ದುಬೈ(ಅ.02):  ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಹಾದ್ ತಂಡ 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮೇಲಕ್ಕೆರಲು ಇಂದಿನ ಪಂದ್ಯದ ಗೆಲುವು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಚೆನ್ನೈ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. ಮುರಳಿ ವಿಜಯ್, ರುತರಾಜ್ ಗಾಯಕ್ವಾಡ್ ಹಾಗೂ ಜೋಶ್ ಹೇಜಲ್‌ವುಡ್ ಬದಲು ಅಂಬಾಟಿ ರಾಯುಡು, ಶಾರ್ದೂಲ್ ಠಾಕೂರ್ ಹಾಗೂ ಡ್ವೇನ್ ಬ್ರಾವೋ ತಂಡ ಸೇರಿಕೊಂಡಿದ್ದಾರೆ.

ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 3 ಪಂದ್ಯದಲ್ಲಿ 2 ಸೋಲು ಹಾಗೂ 1 ಗೆಲುವು ಕಂಡಿದೆ. 2 ಅಂಕ ಸಂಪಾದಿಸಿರುವ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇತ್ತ ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡ 3 ರಲ್ಲಿ 2 ಸೋಲು ಕಂಡಿದೆ. ಒಂದು ಗೆಲುವು ಸಾಧಿಸಿರುವ ಹೈದರಾಬಾದ್ 7ನೇ ಸ್ಥಾನದಲ್ಲಿದೆ.