IPL 2020: ಡೆಬ್ಯು ಪಂದ್ಯದಲ್ಲಿ ಕನ್ನಡಿಗ ದೇವದತ್ ದಾಖಲೆಯ ಹಾಫ್ ಸೆಂಚುರಿ!
13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಆರಂಭ ಪಡೆದಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕನ್ನಡಿಗ ದೇವದತ್ ಪಡಿಕ್ಕಲ್ ಸ್ಫೋಟಕ ಆರಂಭದಿಂದ RCB ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಇಷ್ಟೇ ಅಲ್ಲ ಐಪಿಎಲ್ ಪದಾರ್ಪಣಾ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.
ದುಬೈ(ಸೆ.21) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆದಿದೆ. ಕನ್ನಡಿಗ ದೇವದತ್ ಪಡಿಕಲ್ ಸ್ಫೋಟಕ ಆರಂಭದಿಂದ SRH ಬೆಚ್ಚಿ ಬಿದ್ದಿದೆ. ಹೈದರಾಬಾದ್ ತಂಡ ತನ್ನ ಎಲ್ಲಾ ಗೇಮ್ ಪ್ಲಾನ್‌ಗಳನ್ನು ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ನತ್ತ ಕೇಂದ್ರಿಕರಿಸಿತ್ತು. ಆದರೆ ಪಡಿಕಲ್ ಬ್ಯಾಟಿಂಗ್‌ಗೆ ವಾರ್ನರ್ ಪಡೆಗೆ ತಲೆನೋವಾಗಿ ಪರಿಣಮಿಸಿತ್ತು.
ಕೋವಿಡ್-19 ಹೀರೋ ಹೆಸರಿನ ಜರ್ಸಿಯಲ್ಲಿ ವಿರಾಟ್-ಎಬಿ ಕಣಕ್ಕೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಚೊಚ್ಚಲ ಪಂದ್ಯ ಆಡಿದ ದೇವದತ್ ಸ್ಫೋಟಕ ಆರಂಭ ನೀಡಿದರು. ಇಷ್ಟೇ ಅಲ್ಲ ಮೊದಲ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಈ ಮೂಲಕ ಪಡಿಕಲ್ ದಾಖಲೆಯೊಂದು ಬರೆದಿದ್ದಾರೆ. ಆರ್‌ಸಿಬಿ ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ 50ಕ್ಕಿಂತ ಹೆಚ್ಚು ರನ್ ಸಿಡಿಸಿದ 5ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಗೆ ಪಡಿಕಲ್ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಯುವರಾಜ್ ಸಿಂಗ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ನಂತಹ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ.
RCB ಪದಾರ್ಪಣಾ ಪಂದ್ಯದಲ್ಲಿ 50ಕ್ಕಿಂತ ರನ್ ಸಿಡಿಸಿದ ಕ್ರಿಕೆಟರ್ಸ್
102* ಕ್ರಿಸ್ ಗೇಲ್ vs ಕೆಕೆಆರ್, 2011
54* ಎಬಿ ಡಿವಿಲಿಯರ್ಸ್ vs ಕೊಚ್ಚಿ ಟಸ್ಕರ್ಸ್, 2011
52* ಯುವರಾಜ್ ಸಿಂಗ್ vs ಡೆಲ್ಲಿ, 2014
52 ಎಸ್ ಗೋಸ್ವಾಮಿ vs ಡೆಲ್ಲಿ, 2008
56 ದೇವದತ್ ಪಡಿಕಲ್ vs ಹೈದರಾಬಾದ್, 2020
ದೇವದತ್ ಪ್ರತಿ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಈ ಹಿಂದಿನ ದೇಸಿ ಟೂರ್ನಿಗಳಲ್ಲಿ ದೇವದತ್ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಪದಾರ್ಪಣಾ ಪಂದ್ಯದಲ್ಲಿ ದೇವದತ್ ಪ್ರದರ್ಶನ
ಫಸ್ಟ್ ಕ್ಲಾಸ್ :7 & 77 vs ಮಹಾರಾಷ್ಟ್ರ, 2018
ಲಿಸ್ಟ್ ಎ: 58 vs ಜಾರ್ಖಂಡ್, 2019
ಟಿ20: 53* vs ಉತ್ತರಖಂಡ, 2019
ಐಪಿಎಲ್: 56 vs ಹೈದರಾಬಾದ್, 2020