ದುಬೈ(ಸೆ.20): ಕ್ರಿಕೆಟ್ ಜಗತ್ತಿನಲ್ಲಿ ಅನಿಲ್ ಕುಂಬ್ಳೆ ಹಾಗೂ ರಿಕಿ ಪಾಂಟಿಂಗ್ ಇಬ್ಬರು ಮಹಾನ್ ದಿಗ್ಗಜ ಕ್ರಿಕೆಟಿಗರು. ಇದೀಗ ಇವರಿಬ್ಬರು ಮುಖಾಮುಖಿಯಾಗುತ್ತಿದ್ದಾರೆ. ಕುಂಬ್ಳೆ ಮಾರ್ಗದರ್ಶನದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಿಕಿ ಪಾಂಟಿಂಗ್ ಕೋಚಿಂಗ್‌ನ ಡೆಲ್ಲಿ ಕ್ಯಾಪಿಟಲ್ಸ್ 2ನೇ ಲೀಗ್ ಪಂದ್ಯದಲ್ಲಿ ಹೋರಾಟ ನಡೆಸುತ್ತಿದೆ .

IPL 2020: ಡೆಲ್ಲಿ ವಿರುದ್ಧದ ಪಂದ್ಯಕ್ಕೆ KXIP ಸಂಭವನೀಯ ತಂಡ; ಯಾರಿಗಿದೆ ಚಾನ್ಸ್?

ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿದ್ದ ಆರ್ ಅಶ್ವಿನ್ ಇದೀಗ ಡೆಲ್ಲಿ ತಂಡ ಸೇರಿಕೊಂಡಿದ್ದಾರೆ. ಇಷ್ಟೇ ಅಲ್ಲ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ. ಇತ್ತ ಕೋಚ್ ಅನಿಲ್ ಕುಂಬ್ಳೆ ಹಾಗೂ ರಿಕಿ ಪಾಂಟಿಂಗ್ ಗೇಮ್ ಪ್ಲಾನ್ ಇಂದಿನ ಪಂದ್ಯದ ಕುತೂಹಲ ಹೆಚ್ಚಿಸಿದೆ. ಇಬ್ಬರ  ಕ್ರಿಕೆಟ್ ಅನುಭವ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

ಪಂಜಾಂಬ್ ವಿರುದ್ಧ ಶುಭಾರಂಭ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ಅಳೆದು ತೂಗಿ ಪ್ಲೇಯಿಂಗ್ 11 ಆಯ್ಕ ಮಾಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಭವನೀಯ ಹನ್ನೊಂದರ ಬಳಗವನ್ನು ಇಲ್ಲಿ ನೀಡಲಾಗಿದೆ. 

ಡೆಲ್ಲಿ ಕ್ಯಾಪಿಟಲ್ಸ್ ಸಂಭನೀಯ ಆಟಗಾರರ ಪಟ್ಟಿ
ಶಿಖರ್‌ ಧವನ್‌, ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌(ನಾಯಕ), ಶಿಮ್ರೊನ್‌ ಹೆಟ್ಮೇಯರ್‌, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಮಾರ್ಕಸ್‌ ಸ್ಟೋಯ್ನಿಸ್‌, ಕಾಗಿಸೋ ರಬಾಡ, ಆರ್ ಅಶ್ವಿನ್, ಅಮಿತ್‌ ಮಿಶ್ರಾ, ಇಶಾಂತ್ ಶರ್ಮಾ 

ಅಲೆಕ್ಸ್ ಕ್ಯಾರಿ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಳ್ಳಲು ರಿಕಿ ಪಾಂಟಿಂಗ್ ಉತ್ಸುಕರಾಗಿದ್ದಾರೆ. ಹೀಗಾಗಿ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಇಂದು (ಸೆ.20) ಸಂಜೆ 7.30ಕ್ಕೆ ನಡೆಯಲಿರುವ ಈ ರೋಚಕ ಹೋರಾಟದಲ್ಲಿ ಯಾರು ಗೆಲುವಿನ ದಡ ಸೇರಲಿದ್ದಾರೆ ಅನ್ನೋ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ.