ದುಬೈ(ಆ.25): 13ನೇ ಆವೃ​ತ್ತಿಯ ಐಪಿ​ಎಲ್‌ಗೆ ಕೇವಲ 3 ವಾರ ಮಾತ್ರ ಬಾಕಿ ಇದ್ದು, ಇನ್ನೂ ವೇಳಾ​ಪಟ್ಟಿ ಪ್ರಕಟಗೊಂಡಿಲ್ಲ. ಇದೀಗ ಐಪಿ​ಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್ ಈ ಬಗ್ಗೆ ತುಟಿ ಬಿಚ್ಚಿದ್ದಾರೆ

ಈ ಬಗ್ಗೆ ಸ್ಪಷ್ಟನೆ ನೀಡಿ​ರುವ ಐಪಿ​ಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌, ‘ಬಿ​ಸಿ​ಸಿಐ ತಂಡ ಎಲ್ಲ ಅಂಶಗಳನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ವೇಳಾ​ಪಟ್ಟಿ ಸಿದ್ಧ​ಪ​ಡಿ​ಸು​ತ್ತಿದೆ. ಈ ವಾರದಲ್ಲಿ ವೇಳಾ​ಪಟ್ಟಿ ಪ್ರಕಟಗೊಳ್ಳ​ಲಿದೆ ಎನ್ನುವ ಭರ​ವಸೆ ನೀಡುತ್ತೇನೆ’ ಎಂದು ಬ್ರಿಜೇಶ್‌ ಮಾಧ್ಯ​ಮ​ವೊಂದಕ್ಕೆ ತಿಳಿ​ಸಿ​ದ್ದಾರೆ.

ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭ​ಗೊ​ಳ್ಳ​ಲಿದ್ದು, ಮೊದಲ ಪಂದ್ಯ​ದಲ್ಲಿ ಹಾಲಿ ಚಾಂಪಿ​ಯನ್‌ ಮುಂಬೈ ಇಂಡಿ​ಯನ್ಸ್‌ ಹಾಗೂ ಕಳೆದ ವರ್ಷದ ರನ್ನರ್‌-ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ​ಗಳು ಮುಖಾ​ಮುಖಿ​ಯಾ​ಗುವ ನಿರೀಕ್ಷೆ ಇದೆ. ಕೊರೋನಾ ಭೀತಿ, ಲಾಕ್‌ಡೌನ್ ಬಳಿಕ ನಡೆಯಲಿರುವ ಅತಿದೊಡ್ಡ ಕ್ರಿಕೆಟ್ ಟೂರ್ನಿ ಇದಾಗಲಿದೆ.

ಒಂದು ತಪ್ಪು ಇಡೀ ಟೂರ್ನಿಯನ್ನೇ ಹಾಳು ಮಾಡಬಹುದು ಎಚ್ಚರ ಎಂದ ನಾಯಕ ಕೊಹ್ಲಿ

ಹಲವು ಸರ್ಕಸ್‌ಗಳ ಬಳಿಕ ಕೊನೆಗೂ ಐಪಿಎಲ್ ಟೂರ್ನಿ ಆಯೋಜಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಆದರೆ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿಯು ಕೋವಿಡ್ 19 ಹೆಮ್ಮಾರಿಯ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಈಗಾಗಲೇ ಎಲ್ಲಾ ಎಂಟು ತಂಡಗಳು ದುಬೈಗೆ ಬಂದಿಳಿದಿವೆ. ಇನ್ನು ಕೆಲವು ವಿದೇಶಿ ಆಟಗಾರರು ದುಬೈನಲ್ಲಿ ಹಂತ ಹಂತವಾಗಿ ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ.