ಮುಂಬೈ(ಜು.18): ಪ್ರಕೃತಿಯ ಕರೆ ಬಂದಾಗ ಯಾರೇ ಆದರೂ ಓಗೊಡಲೇ ಬೇಕು. ಯಾರು, ಎಲ್ಲಿ, ಯಾವಾಗ ಅನ್ನೋದೆಲ್ಲ ಇಲ್ಲಿ ಲೆಕ್ಕಕ್ಕಿಲ್ಲ ಅನ್ನೋದನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಪ್ರೂವ್ ಮಾಡಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಮಾಡಿದ್ದು ಅಂತಿಂಥಾ ಕೆಲಸವಲ್ಲ.. ಮೂತ್ರ ವಿಸರ್ಜನೆಗೆ ರೈಲನ್ನೇ ನಿಲ್ಲಿಸಿದ್ದಾನೆ! ರೈಲಿನಲ್ಲಿ ಸುಸಜ್ಜಿತ ಶೌಚಾಲಯಗಳಿರುವಾಗ ಈತ ರೈಲು ನಿಲ್ಲಿಸಿದ್ದೇಕೆ? ಮೂತ್ರ ವಿರ್ಜನೆಗಾಗಿ ರೈಲು ನಿಲ್ಲಿಸಿದ್ದು, ಪ್ರಯಾಣಿಕನಲ್ಲ, ಚಾಲಕ!

ಮುಂಬಯಿಗೆ ಪ್ರಯಾಣಿಸುವ ರೈಲು ಅನಿರೀಕ್ಷಿತವಾಗಿ ದಾರಿ ಮಧ್ಯೆ ನಿಂತುಬಿಟ್ಟಿತ್ತು. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ಶಿಂಧೆ ಎಂಬವರು ಕೆಲಸಕ್ಕಾಗಿ ತೆರಳುವಾಗ ರೈಲು ನಿಂತಿದ್ದನ್ನು ಗಮನಿಸಿದ್ದಾರೆ. ರೈಲಿನ ಚಾಲಕ ಕೆಳಗಿಳಿದು ಬಂದಾಗ ಕುತೂಹಲದಿಂದ ಸೋನು ಶಿಂಧೇ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ.

ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್‌ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ರಸ್ತೆ ಬದಿ ಮೂತ್ರ ವಿಸರ್ಜಿಸ್ತೀರಾ? ಉಗುಳುತ್ತೀರಾ? ನೀವು ಈ ಸುದ್ದಿ ಓದಲೇಬೇಕು! ಸಾಮಾನ್ಯವಾಗಿ ನಿಗದಿತ ನಿಲ್ದಾಣಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ರೈಲು ನಿಲ್ಲಿಸುವಂತಿಲ್ಲ. ಇನ್ನು ಏನಾದರೂ ಅಪಾಯ ಎದುರಾದಾಗ ಅನಿವಾರ್ಯವಾಗಿ ರೈಲು ನಿಲ್ಲಿಸಲಾಗುತ್ತದೆ. ಸುಮ್ಮ ಸುಮ್ಮನೆ ರೈಲು ನಿಲ್ಲಿಸಿದರೆ ಖಂಡಿತಾ ಶಿಕ್ಷೆಯಾಗುತ್ತದೆ. ಇದೀಗ ಚಾಲಕನ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಕೇಂದ್ರ ರೖಲ್ವೇ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, 'ವಿಡಿಯೋ ನಮಗೂ ಲಭಿಸಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬೇಕಿದೆಯಷ್ಟೆ ಎಂದಿದ್ದಾರೆ.

ರಸ್ತೆ ಬದಿ ಮೂತ್ರ ವಿಸರ್ಜಿಸ್ತೀರಾ? ಉಗುಳುತ್ತೀರಾ? ನೀವು ಈ ಸುದ್ದಿ ಓದಲೇಬೇಕು!