ನವ​ದೆ​ಹ​ಲಿ(ಆ.25): ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಬೌಲರ್‌ ನೋಬಾಲ್‌ ಎಸೆ​ದಾಗ ಬ್ಯಾಟ್ಸ್‌ಮನ್‌ಗಳಿಗೆ ಫ್ರೀ ಹಿಟ್‌ ಸಿಗು​ವಂತೆ, ಬೌಲರ್‌ಗಳಿಗೂ ಅನು​ಕೂ​ಲ​ವಾ​ಗು​ವಂತಹ ನಿಯಮವನ್ನು ಜಾರಿ ಮಾಡ​ಬೇಕು ಎಂದು ಭಾರ​ತದ ಆಫ್‌ ಸ್ಪಿನ್ನರ್‌ ಆರ್‌.ಅ​ಶ್ವಿನ್ ಅಭಿ​ಪ್ರಾ​ಯ ಪಟ್ಟಿದ್ದಾರೆ 

ಫ್ರೀ ಹಿಟ್‌ನಂತೆ ‘ಫ್ರೀ ಬಾಲ್‌’ ನಿಯಮ ಅಳ​ವ​ಡಿಕೆಗೆ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿ​ದ್ದಾರೆ. ಈ ನಿಯ​ಮದ ಪ್ರಕಾ​ರ, ಚೆಂಡನ್ನು ಎಸೆ​ಯುವ ಮೊದಲೇ ನಾನ್‌ ಸ್ಟ್ರೈಕ್‌ನಲ್ಲಿ​ರುವ ಬ್ಯಾಟ್ಸ್‌ಮನ್‌ ಕ್ರೀಸ್‌ ತೊರೆ​ದರೆ ಅಂಪೈರ್‌ ಫ್ರೀ ಬಾಲ್‌ ಘೋಷಿ​ಸ​ಬೇ​ಕು. ಫ್ರೀ ಬಾಲ್‌ನಲ್ಲಿ ಬೌಲರ್‌ ವಿಕೆಟ್‌ ಕಿತ್ತರೆ, ಬ್ಯಾಟಿಂಗ್‌ ತಂಡದ 5 ರನ್‌ ಕಡಿ​ತಗೊಳಿ​ಸ​ಬೇಕು ಎಂದು ಸಲ​ಹೆ ನೀಡಿ​ದ್ದಾರೆ. 

IPL ಸಂಪೂರ್ಣ ವೇಳಾಪಟ್ಟಿ ಪ್ರಕಟ ಯಾವಾಗ..? ಬ್ರಿಜೇಶ್ ಪಟೇಲ್‌ ಕೊಟ್ರು ಸುಳಿವು

ಅಶ್ವಿನ್ ಈ ಹಿಂದೆ ರಾಜಸ್ಥಾನ ರಾಯಲ್ಸ್‌ ತಂಡದ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಮಂಕಡಿಂಗ್ ಮಾಡಲು ಆಸ್ಪದವಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಅಶ್ವಿನ್ ಫ್ರೀ ಬಾಲ್ ಕಾನ್ಸೆಪ್ಟ್ ಪರಿಚಯದ ಮಾತುಗಳನ್ನಾಡಿದ್ದಾರೆ. ಅಶ್ವಿನ್‌ರ ಸಲಹೆ ಬಗ್ಗೆ ಸಾಮಾ​ಜಿಕ ತಾಣಗಳ​ಲ್ಲಿ ಭಾರೀ ಚರ್ಚೆ ನಡೆ​ಯುತ್ತಿದೆ.