಡಿದರು. ಆದರೆ ನಾಯಕ ಎಂ.ಎಸ್.ಧೋನಿ ಕೇವಲ 3 ರನ್ ಸಿಡಿಸಿ ನಿರಾಸೆ ಮೂಡಿಸಿದರು.

ರವೀಂದ್ರ ಜಡೇಜಾ ಅಜೇಯ 33 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 4 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿದೆ.