Asianet Suvarna News Asianet Suvarna News

ಡೆಲ್ಲಿ ಚಾಲೆಂಜ್‌ಗೆ ಸಿದ್ದವಾದ ಚೆನ್ನೈ ಸೂಪರ್ ಕಿಂಗ್ಸ್

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವಿಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Delhi Capitals faces CSK in Sharjah Match Preview kvn
Author
Sharjah - United Arab Emirates, First Published Oct 17, 2020, 9:33 AM IST
  • Facebook
  • Twitter
  • Whatsapp

ಶಾರ್ಜಾ(ಅ.17): ಸತತ ಸೋಲಿ​ನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಕಳೆದ ಪಂದ್ಯ​ದಲ್ಲಿ ಜಯಿಸಿ ಜಯದ ಹಳಿಗೆ ವಾಪ​ಸಾ​ಗಿ​ದ್ದ​ರೂ, ಎಂ.ಎಸ್‌.ಧೋನಿ ಪಡೆ ಮೇಲಿ​ರುವ ಒತ್ತಡ ಕಡಿಮೆಯಾಗಿಲ್ಲ. ಶನಿ​ವಾರ ಇಲ್ಲಿ ನಡೆ​ಯ​ಲಿ​ರುವ ಪಂದ್ಯ​ದಲ್ಲಿ ಸೂಪರ್‌ ಕಿಂಗ್ಸ್‌ಗೆ ಬಲಿಷ್ಠ ಡೆಲ್ಲಿ ಕ್ಯಾಪಿ​ಟಲ್ಸ್‌ ಸವಾಲು ಎದು​ರಾ​ಗ​ಲಿದೆ. ಚೆನ್ನೈ ಈಗಾ​ಗಲೇ 8 ಪಂದ್ಯ​ಗ​ಳಲ್ಲಿ 5 ಸೋಲು ಕಂಡಿದ್ದು, ಮುಂದಿನ 6 ಪಂದ್ಯ​ಗ​ಳಲ್ಲಿ ಕನಿಷ್ಠ 5ರಲ್ಲಿ ಜಯಿ​ಸ​ಬೇ​ಕಿದೆ.

ಸನ್‌ರೈಸರ್ಸ್ ವಿರುದ್ಧ ಗೆಲು​ವಿ​ನಲ್ಲಿ ಧೋನಿ ಬಳ​ಸಿದ ಎಲ್ಲಾ ತಂತ್ರಗಳು ಕೈಹಿ​ಡಿ​ದವು. ಸ್ಯಾಮ್‌ ಕರ್ರನ್‌ ಆರಂಭಿ​ಕ​ನಾಗಿ ಆಡಿ ಯಶಸ್ಸು ಕಂಡರು. 7 ಬೌಲರ್‌ಗಳನ್ನು ಆಡಿಸಿದ್ದ​ರಿಂದ ಸನ್‌ರೈಸರ್ಸ್ ರನ್‌ರೇಟ್‌ ನಿಯಂತ್ರಿ​ಸಲು ಸಾಧ್ಯ​ವಾ​ಯಿತು. ಇದೇ ತಂತ್ರಗಾರಿಕೆಯನ್ನು ಧೋನಿ ಈ ಪಂದ್ಯ​ದಲ್ಲೂ ಮುಂದು​ವ​ರಿ​ಸುವ ನಿರೀಕ್ಷೆ ಇದೆ.

KKR ನಾಯಕತ್ವ ಬದಲಾದರೂ ಫಲಿತಾಂಶ ಬದಲಾಗಲಿಲ್ಲ; ಮುಂಬೈಗೆ 8 ವಿಕೆಟ್ ಗೆಲುವು!

ಮತ್ತೊಂದೆಡೆ ಡೆಲ್ಲಿ ಜಯ ಸಾಧಿಸಿ ಮತ್ತೊಮ್ಮೆ ಅಗ್ರ​ಸ್ಥಾ​ನ​ಕ್ಕೇ​ರುವ ಗುರಿ ಹೊಂದಿದೆ. ಆದರೆ ನಾಯಕ ಶ್ರೇಯಸ್‌ ಅಯ್ಯರ್‌ ಗಾಯ​ದಿಂದ ಸಂಪೂರ್ಣವಾಗಿ ಚೇತ​ರಿ​ಸಿ​ಕೊಂಡಿ​ರುವ ಬಗ್ಗೆ ಮಾಹಿತಿ ಇಲ್ಲ. ಈಗಾ​ಗಲೇ ರಿಷಭ್‌ ಪಂತ್‌ ಸೇವೆ ಅಲ​ಭ್ಯ​ವಾ​ಗಿದೆ. ಹೀಗಾಗಿ ಡೆಲ್ಲಿ ಬ್ಯಾಟಿಂಗ್‌ ಪಡೆ ಕೊಂಚ ದುರ್ಬ​ಲ​ವಾ​ದಂತೆ ಕಾಣು​ತ್ತಿದೆ. ಆದರೆ ಸ್ಪಿನ್ನ​ರ್‍ಸ್ ಹಾಗೂ ವೇಗಿ​ಗಳು ತಂಡಕ್ಕೆ ಗೆಲುವು ತಂದು​ಕೊ​ಡ​ಬಲ್ಲ ಸಾಮರ್ಥ್ಯ ಹೊಂದಿ​ದ್ದಾರೆ.

ಪಿಚ್‌ ರಿಪೋರ್ಟ್‌

ಇಲ್ಲಿನ ಪಿಚ್‌ ಆರಂಭಿಕ ಪಂದ್ಯ​ಗ​ಳಲ್ಲಿ ಇದ್ದಂತಿಲ್ಲ. ಪಿಚ್‌ ವೇಗ ಕಳೆ​ದು​ಕೊಂಡಿದ್ದು, ಚೆಂಡು ಬ್ಯಾಟ್‌ಗೆ ಸುಲ​ಭ​ವಾಗಿ ಸಿಗು​ವು​ದಿಲ್ಲ. ಸ್ಪಿನ್ನರ್‌ಗಳು ನಿರ್ಣಾ​ಯಕ ಪಾತ್ರ ವಹಿ​ಸ​ಲಿ​ದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕಿಂತ ದೊಡ್ಡ ಮೊತ್ತ ಗಳಿ​ಸಿ​ದರೆ ಗೆಲ್ಲುವ ಸಾಧ್ಯತೆ ಹೆಚ್ಚು.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಚೆನ್ನೈ: ಸ್ಯಾಮ್‌ ಕರ್ರನ್‌, ಶೇನ್‌ ವಾಟ್ಸನ್‌, ಫಾಫ್‌ ಡು ಪ್ಲೆಸಿ, ಅಂಬಟಿ ರಾಯುಡು, ಎಂ.ಎಸ್‌.ಧೋನಿ(ನಾ​ಯ​ಕ​), ರವೀಂದ್ರ ಜಡೇಜಾ, ಡ್ವೇನ್‌ ಬ್ರಾವೋ, ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌, ಕರಣ್  ಶರ್ಮಾ, ಪೀಯೂಷ್‌ ಚಾವ್ಲಾ.

ಡೆಲ್ಲಿ: ಶಿಖರ್‌ ಧವನ್‌, ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌(ನಾ​ಯ​ಕ​), ಅಜಿಂಕ್ಯ ರಹಾನೆ, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕೇರಿ, ಆರ್‌.ಅ​ಶ್ವಿನ್‌, ಅಕ್ಷರ್‌ ಪಟೇಲ್‌, ಕಗಿಸೋ ರಬಾಡ, ತುಷಾರ್‌ ದೇಶ​ಪಾಂಡೆ, ಏನ್ರಿಚ್‌ ನೋಕಿ​ಯ.

ಸ್ಥಳ: ಶಾರ್ಜಾ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Follow Us:
Download App:
  • android
  • ios