ಚೆನ್ನೈ ಸೂಪರ್‌ ಕಿಂಗ್ಸ್ ತಂಡದ  ಸ್ಟಾರ್ ವೇಗಿ ದೀಪಕ್ ಚಹರ್ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರದಿಂದಲೇ ಅಭ್ಯಾಸ ಆರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಸೆ.12): ಚೆನ್ನೈ ಸೂಪರ್‌ ಕಿಂಗ್ಸ್‌ನ ವೇಗದ ಬೌಲರ್‌ ದೀಪಕ್‌ ಚಹರ್‌ ಕೊರೋ​ನಾದಿಂದ ಸಂಪೂರ್ಣ ಗುಣ​ಮು​ಖ​ರಾ​ಗಿದ್ದು, ಶುಕ್ರ​ವಾರದಿಂದ ಅಭ್ಯಾಸ ಆರಂಭಿ​ಸಿ​ದ್ದಾರೆ. 

2 ಬಾರಿ ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದ ಬಳಿಕ, ಬುಧ​ವಾರ ದೀಪಕ್‌ರನ್ನು ಬಯೋ ಸೆಕ್ಯೂರ್‌ ವಾತಾ​ವ​ರಣದೊಳಗೆ ಪ್ರವೇ​ಶಿ​ಸಲು ಅನು​ಮತಿ ನೀಡ​ಲಾ​ಗಿತ್ತು. ಬಿಸಿ​ಸಿ​ಐ ನಿಯ​ಮದ ಪ್ರಕಾರ ದೀಪ​ಕ್‌ ಕಾರ್ಡಿಯೋ ವ್ಯಾಸ್ಕು​ಲಾರ್‌ ಪರೀಕ್ಷೆಗೆ ಒಳ​ಗಾಗಿದ್ದರು. ಅದರ ವರ​ದಿ​ಯ​ಲ್ಲೂ ಯಾವುದೇ ಸಮ​ಸ್ಯೆಯಿಲ್ಲ​ದಿ​ರು​ವುದು ದೃಢ​ಪಟ್ಟ ಬಳಿಕ ಅಭ್ಯಾ​ಸಕ್ಕೆ ಹಾಜ​ರಾ​ಗಲು ಅನು​ಮತಿ ನೀಡ​ಲಾ​ಗಿದೆ. 

IPL 2020: CSK ನಿಟ್ಟುಸಿರು, ದೀಪಕ್ ಚಹಾರ್ ಕೊರೋನಾ ಟೆಸ್ಟ್ ನೆಗೆಟಿವ್..!

ದೀಪಕ್‌ ಚಹರ್‌ ಲಭ್ಯತೆ ಮೂರು ಬಾರಿಯ ಐಪಿಎಲ್ ಚಾಂಪಿಯನ್ ತಂಡ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈಗಾಗಲೇ ಧೋನಿ ನೇತೃತ್ವದ ಸಿಎಸ್‌ಕೆ ತಂಡದಿಂದ ಅನುಭವಿ ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ವೈಯುಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರು. 

Scroll to load tweet…

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಹಾಲಿ ಚಾಂಪಿ​ಯನ್‌ ಮುಂಬೈ ಇಂಡಿ​ಯನ್ಸ್‌ ತಂಡ​ವನ್ನು ಎದು​ರಿ​ಸ​ಲಿದೆ.