ಸಿಡ್ನಿ[ಡಿ.16]: ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಯಾರು ಯಾವ ತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ಆಟಗಾರರ ಹರಾಜು ನಡೆಯಲಿದೆ. ಹೀಗಿರುವಾಗಲೇ RCB ಮಾಜಿ ವೇಗಿಗೆ ಡೇವಿಡ್ ವಾರ್ನರ್ ಗಾಳ ಹಾಕಿದ್ದಾರೆ.

IPL ಆಟಗಾರರ ಹರಾಜು: ಈ ಇಬ್ಬರತ್ತ ಎಲ್ಲರ ಚಿತ್ತ..!

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣವಾದ ಇನ್’ಸ್ಟಾಗ್ರಾಂನಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಹ್ವಾನಿಸಿದ್ದಾರೆ. ಈಗಾಗಲೇ ಐಪಿಎಲ್ ಹರಾಜಿನಿಂದ ಹೊರಗುಳಿದಿರುವ ಸ್ಟಾರ್ಕ್ ಅವರನ್ನು ವಾರ್ನರ್ ಸನ್ ರೈಸರ್ಸ್ ಹೈದರಾಬಾದ್’ಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು..?
ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ಸನ್’ರೈಸರ್ಸ್ ಆಟಗಾರರಾದ ವಾರ್ನರ್, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಸ್ಟಾರ್ಕ್ ಒಟ್ಟಾಗಿ ಮಾತುಕತೆ ನಡೆಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿರುವ ವಾರ್ನರ್, ಹೈದರಾಬಾದ್ ತಂಡಕ್ಕೆ ಆಹ್ವಾನಿಸಿದ್ದಾರೆ.

2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಆಟಗಾರರಾಗಿ ಹೊರಹೊಮ್ಮಿರುವ ಸ್ಟಾರ್ಕ್, 2019ರ ಐಪಿಎಲ್’ನಿಂದಲೂ ಹೊರಗುಳಿದಿದ್ದರು.