ದುಬೈ(ಅ.27): ಸತತ 2 ಸೋಲುಗಳಿಂದ ಹತಾಶೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌, ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ಇಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿದೆ. 

11 ಪಂದ್ಯಗಳಿಂದ 7ರಲ್ಲಿ ಗೆದ್ದು 14 ಅಂಕಗಳಿಸಿರುವ ಡೆಲ್ಲಿ ತಂಡ, ಹೈದ್ರಾಬಾದ್‌ ಎದುರು ಗೆದ್ದು ಪ್ಲೇ ಆಫ್‌ ಹಂತವನ್ನು ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. 4ರಲ್ಲಿ ಗೆದ್ದು 8 ಅಂಕಗಳಿಸಿರುವ ಹೈದ್ರಾಬಾದ್‌, ಡೆಲ್ಲಿ ವಿರುದ್ಧ ಜಯಿಸಿ ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯುವ ಲೆಕ್ಕಾಚಾರದಲ್ಲಿ ಕಣಕ್ಕಿಳಿಯುತ್ತಿದೆ. 

IPL 2020: KKR ಸೋಲಿಸಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟ ಪಂಜಾಬ್!

ಉಳಿದ 3 ಪಂದ್ಯಗಳಲ್ಲಿ ಹೈದ್ರಾಬಾದ್‌ ದೊಡ್ಡ ಅಂತರದ ಗೆಲುವು ಸಾಧಿಸಿದರೆ ಪ್ಲೇ ಆಫ್‌ ಹಂತಕ್ಕೇರುವ ಸಾಧ್ಯತೆಯಿದೆ. ಹೀಗಾಗಿ ಡೆಲ್ಲಿ ವಿರುದ್ಧದ ಪಂದ್ಯ ಹೈದ್ರಾಬಾದ್‌ಗೆ ಅತ್ಯಂತ ಮಹತ್ವದ್ದಾಗಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಹೈದ್ರಾಬಾದ್‌ ಸೋತರೆ, ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.

ಪಿಚ್‌ ರಿಪೋರ್ಟ್‌: ದುಬೈ ಪಿಚ್‌ ನಿಧಾನಗತಿಯಲ್ಲಿದೆ. ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 170. ವೇಗಿಗಳಿಗೆ ನೆರವು ದೊರೆಯಲಿದ್ದು, ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್: ರಹಾನೆ, ಧವನ್‌, ಶ್ರೇಯಸ್‌ (ನಾಯಕ), ರಿಷಭ್‌, ಹೆಟ್ಮೇಯರ್‌, ಸ್ಟೋಯ್ನಿಸ್‌, ಅಕ್ಷರ್‌, ಕಗಿಸೊ ರಬಾಡ, ಆರ್‌. ಅಶ್ವಿನ್‌, ತುಷಾರ್‌, ನೋಕಿಯೆ

ಸನ್‌ರೈಸರ್ಸ್ ಹೈದರಾಬಾದ್‌: ವಾರ್ನರ್‌ (ನಾಯಕ), ಬೇರ್‌ಸ್ಟೋ, ಮನೀಶ್‌, ಸಮದ್‌, ಶಂಕರ್‌, ಹೋಲ್ಡರ್‌, ಗರ್ಗ್‌, ರಶೀದ್‌, ಸಂದೀಪ್‌, ನಟರಾಜನ್‌, ಖಲೀಲ್‌

ಸ್ಥಳ: ದುಬೈ, 
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್