ಮೆಲ್ಬರ್ನ್(ಅ.29): ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ 18 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಬ್ಯಾಟಿಂಗ್ ಆಲ್ರೌಂಡರ್ ಕ್ಯಾಮ್‌ರನ್ ಗ್ರೀನ್‌ಗೆ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಬಂದಿದೆ.

ಇದೇ ನವೆಂಬರ್ 27ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಸಾಕಷ್ಟು ಅಳೆದು ತೂಗಿ ಕ್ರಿಕೆಟ್ ಆಸ್ಟ್ರೇಲಿಯಾ ಬಲಿಷ್ಠ ಆಟಗಾರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ಆ್ಯರೋನ್ ಫಿಂಚ್ ಕಾಂಗರೂ ತಂಡವನ್ನು ಮುನ್ನಡೆಸಲಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಮಿಚೆಲ್ ಮಾರ್ಷ್ ವೈದ್ಯಕೀಯ ಸಿಬ್ಬಂದಿಯ ಸಲಹೆಯ ಮೇರೆಗೆ ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಮೊಯಿಸ್ ಹೆನ್ರಿಕೇಸ್ ತಂಡ ಕೂಡಿಕೊಂಡಿದ್ದಾರೆ. ಅದರೆ ತುಂಬಾ ಅಚ್ಚರಿಯ ವಿಷಯವೆಂದರೆ ನೇಥನ್ ಲಯನ್, ಜೋಸ್ ಫಿಲಿಫ್ಪೆ, ಆ್ಯಂಡ್ರ್ಯೂ ಟೈ ಆಸೀಸ್ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರಾಹುಲ್‌ಗೆ ಉಪನಾಯಕ ಪಟ್ಟ!

ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿ ನವೆಂಬರ್ 27ರಿಂದ ಆರಂಭವಾಗಲಿದ್ದು, ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಸಿಡ್ನಿ ಮೈದಾನ ಆತಿಥ್ಯ ವಹಿಸಲಿದೆ. ಇನ್ನು ಡಿಸೆಂಬರ್ 02ರಂದು ಕ್ಯಾನ್‌ಬೆರಾದಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಇದಾದ ಬಳಿಕ ಡಿಸೆಂಬರ್ 04ರಿಂದ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಟಿ20 ಪಂದ್ಯ ಸಹ ಕ್ಯಾನ್‌ಬೆರಾದಲ್ಲೇ ನಡೆಯಲಿದೆ. ಇದಾದ ಬಳಿಕ ಡಿಸೆಂಬರ್ 6 ಹಾಗೂ  08ರಂದು ಕ್ರಮವಾಗಿ 2 ಮತ್ತು ಮೂರನೇ ಟಿ20 ಪಂದ್ಯಕ್ಕೆ ಸಿಡ್ನಿ ಮೈದಾನ ಆತಿಥ್ಯ ವಹಿಸಿದೆ.

ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಆ್ಯರೋನ್ ಫಿಂಚ್(ನಾಯಕ), ಪ್ಯಾಟ್ ಕಮಿನ್ಸ್(ಉಪನಾಯಕ), ಡೇವಿಡ್ ವಾರ್ನರ್, ಸೀನ್ ಅಬ್ಬೋಟ್, ಆಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಸ್ ಹೇಜಲ್‌ವುಡ್, ಮೊಯಿಸ್ ಹೆನ್ರಿಕೇಸ್, ಮಾರ್ನಸ್ ಲಬುಸೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಆಡಂ ಜಂಪಾ.