ದುಬೈ(ಅ.29): ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಇಲ್ಲಿ ಗುರುವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿದೆ. 

12 ಪಂದ್ಯಗಳಿಂದ 6 ಗೆಲುವು ಸಾಧಿಸಿ 12 ಅಂಕಗಳಿಸಿರುವ ಕೆಕೆಆರ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕೆಕೆಆರ್‌ ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸೋಲುಂಡಿತ್ತು. 

ಮತ್ತೊಂದೆಡೆ ಚೆನ್ನೈ ತಂಡ, 8 ಅಂಕಗಳಿಸಿ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕೊನೆಯ ಸ್ಥಾನದ ಅವಮಾನವನ್ನು ತಪ್ಪಿಸಿಕೊಳ್ಳುವ ಉದ್ದೇಶ ಹೊಂದಿರುವ ಚೆನ್ನೈ, ಕೆಕೆಆರ್‌ಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಪಂದ್ಯ ಗೆಲ್ಲುವ ಉತ್ಸಾಹದಲ್ಲಿದೆ. ಸದ್ಯ 16 ಅಂಕ ಪಡೆದ ತಂಡಗಳು ಪ್ಲೇ ಆಫ್‌ ಹಂತವನ್ನು ಖಚಿತಪಡಿಸಿಕೊಳ್ಳಲಿವೆ. 14 ಅಂಕ ಪಡೆದು ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ ತಂಡ ಪ್ಲೇ ಆಫ್‌ ಹಂತಕ್ಕೇರುವ ಸಾಧ್ಯತೆ ದಟ್ಟವಾಗಿದೆ.

IPL 2020: ಆರ್‌ಸಿಬಿ ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಮುಂಬೈ ಇಂಡಿಯನ್ಸ್!

ಪಿಚ್‌ ರಿಪೋರ್ಟ್‌: ದುಬೈ ಪಿಚ್‌ ನಿಧಾನಗತಿಯಲ್ಲಿದ್ದು, ಆರಂಭದಲ್ಲಿ ವೇಗಿಗಳಿಗೆ ಹೆಚ್ಚಿನ ನೆರವು ದೊರೆಯಲಿದೆ. ಸಮಯ ಕಳೆದಂತೆ ಸ್ಪಿನ್ನರ್‌ಗಳು ಮಿಂಚಲಿದ್ದು, ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋುತುರಾಜ್ ‌ಗಾಯಕ್ವಾಡ್, ಫಾಫ್ ಡುಪ್ಲೆಸಿ, ಅಂಬಟಿ ರಾಯುಡು, ಎಂ ಎಸ್ ಧೋನಿ (ನಾಯಕ), ಎನ್ ಜಗದೀಸನ್‌, ಸ್ಯಾಮ್ ಕರ್ರನ್‌, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್‌, ದೀಪಕ್ ಚಹರ್‌, ಇಮ್ರಾನ್ ತಾಹಿರ್‌, ಮೊನು ಕುಮಾರ್.

ಕೆಕೆಆರ್‌: ಶುಭ್‌ಮನ್ ಗಿಲ್‌, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್‌, ಇಯಾನ್ ಮಾರ್ಗನ್‌ (ನಾಯಕ), ಕಮಲೇಶ್ ನಾಗರಕೋಟಿ‌, ಸುನಿಲ್ ನರೈನ್‌, ಪ್ಯಾಟ್ ಕಮಿನ್ಸ್‌, ಲಾಕಿ ಫಗ್ರ್ಯೂಸನ್‌, ಚಕ್ರವರ್ತಿ, ಪ್ರಸಿದ್ಧ್.

ಸ್ಥಳ: ದುಬೈ
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್