ಹೃದಯ ಗೆದ್ದ ಜೊಮ್ಯಾಟೋ ಬಾಯ್, ₹500 ಸ್ವೀಕರಿಸಲು ನಿರಾಕರಿಸಿದ ಕಾರಣ ಕೇಳಿ ಜನ ಭಾವುಕ!

ಫುಡ್ ಡೆಲಿವರಿ ಮಾಡಿದ ಜೊಮ್ಯಾಟೋ ಎಜೆಂಟ್‌ಗೆ 500 ರೂಪಾಯಿ ನೀಡಿದರೆ ಸ್ವೀಕರಿಸಲು ನಿರಾಕರಿಸಿದ್ದಾನೆ. ಈ 500 ರೂಪಾಯಿಯನ್ನು ಸ್ವಿಗ್ಗಿ ಡೆಲಿವರಿ ಎಜೆಂಟ್‌ಗೆ ನೀಡುವಂತೆ ಮನವಿ ಮಾಡಿದ್ದಾರೆ. ಈತ ನೀಡಿದ ಕಾರಣ ಕೇಳಿ ನೆಟ್ಟಿಗರು ಭಾವುಕರಾಗಿದ್ದಾರೆ.

Zomato delivery agent refuse take rs 500 suggest to handover swiggy boy viral video ckm

ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕುಳಿತಲ್ಲಿಗೆ ಯಾವುದೇ ಆಹಾರ, ಖಾದ್ಯ ಸೇರಿದಂತೆ ಶಾಪಿಂಗ್ ಮಾಡಲು ಸಾಧ್ಯವಾಗಿದೆ. ಇದರ ನಡುವೆ ಭಾರಿ ಮಳೆ, ಪ್ರವಾಹ ನೀರು, ಕೊರೆವ ಚಳಿ ಸೇರಿದಂತೆ ಹಲವು ಸಂಕಷ್ಟಗಳ ನಡುವೆಯೂ ತಕ್ಕ ಸಮಯಕ್ಕೆ ಆಹಾರ ಡೆಲಿವರಿ ಮಾಡಿ ಡಿಲಿವರಿ ಎಜೆಂಟ್ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೇ ರೀತಿ, ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ತ್ವರಿತ ಫುಡ್ ಡೆಲಿವರಿ ಮಾಡಿದ ಜೊಮ್ಯಾಟೋ ಡೆಲಿವರಿ ಎಜೆಂಟ್‌ಗೆ 500 ರೂಪಾಯಿ ನೀಡಿದ್ದಾಳೆ. ಆದರೆ ಈ ಹಣ ಸ್ವೀಕರಿಸಲು ಜೊಮ್ಯಾಟೋ ಎಜೆಂಟ್ ನಿರಾಕರಿಸಿದ್ದಾನೆ. ಕೊಡಲೇ ಬೇಕು ಎಂದಿದ್ದರೆ ಈ ಹಣವನ್ನು ಸ್ವಿಗ್ಗಿ ಎಜೆಂಟ್‌ಗೆ ನೀಡಿ ಎಂದಿದ್ದಾನೆ. ಇದಕ್ಕೆ ಕಾರಣನ್ನೂ ನೀಡಿದ್ದಾರೆ. ಈತನ ಕಾರಣ ಹಾಗೂ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆ ಸುರಿಮಳೆ ಸುರಿಸಿದ್ದಾರೆ. 

ಯುವತಿಯೊಬ್ಬಳು ಸ್ವಿಗ್ಗಿ ಹಾಗೂ ಜೊಮ್ಯಾಟೋ ಡೆಲಿವರಿ ಸ್ಪೀಡ್ ಪರೀಕ್ಷಿಸಲು ಮುಂದಾಗಿದ್ದಾಳೆ. ಇದಕ್ಕಗಿ ಜೊಮ್ಯಾಟೋ ಹಾಗೂ ಸ್ವಿಗ್ಗಿ ಎರಡರಿಂದಲೂ ಫುಡ್ ಆರ್ಡ್ ಮಾಡಿದ್ದಾಳೆ. ಒಂದೇ ಸಮಯದಲ್ಲಿ ಆರ್ಡರ್ ಮಾಡಿ ಯಾರು ಮೊದಲು ಫುಡ್ ಡೆಲಿವರಿ ಮಾಡುತ್ತಾರೋ ಅವರಿಗೆ 500 ರೂಪಾಯಿ ಬಹುಮಾನ ನೀಡಲು ನಿರ್ಧರಿಸಿದ್ದಾಳೆ. ಇದರಿಂತ ಫುಡ್ ಆರ್ಡರ್ ಮಾಡಿದ್ದಾರೆ.

ಕಣ್ಣಾಲಿ ತೇವಗೊಳಿಸಿದ ಜೊಮ್ಯಾಟೋ ಡೆಲಿವರಿ ಬಾಯ್ ಬದುಕು, ಏನಾಯ್ತು ರಾತ್ರಿ 3 ಗಂಟೆಗೆ?

ಆರ್ಡರ್ ಮಾಡಿದ ಕೆಲ ಹೊತ್ತಲ್ಲೇ ಜೊಮ್ಯಾಟೋ ಡೆಲಿವರಿ ಎಜೆಂಟ್ ಕರೆ ಮಾಡಿ ವಿಳಾಸಕ್ಕೆ ಬಂದಿರುವುದಾಗಿ ಹೇಳಿದ್ದಾನೆ.ಜೊಮ್ಯಾಟೋ ಡೆಲಿವರಿ ಬಾಯ್ ಜೊತೆ ಮಾತನಾಡಿ ಫೋನ್ ಕಟ್ ಮಾಡಿದ ಬೆನ್ನಲ್ಲೇ ಸ್ವಿಗ್ಗಿ ಡೆಲಿವರಿ ಬಾಯ್, ಫುಡ್ ಆರ್ಡರ್ ಮಾಡಿದ್ದೀರಿ, ವಿಳಾಸದಲ್ಲಿ ಇರುವುದಾಗಿ ಹೇಳಿದ್ದಾನೆ.  ಜೊಮ್ಯಾಟೋ ಡೆಲಿವರಿ ಬಾಯ್ 2 ನಿಮಿಷ ಮುಂಚೆ ತಲುಪಿದರೆ, ಬಳಿಕ ಸ್ವಿಗ್ಗಿ ಡೆಲಿವರಿ ತಲುಪಿದೆ. ಹೀಗಾಗಿ ಯುವತಿ ತ್ವರಿತ ಡೆಲಿವರಿ ಮಾಡಿದ ಜೊಮ್ಯಾಟೋಗೆ ಡೆಲಿವರಿ ಎಜೆಂಟ್‌ಗೆ 500 ರೂಪಾಯಿ ಬಹುಮಾನವಾಗಿ ನೀಡಲು ನಿರ್ಧರಿಸಿದ್ದಾಳೆ.

ಡೆಲವರಿ ಪಡೆಯುವಾಗ ತಾನು ನಡೆಸಿದ ಸ್ಪರ್ಧೆ ಕುರಿತು ಜೊಮ್ಯಾಟೋ ಎಜೆಂಟ್‌ಗೆ ಹೇಳಿದ್ದಾಳೆ. ಬಳಿಕ 500 ರೂಪಾಯಿ ಕೊಡಲು ಮುಂದಾಗಿದ್ದಾಳೆ. ಆದರೆ ಜೊಮ್ಯಾಟೋ ಡೆಲಿವರಿ ಬಾಯ್ ಹಣ ಪಡೆಯಲು ನಿರಾಕರಿಸಿದ್ದಾನೆ. ಪರ್ವಾಗಿಲ್ಲ , ಬಹುಮಾನ ಮೊತ್ತ ಸ್ವೀಕರಿಸಿ ಎಂದು ಒತ್ತಾಯಿಸಿದ್ದಾಳೆ. ಇದಕ್ಕೆ ಜೊಮ್ಯಾಟೋ ಡೆಲಿವರಿ ಎಜೆಂಟ್ ನೀಡಿದ ಉತ್ತರಕ್ಕೆ ಯುವತಿ ಅಚ್ಚರಿಗೊಂಡಿದ್ದಾಳೆ. ಈ ಮೊತ್ತವನ್ನು ನೀವು ನನ್ನ ಹಿಂದೆ ಬಂದಿರುವ ಸ್ವಿಗ್ಗಿ ಎಜೆಂಟ್‌ಗೆ ನೀಡಿ. ನಾನು ಬ್ಯಾಚುಲರ್ ಇದ್ದೇನೆ. ಆದರೆ ಸ್ವಿಗ್ಗಿ ಎಜೆಂಟ್ ಫ್ಯಾಮಿಲಿ ಮ್ಯಾನ್. ಈ 500 ರೂಪಾಯಿ ಅವಶ್ಯಕತೆ ನನಗಿಂತ ಫ್ಯಾಮಿಲಿ ಮ್ಯಾನ್‌ಗಿದೆ ಎಂದಿದ್ದಾನೆ. ಬಳಿಕ ಸ್ವಿಗ್ಗಿ ಡೆಲಿವರಿ ಎಜೆಂಟ್ ಬಳಿ ಹಣ ಸ್ವೀಕರಿಸಲು ಸೂಚಿಸಿ ಹೊರಟು ಹೋಗಿದ್ದಾನೆ.

 

 
 
 
 
 
 
 
 
 
 
 
 
 
 
 

A post shared by Dk.. (@dk_editz.__)

 

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಹಳೇ ವಿಡಿಯೋ ಇದಾಗಿದೆ. ಆದರೆ ವಿಡಿಯೋ ನಡೆದ ಸ್ಥಳ, ದಿನಾಂಕದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದರೆ ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಒಂದೇ ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ಹೃದಯವೈಶಾಲ್ಯತೆ ತಳಮಟ್ಟದಿಂದ ಬಂದರೆ ಮಾತ್ರ ಸಾಧ್ಯ. ಶಿಸ್ತು, ಬದ್ಧತೆ, ಗೌರವ ಎಲ್ಲವೂ ಇಲ್ಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಭಾರಿ ಲೈಕ್ಸ್ ಪಡೆದಿದೆ.

ನೋವಿನಲ್ಲೂ ನಗುವ ಕಂಡ ಮನಸ್ಸು, ಮಗು ಕೂರಿಸಿಕೊಂಡೆ ತಾಯಿ ಜೊಮ್ಯಾಟೋ ಡೆಲಿವರಿ!
 

Latest Videos
Follow Us:
Download App:
  • android
  • ios