ನವ​ದೆ​ಹ​ಲಿ(ಜೂ.15): ಈ ವರ್ಷ ಶತಾಯ ಗತಾಯ ಐಪಿ​ಎಲ್‌ ಟಿ20 ಟೂರ್ನಿ ನಡೆ​ಸ​ಬೇಕು ಎಂದು ಪಟ್ಟು ಹಿಡಿ​ದಿ​ರುವ ಬಿಸಿ​ಸಿಐ, ಭಾರ​ತ​ದಲ್ಲಿ ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬಾರದ ಹಿನ್ನೆಲೆಯಲ್ಲಿ ಟೂರ್ನಿಯನ್ನು ವಿದೇ​ಶಕ್ಕೆ ಸ್ಥಳಾಂತ​ರಿ​ಸುವ ಬಗ್ಗೆ ಗಂಭೀರ ಚಿಂತನೆ ನಡೆ​ಸು​ತ್ತಿದೆ. 

ಮೂಲ​ಗಳ ಪ್ರಕಾರ, ಸೆಪ್ಟೆಂಬರ್‌-ಅಕ್ಟೋ​ಬರ್‌ನಲ್ಲಿ ಯುನೈ​ಟೆಡ್‌ ಅರಬ್‌ ಎಮಿ​ರೈಟ್ಸ್‌ (ಯುಎ​ಇ)​ನಲ್ಲಿ ಐಪಿ​ಎಲ್‌ ನಡೆ​ಸು​ವುದು ಬಿಸಿಸಿಐನ ಪ್ಲ್ಯಾನ್‌ ‘ಎ’ ಎನ್ನ​ಲಾ​ಗಿದೆ. ಅಬು​ಧಾಬಿ, ದುಬೈ ಹಾಗೂ ಶಾರ್ಜಾದಲ್ಲಿ ಅಂತಾ​ರಾ​ಷ್ಟ್ರೀಯ ಕ್ರೀಡಾಂಗಣಗಳಿದ್ದು, ಆಟ​ಗಾ​ರರು ಉಳಿ​ದು​ಕೊ​ಳ್ಳ​ಲು ಸಮೀ​ಪ​ದಲ್ಲೇ ಹೋಟೆಲ್‌ಗಳಿವೆ. ಆಟ​ಗಾ​ರರ ಸುರ​ಕ್ಷತೆಗೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸು​ವು​ದಾಗಿ ಯುಎಇ ಕ್ರಿಕೆಟ್‌ ಮಂಡಳಿ ಭರ​ವಸೆ ನೀಡಿದೆ. 

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್!

2014ರ ಐಪಿ​ಎಲ್‌ನ ಮೊದಲ 20 ಪಂದ್ಯ​ಗಳು ಯುಎ​ಇ​ನಲ್ಲಿ ನಡೆ​ದಿದ್ದವು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಬಿಸಿ​ಸಿಐ ಸಮಾ​ಧಾನ ವ್ಯಕ್ತ​ಪ​ಡಿ​ಸಿತ್ತು. ಹೀಗಾಗಿ ವಿದೇ​ಶಕ್ಕೆ ಸ್ಥಳಾಂತ​ರಿ​ಸ​ಬೇ​ಕಾದ ಪರಿ​ಸ್ಥಿತಿ ಎದು​ರಾ​ದರೆ ಯುಎಇ ಮೊದಲ ಆಯ್ಕೆ ಆಗಿ​ರ​ಲಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.

ಇನ್ನು ಶ್ರೀಲಂಕಾದಲ್ಲಿಯೂ ಐಪಿಎಲ್ ಆಯೋಜಿಸುವ ಆಯ್ಕೆ ಬಿಸಿಸಿಐ ಮುಂದಿದೆ. ಆದರೆ ಇತ್ತೀಚೆಗೆ ದ್ವೀಪರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಹೊರತಾಗಿ ಭಾರತದಲ್ಲೇ ಖಾಲಿ ಕ್ರೀಡಾಂಗಣದಲ್ಲಿ ಬಿಸಿಸಿಐ ಐಪಿಎಲ್ ಆಯೋಜಿಸಿದರೆ, ಅಚ್ಚರಿಪಡಬೇಕಾಗಿಲ್ಲ. ಫ್ರಾಂಚೈಸಿ ವಲಯದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಆಯೋಜನೆಗೆ ಪರ-ವಿರೋಧಗಳು ವ್ಯಕ್ತವಾಗಿವೆ.