Asianet Suvarna News Asianet Suvarna News

ಧೋನಿ ಸ್ಥಾನ ತುಂಬಲ್ಲ ಸೂಕ್ತ ಆಟಗಾರನ ಸೂಚಿಸಿದ ಆಶಿಶ್ ನೆಹ್ರಾ!

  • ಟೀಂ ಇಂಡಿಯಾದ ಮುಂದಿ ಧೋನಿ ಹೆಸರಿಸಿದ ಆಶಿಶ್ ನೆಹ್ರಾ
  • ಧೋನಿ ಸ್ಥಾನ ತುಂಬಬಲ್ಲ ಸೂಕ್ತ ಕ್ರಿಕೆಟಿಗ ಯಾರು?
Former India pacer Ashish Nehra feels Rishabh Pant is the right replacement for MS Dhoni ckm
Author
Bengaluru, First Published Oct 6, 2020, 7:33 PM IST
  • Facebook
  • Twitter
  • Whatsapp

ಮುಂಬೈ(ಅ.06): ಎಂ.ಎಸ್.ಧೋನಿ  ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಬಳಿಕ, ಆಯ್ಕೆ ಸಮಿತಿ, ಬಿಸಿಸಿಐ ಹಾಗೂ ಟೀಂ ಮ್ಯಾನೇಜ್ಮೆಂಟ್ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುರಿತು ಯೋಚನೆ ಮಾಡಿರಲಿಲ್ಲ. ಆದರೆ ಧೋನಿ ವಿದಾಯ ಬಳಿಕ ಇದೀಗ ತಲೆನೋವು ಶುರುವಾಗಿದೆ. ಧೋನಿ ಸ್ಥಾನ ತುಂಬಬಲ್ಲ ಆಟಗಾರನಿಗೆ ಹುಡುಕಾಟ ಪ್ರಯೋಗ ಆರಂಭಗೊಂಡಿದೆ. ಇದೀಗ ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಟೀಂ ಇಂಡಿಯಾ ಮುಂದಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುರಿತು ಬೆಳಕು ಚೆಲ್ಲಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್ ರಿಷಬ್ ಪಂತ್, ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನ ತುಂಬಲ್ಲ ಆಟಾಗಾರ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ.  ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಬುತ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್‌ಗೆ ಹೆಚ್ಚಿನ ಅವಕಾಶ ನೀಡಬೇಕಿದೆ. ಧೋನಿ ರೀತಿಯಲ್ಲಿ ಬ್ಯಾಟ್ ಬೀಸಬಲ್ಲ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಪಂತ್ ಸೂಕ್ತ ಎಂದು ನೆಹ್ರಾ ಹೇಳಿದ್ದಾರೆ.

ನೆಹ್ರಾ ಮಾತಿಗೆ ಟೀಂ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಧನಿಗೂಡಿಸಿದ್ದಾರೆ. ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳ ಅವಶ್ಯಕತೆ ಹೆಚ್ಚಿದೆ. ಪಂತ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಡೆಲ್ಲಿ ಪರ ಜವಾಬ್ದಾರಿ ನಿರ್ವಹಿಸುತ್ತಿರುವ ಪಂತ್, ಧೋನಿ ಸ್ಥಾನ ತುಂಬಲಿದ್ದಾರೆ ಎಂದು ಬಂಗಾರ್ ಹೇಳಿದ್ದಾರೆ.

ಪಂತ್‌ಗಿಂತ ಕೆಎಲ್ ರಾಹುಲ್ ಉತ್ತಮ ಆಯ್ಕೆ ಎಂದು ಅಭಿಮಾನಿಗಳು ವಾದಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕನಾಗಿ, ಆರಂಭಿಕ ಆಟಗಾರನಾಗಿ ಹಾಗೂ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವ ಕೆಎಲ್ ರಾಹುಲ್‌ಗೆ ಅವಕಾಶ ನೀಡುವುದು ಸೂಕ್ತ ಅನ್ನೋ ಮಾತುಗಳು ಕೇಳಿಬಂದಿದೆ.
 

Follow Us:
Download App:
  • android
  • ios