Asianet Suvarna News Asianet Suvarna News

ಕೊನೆಗೂ ಬಂತು ಐಪಿಎಲ್ ಟಿ20 ಹಬ್ಬ

ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಗೆ ಕ್ಷಣಗಣನೆ ಆರಂಭವಾಗಿದೆ. ಸಾಕಷ್ಟು ಸರ್ಕಸ್‌ಗಳ ಬಳಿಕ ಯುಎಇನಲ್ಲಿ ಚುಟುಕು ಕ್ರಿಕೆಟ್ ಹಬ್ಬ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Countdown Start for IPL 2020 kvn
Author
Bengaluru, First Published Sep 18, 2020, 11:53 AM IST

ಬೆಂಗಳೂರು(ಸೆ.18): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಶುಕ್ರವಾರದಿಂದ (ಸೆ.19) ಯುನೈಟೆಡ್ ಅರಬ್ ಎಮಿರೇಟ್‌ಸ್ (ಯುಎಇ)ನಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೊದಲ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಕೊರೋನಾ ಸೋಂಕು ವಿಶ್ವದೆಲ್ಲೆಡೆ ಹರಡಿದ್ದು, ಇನ್ನೂ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಟೂರ್ನಿ ನಡೆಯುತ್ತೋ ಇಲ್ಲವೋ ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದವು. ಮಾರ್ಚ್‌ನಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಅನಿದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ ಟೂರ್ನಿ ಆಯೋಜಿಸುವ ಉತ್ಸಾಹ, ವಿಶ್ವಾಸವನ್ನು ಬಿಸಿಸಿಐ ಕಳೆದುಕೊಂಡಿರಲಿಲ್ಲ. ಸಾವಿರಾರು ಕೋಟಿ ನಷ್ಟವಾಗುವಾಗ ಬಿಸಿಸಿಐ ಹೇಗೆ ತಾನೆ ಟೂರ್ನಿಯನ್ನು ರದ್ದುಗೊಳಿಸಲು ಸಾಧ್ಯ. ? 

IPL 2020 ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೆ ಕಪ್‌ ಗೆಲ್ಲುತ್ತಾ..?

ವಿಶ್ವಕಪ್ ಮುಂದೂಡಿಕೆ:
ಐಪಿಎಲ್ ಆಯೋಜಿಸಲು ದಾರಿ ಹುಡುಕುತ್ತಿದ್ದ ಬಿಸಿಸಿಐಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಸೂಕ್ತ ವೇದಿಕೆ ಕಲ್ಪಿಸಿತು. ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಕೊರೋನಾ ನೆಪ ಹೇಳಿ ಮುಂದೂಡಲಾಯಿತು. ಈ ಸಮಯವನ್ನು ಐಪಿಎಲ್‌ಗೆ ಬಳಸಿಕೊಳ್ಳಲು ನಿರ್ಧರಿಸಿದ ಬಿಸಿಸಿಐ, ಐಪಿಎಲ್ ವೇಳೆ ಬೇರೆ ಯಾವುದೇ ಅಂತಾರಾಷ್ಟ್ರೀಯ ಟೂರ್ನಿ ನಡೆಸದಂತೆ ಎಲ್ಲ ಕ್ರಿಕೆಟ್ ಮಂಡಳಿಗಳನ್ನು ಒಪ್ಪಿಸಿತು.

ಯುಎಇಗೆ ಸ್ಥಳಾಂತರ:
ಕೊರೋನಾ ಸೋಂಕು ಭಾರತದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ದೇಶದಲ್ಲಿ ಕ್ರಿಕೆಟ್ ಟೂರ್ನಿ ನಡೆಸುವುದು ಅಸಾಧ್ಯ ಎನ್ನುವುದನ್ನು ಮನಗಂಡ ಬಿಸಿಸಿಐ, ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿತು. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ಟೂರ್ನಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ವಿಶೇಷ ವಿಮಾನಗಳಲ್ಲಿ ಎಲ್ಲಾ 8 ತಂಡಗಳು ತನ್ನ ಆಟಗಾರರನ್ನು ಯುಎಇಗೆ ಕರೆಸಿಕೊಂಡು 3 ವಾರ ಅಭ್ಯಾಸವನ್ನೂ ಮುಗಿಸಿವೆ. ಪ್ರತಿ ತಂಡವೂ ಪ್ರತ್ಯೇಕ ಹೋಟೆಲ್‌ಗಳನ್ನು ಕಾಯ್ದಿರಿಸಿಕೊಂಡಿದ್ದು, ಟೂರ್ನಿ ಮುಕ್ತಾಯಗೊಳ್ಳುವ ವರೆಗೂ ಅದೇ ಸ್ಥಳದಲ್ಲೇ ಉಳಿಯಲಿವೆ.  
 

Follow Us:
Download App:
  • android
  • ios