ಶಾರ್ಜಾ(ಅ.26): ಪ್ಲೇ ಆಫ್ ಸ್ಥಾನ ಆಕ್ರಮಿಸಿಕೊಳ್ಳುವ ತಂಡ ಯಾವುದು ಅನ್ನೋ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ಪ್ಲೇ ಆಫ್ ರೇಸ್ ಪೈಪೋಟಿ ಹೆಚ್ಚಿಸಿದೆ. ಮಹತ್ವದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಸೋಲಿಸಿದ ಪಂಜಾಬ್, ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಆರಂಭಿಕ ಹಂತದಲ್ಲಿ ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಪಂಜಾಬ್ ಇದೀಗ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.  ಪಂಜಾಬ್ ಟೇಬಲ್ 4 ಸ್ಥಾನದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಪ್ಲೇ ಆಫ್ ರೇಸ್ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್ ಗೆಲುವು ಕಂಡ ಪಂಜಾಬ್ ನೆಟ್‌ ರನ್‌ರೇಟ್ ಕೂಡ ಉತ್ತಮಗೊಂಡಿದೆ.

ಗೆಲುವಿಗೆ 150 ರನ್ ಟಾರ್ಗೆಟ್ ಪಡೆದ ಪಂಜಾಬ್, ಡೀಸೆಂಟ್ ಆರಂಭ ಪಡೆಯಿತು. ಕೆಎಲ್ ರಾಹುಲ್ 28 ರನ್ ಸಿಡಿಸಿ ಔಟಾದರು. ಮನ್ದೀಪ್ ಸಿಂಗ್ ಹಾಗೂ ಕ್ರೀಸ್ ಗೇಲ್ ಜೊತೆಯಾಟ ಪಂಜಾಬ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಮನ್ದೀಪ್ ಸಿಂಗ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕ್ರಿಸ್ ಗೇಲ್ ಹಾಫ್ ಸೆಂಚುರಿ ಸಿಡಿಸಿದರು. ಕ್ರಿಸ್ ಗೇಲ್ 51 ರನ್ ಸಿಡಿಸಿ ಔಟಾದರು.  ಮನ್ದೀಪ್ ಸಿಂಗ್ ಅಜೇಯ  66 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ 18.  5 ಓವರ್‌ಗಳಲ್ಲಿ 2 ವಿಕೆಟ್ ಕಳೆಗುಕೊಂಡು ಗುರಿ ತಲುಪಿತು. 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ ಪಂಜಾಬ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.