ದುಬೈ(ಅ.02): 7 ದಿನಗಳ ವಿಶ್ರಾಂತಿ ಬಳಿಕ ಶುಕ್ರವಾರ ಕಣಕ್ಕಿಳಿ ಯಲಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಅಂಬಟಿ ರಾಯುಡು ಹಾಗೂ ಡ್ವೇನ್ ಬ್ರಾವೋ ಬಲ ತುಂಬಲಿದ್ದಾರೆ. ಇಬ್ಬರೂ ಗಾಯದಿಂದ ಚೇತರಿಸಿಕೊಂಡಿದ್ದು ಸನ್‌ರೈಸರ್‌ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿದ್ದಾರೆ ಎಂದು ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ. 

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಮುರಳಿ ವಿಜಯ್ ಜಾಗವನ್ನು ರಾಯುಡು ತುಂಬುವುದು ಖಚಿತ. ಆದರೆ ಬ್ರಾವೋರನ್ನು ಆಡಿಸಬೇಕಿದ್ದರೆ ನಾಯಕ ಧೋನಿ, ಕೆಲ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸ್ಯಾಮ್ ಕರ್ರನ್, ಹೇಜಲ್‌ವುಡ್ ಇಬ್ಬರಲ್ಲಿ ಒಬ್ಬರನ್ನು ಹೊರಗಿಡಬೇಕಿದೆ. ಇನ್ನು ಕೇನ್ ಸೇರ್ಪಡೆ ಸನ್‌ರೈಸರ್ಸ್‌ನ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದೆ. ಒಬ್ಬ ಆಲ್ರೌಂಡರ್ ಕೊರತೆ ತಂಡಕ್ಕೆ ಇದೆ. 

IPL 2020: ಪಂಜಾಬ್‌ಗೆ ಸೋಲಿನ ಶಾಕ್ ನೀಡಿದ ಮುಂಬೈ!

ಉಭಯ ತಂಡಗಳು 3 ಪಂದ್ಯಗಳಲ್ಲಿ ತಲಾ 2ರಲ್ಲಿ ಸೋಲುಂಡು, ಅಂಕಪಟ್ಟಿ ಯಲ್ಲಿ ಕ್ರಮವಾಗಿ ಕೊನೆ 2 ಸ್ಥಾನದಲ್ಲಿವೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲುವುದರ ಜತೆಗೆ ಅಂಕಪಟ್ಟಿಯಲ್ಲಿ ಮೇಲೇರಲು ಹಾತೊರೆಯುತ್ತಿವೆ.

ಪಿಚ್ ರಿಪೋರ್ಟ್ ಈ ಐಪಿಎಲ್‌ನಲ್ಲಿ ಇಲ್ಲಿ 6 ಪಂದ್ಯಗಳಿಗೆ ವೇದಿ ಕೆಯಾಗಿದ್ದು, 6ರಲ್ಲೂ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಟಾಸ್ ಗೆಲ್ಲುವ ತಂಡಗಳು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ತಪ್ಪು ಮಾಡಿವೆ. ಈ ಪಿಚ್‌ನಲ್ಲಿ 170-180 ಸುರಕ್ಷಿತ ಮೊತ್ತ ಎಂದೇ ಪರಿಗಣಿಸಲಾಗಿದೆ. ವೇಗಿಗಳಿಗೆ ಹೆಚ್ಚಿನ ನೆರವು ಸಿಗಲಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್