Asianet Suvarna News Asianet Suvarna News

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಝಡ್‌ ಪ್ಲಸ್ ಭದ್ರತೆ

ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈಗೆ ಕೇಂದ್ರ ಗೃಹ ಇಲಾಖೆಯು ‘ಝಡ್‌’ ಸುರಕ್ಷತೆ ನೀಡಿದೆ.

Z Plus security for Tamil Nadu BJP president Annamalai akb
Author
First Published Jan 14, 2023, 8:59 AM IST

ಚೆನ್ನೈ: ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈಗೆ ಕೇಂದ್ರ ಗೃಹ ಇಲಾಖೆಯು ‘ಝಡ್‌’ ಸುರಕ್ಷತೆ ನೀಡಿದೆ. ನಕ್ಸಲರು ಮತ್ತು ಮತೀಯ ತೀವ್ರಗಾಮಿಗಳಿಂದ ಪದೇಪದೇ ಬೆದರಿಕೆ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರನ್ವಯ ಅವರಿಗೆ ಇನ್ನು 33 ಕಮಾಂಡೋ ಭದ್ರತೆ ಸಿಗಲಿದೆ. ಇದುವರೆಗೂ ಅಣ್ಣಾಮಲೈ ‘ವೈ’ ಶ್ರೇಣಿ ಭದ್ರತೆ ಹೊಂದಿದ್ದರು.


ಮಹಿಳಾ ಕಾನ್‌ಸ್ಟೇಬಲ್‌ಗೆ ಡಿಎಂಕೆ ಕಾರ್ಯಕರ್ತರ ಕಿರುಕುಳ

ಜನವರಿ 1, 2023 ರಂದು ಅಂದರೆ ಭಾನುವಾರ ತಮಿಳುನಾಡಿನ (Tamil Nadu) ಚೆನ್ನೈನಲ್ಲಿ (Chennai) ನಡೆದ ದ್ರಾವಿಡ ಮುನ್ನೇತ್ರ ಕಳಗಂ (Dravida Munnetra Kazhagam) ಸಭೆಯಲ್ಲಿ (Meeting) ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ಡಿಎಂಕೆಯ (DMK) ಇಬ್ಬರು ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಈ ಆರೋಪದ ಮೇಲೆ ಇಬ್ಬರು ಡಿಎಂಕೆ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಗಲಾಟೆ ನಡೆದಿದೆ. ಪೊಲೀಸರು (Police) ಅವರನ್ನು ವಶಕ್ಕೆ ಪಡೆಯುತ್ತಿದ್ದ ವೇಳೆ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಕಾರ್ಯಕರ್ತರು ಅವರನ್ನು ಸುತ್ತುವರಿದಿದ್ದು ತೀವ್ರ ಗದ್ದಲ ಸೃಷ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ತಮಿಳುನಾಡು ರಾಜಧಾನಿ ಚೆನ್ನೈನ ಸಾಲಿಗ್ರಾಮಮ್ ಪ್ರದೇಶದ (Saligramam Area) ದಶರಥಪುರಂ ಬಸ್ ನಿಲ್ದಾಣದ ಬಳಿ ಡಿಎಂಕೆ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಪಕ್ಷದ  ಸಂಸದೆ ಕನಿಮೊಳಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಅನೇಕ ಸಾಮಗ್ರಿಗಳನ್ನು ಉಡುಗೊರೆ ನೀಡಿದರು ಎಂದು ತಿಳಿದು ಬಂದಿದೆ. 

ಸಿಬ್ಬಂದಿಗೆ ಬಿಗ್‌ ಶಾಕ್! ಡಿಜೆ ಹಳ್ಳಿಯಲ್ಲಿ ಅಣ್ಣಾಮಲೈ ಸೂತ್ರ ಪ್ರಯೋಗಕ್ಕೆ ಮುಂದಾದ ಕಮಿಷನರ್?

ಈ ಸಭೆ ಮುಗಿಯುತ್ತಿದ್ದಂತೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಪ್ರವೀಣ್ ಮತ್ತು ಏಕಂಬರಂ ಎಂಬ ಇಬ್ಬರು ದುಷ್ಕರ್ಮಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ದು:ಖ ತೋಡಿಕೊಂಡಿದ್ದಾರೆ. ಈ ವೇಳೆ ಆ ಇಬ್ಬರು ಡಿಎಂಕೆ ಕಾರ್ಯಕರ್ತರು ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ಸುತ್ತುವರೆದರು, ಅಲ್ಲದೆ, ಒಬ್ಬರು ಇನ್ಸ್‌ಪೆಕ್ಟರ್ ಈ ಇಬ್ಬರನ್ನೂ ಹಿಡಿದುಕೊಂಡರು ಎಂದು ತಿಳಿದುಬಂದಿದೆ. ಆದರೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಂತೆ, ಡಿಎಂಕೆ ಕಾರ್ಯಕರ್ತರು ಅವರನ್ನು ಸುತ್ತುವರೆದು ಗದ್ದಲ ಸೃಷ್ಟಿಸಿದ್ದು,  ಯಾವುದೇ ದೂರು ದಾಖಲಾಗದ ಕಾರಣ ಆರೋಪಿಗಳನ್ನು ಬಿಟ್ಟು ಬಿಡಲಾಯಿತು ಎಂದು ತಿಳಿದುಬಂದಿದೆ. 

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಅಣ್ಣಾಮಲೈ, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್‌ ಮೂಲಕ ಕಿಡಿ ಕಾರಿದ್ದಾರೆ. ಸಂಸದೆ ಕನಿಮೊಳಿ ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ಡಿಎಂಕೆ ಯುವ ಘಟಕದ ಇಬ್ಬರು ಕಾರ್ಯಕರ್ತರು ರಕ್ಷಣಾ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ. ಹೆಚ್ಚು ಅಸಹ್ಯಕರ ಸಂಗತಿಯೆಂದರೆ, ಡಿಎಂಕೆ ಕಾರ್ಯಕರ್ತರು ಸುತ್ತುವರಿದು ಆ ಇಬ್ಬರು ವ್ಯಕ್ತಿಗಳನ್ನು ಬಂಧಿಸದಂತೆ ಪೊಲೀಸರನ್ನು ತಡೆದರು ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಮೂಕ ಪ್ರೇಕ್ಷಕರಾಗಿದ್ದಾರೆ ಎಂದೂ ಬಿಜೆಪಿ ಮುಖ್ಯಸ್ಥ ಆರೋಪಿಸಿದ್ದಾರೆ. 

ಭಾರತೀಯರೆಂದು ಸಾಬೀತಿಗೆ ಹಿಂದಿ ಕಲೀಬೇಕಿಲ್ಲ: ಅಣ್ಣಾಮಲೈ

Follow Us:
Download App:
  • android
  • ios