Asianet Suvarna News Asianet Suvarna News

IPL 2020: ಡೆಲ್ಲಿ ದಾಳಿಗೆ ತತ್ತರಿಸಿದ RCB,ಕೊಹ್ಲಿ ಪಡೆಗೆ ಸೋಲಿನ ಶಾಕ್!

ಗೆಲುವಿನ ಓಟ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಬ್ರೇಕ್ ಹಾಕಿದೆ. ಬಲಿಷ್ಠ ತಂಡಗಳನ್ನೇ ಬಗ್ಗು ಬಡಿದು ಸಾಗುತ್ತಿದ್ದ ಕೊಹ್ಲಿ ಪಡೆ, ಡಿಲ್ಲಿ ವಿರುದ್ಧ ಸೋಲು ಅನುಭವಿಸಿದೆ.

IPL 2020 Delhi Capitals won by 59 runs against RCB in Dubai ckm
Author
Bengaluru, First Published Oct 5, 2020, 11:11 PM IST
  • Facebook
  • Twitter
  • Whatsapp

ದುಬೈ(ಅ.05): ಪ್ರತಿ ಪಂದ್ಯದಲ್ಲಿ ಅಬ್ಬರಿಸಿದ ದೇವದತ್ ಪಡಿಕ್ಕಲ್ ನಿರಾಸೆ ಮೂಡಿಸಿದರೆ, ಫಿಂಚ್ ಹಾಗೂ ಎಬಿಡಿ ಸಾಥ್ ನೀಡಲಿಲ್ಲ. ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ಸಾಕಾಗಲಿಲ್ಲ. ಪರಿಣಾಮ ಡೆಲ್ಲಿ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿಗೆ ಶರಣಾಗಿದೆ. 

197 ರನ್ ಟಾರ್ಗೆಟ್, ಆರ್‌ಸಿಬಿ ತಂಡದ ಇದ್ದ ಫಾರ್ಮ್‌ಗೆ ಬೃಹತ್ ಮೊತ್ತವೇನು ಆಗಿರಲಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಾಯಕ ವಿರಾಟ್ ಕೊಹ್ಲಿ ಹೊರತು ಪಡಿಸಿದರೆ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. 20 ರನ್‌ಗಳಿಸುವಷ್ಟರಲ್ಲೇ ಆರ್‌ಸಿಬಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ದೇವದತ್ ಪಡಿಕ್ಕಲ್  4 ರನ್ ಸಿಡಿಸ ನಿರ್ಗಮಿಸಿದರು.

ಆ್ಯರೋನ್ ಫಿಂಚ್ 13 ರನ್ ಸಿಡಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಹೋರಾಟ ಆರಂಭಿಸಿದರು. ಆದರೆ ಎಬಿ ಡಿವಿಲಿಯರ್ಸ್, ಮೊಯಿನ್ ಆಲಿಯಿಂದ ಉತ್ತಮ ಸಾಥ್ ಸಿಗಲಿಲ್ಲ. ಎಬಿ 9 ರನ್ ಸಿಡಿಸಿ ಔಟಾದರೆ, ಮೊಯಿನ್ ಆಲಿ 11 ರನ್ ಸಿಡಿಸಿ ನಿರ್ಗಮಿಸಿದರು. ಏಕಾಂಗಿ ಹೋರಾಟ ನೀಡಿದ ವಿರಾಟ್ ಕೊಹ್ಲಿ 43 ರನ್ ಸಿಡಿಸಿ ಐಟಾದರು.

ಕೊಹ್ಲಿ ವಿಕೆಟ್ ಪತನದ ಬೆನ್ನಲ್ಲೇ ಆರ್‌ಸಿಬಿ ಸೋಲಿನ ಸುಳಿಗೆ ಸಿಲುಕಿತು. ವಾಶಿಂಗ್ಟನ್ ಸುಂದರ್ 17 ರನ್ ಸಿಡಿಸಿ ಔಟಾದರು. ಶಿವಂ ದುಬ 11 ರನ್ ಸಿಡಿಸಿ ನಿರ್ಗಮಿಸಿದರು. ಇಸ್ರು ಉದಾನ, ನವದೀಪ್ ಸೈನಿಯಿಂದ ಪಂದ್ಯ ಗೆಲ್ಲಿಸುವುದು ಅಸಾಧ್ಯವಾಯಿತು. ಅಂತಿಮವಾಗಿ ಆರ್‌ಸಿಬಿ  9ವಿಕೆಟ್  137 ನಷ್ಟಕ್ಕೆ ರನ್ ಸಿಡಿಸಿತು. 59  ರನ್ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮತ್ತೆ ಅಂಕಪಟ್ಟಿಲ್ಲಿ ಮೊದಲ ಸ್ಥಾನಕ್ಕೇರಿತು.  ಕಾಗಿಸೋ ರಬಾಡಾ 4 ವಿಕೆಟ್ ಕಬಳಿಸಿ ಮಿಂಚಿದರು.


 

Follow Us:
Download App:
  • android
  • ios