ದುಬೈ(ಅ.29): ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 49ನೇ ಪಂದ್ಯದಲ್ಲಿಂದು ಟಾಸ್ ಗೆದ್ದ MS ಧೋನಿ ಮೊದಲು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 

ನಿರೀಕ್ಷೆಯಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ತಾಹಿರ್ ಹಾಗೂ ಡುಪ್ಲೆಸಿಸ್ ಬದಲಿಗೆ ಲುಂಗಿ ಎಂಗಿಡಿ ಹಾಗೂ ಶೇನ್ ವಾಟ್ಸನ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಕೆಕೆಆರ್ ತಂಡದಲ್ಲಿ ಸಹ ಒಂದು ಬದಲಾವಣೆ ಮಾಡಲಾಗಿದ್ದು, ಪ್ರಸಿದ್ಧ್ ಕೃಷ್ಣ ಬದಲಿಗೆ ರಿಂಕು ಸಿಂಗ್ ತಂಡ ಕೂಡಿಕೊಂಡಿದ್ದಾರೆ

ಸದ್ಯ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್ ತಂಡ 12 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 6 ಸೋಲುಗಳೊಂದಿಗೆ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಾ 12 ಪಂದ್ಯಗಳನ್ನಾಡಿದ್ದು, 4 ಗೆಲುವು ಹಾಗೂ 8 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಒಂದು ಕಡೆ ಈ ಪಂದ್ಯವನ್ನು ಗೆದ್ದು ತನ್ನ ಪ್ಲೇ ಅಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ಕೆಕೆಆರ್ ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಧೋನಿ ಪಡೆ ಉಳಿದ ಪಂದ್ಯಗಳನ್ನು ಗೆದ್ದು ಅಭಿಮಾನಿಗಳನ್ನು ರಂಜಿಸುವ ಲೆಕ್ಕಾಚಾರದಲ್ಲಿದೆ.

ತಂಡಗಳು ಹೀಗಿವೆ:
ಚೆನ್ನೈ ಸೂಪರ್ ಕಿಂಗ್ಸ್:

ಕೋಲ್ಕತ ನೈಟ್‌ ರೈಡರ್ಸ್: