ದುಬೈ(ಸೆ.03): ದುಬೈನಲ್ಲಿರುವ ಐಪಿಎಲ್ ಕ್ಯಾಪ್‌ ಮೇಲೆ ಮತ್ತೆ ಕೊರೋನಾ ಹೆಮ್ಮಾರಿ ತನ್ನ ವಕ್ರದೃಷ್ಠಿಯನ್ನು ಬೀರಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಆಟಗಾರರು ಹಾಗೂ ಸಿಬ್ಬಂದಿಗೆ ಸೋಂಕು ತಗುಲಿರುವ ವಿಚಾರ ಮಾಸುವ ಮುನ್ನವೇ ಇದೀಗ ಮತ್ತೊಂದು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಬಿಸಿಸಿಐನ ಹಿರಿಯ ವೈದ್ಯಕೀಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಸೋಂಕು ತಗುಲಿರುವುದು ನಿಜ, ಆದರೆ ಭಯ ಪಡುವ ಅಗತ್ಯವಿಲ್ಲ. ಅವರಿಗೆ ಯಾವುದೇ ಸೋಂಕಿನ ಲಕ್ಷಣವಿರಲಿಲ್ಲ. ಅವರನ್ನು ಈಗ ಐಸೋಲೇಷನ್‌ನಲ್ಲಿದ್ದಾರೆ. ಅವರು ಯಾರ ಜತೆಯೂ ಸಂಪರ್ಕದಲ್ಲಿರಲಿಲ್ಲ. ಮುಂದಿನ ಟೆಸ್ಟ್ ಮಾಡಿಸುವ ವೇಳೆಗೆ ಸೋಂಕಿನಿಂದ ಗುಣಮುಖವಾಗುವ ವಿಶ್ವಾಸವಿದೆ. ಇನ್ನು ಎನ್‌ಸಿಎನಲ್ಲಿರುವ ಇಬ್ಬರು ಸಿಬ್ಬಂದಿಗೂ ಕೊರೋನಾಗೆ ತುತ್ತಾಗಿದ್ದು ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ. 

IPL 2020: ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದ ಲಸಿತ್ ಮಾಲಿಂಗ..!

ಈ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್‌ನ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹಾರ್ ಹಾಗೂ ಋತುರಾಜ್ ಗಾಯಕ್ವಾಡ್‌ ಅವರು ಸೋಂಕಿಗೆ ತುತ್ತಾದ ಆಟಗಾರರಾಗಿದ್ದರು. ನಾವು ಚೇತರಿಸಿಕೊಳ್ಳುತ್ತಿರುವುದಾಗಿ ದೀಪಕ್ ಚಹಾರ್ ತಿಳಿಸಿದ್ದರು.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಮಿಲಿಯನ್ ಡಾಲರ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೂ ಬಿಡುಗಡೆ ಮಾಡಿಲ್ಲ.

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ