ಬಹುಶಃ ಇದು ಈ ವ್ಯಕ್ತಿಯ ಜೀವನದ ಕರಾಳ ದಿನ ಇರಬಹುದು. ಮೊಬೈಲ್‌ ಫೋನ್‌ ಕಳ್ಳತನವಾಗಿದೆ ಎಂದು ಪೊಲೀಸ್‌ ಸ್ಟೇಷನ್‌ಗೆ ದೂರು ನೀಡಲು ಹೋಗುವ ಹಾದಿಯಲ್ಲಿ ಕಳ್ಳನೊಬ್ಬ ಈತನ ಬೈಕ್‌ಅನ್ನೇ ಎಗರಿಸಿಬಿಟ್ಟಿದ್ದಾನೆ. 

ಪುಣೆ (ಜು.28): ಬಹುಶಃ ಇದು ವ್ಯಕ್ತಿಯೊಬ್ಬನ ಅತ್ಯಂತ ದುರಾದೃಷ್ಟದ ದಿನವಾಗಿರಬಹುದದು. 29 ವರ್ಷದ ಪುಣೆಯ ವ್ಯಕ್ತಿ, ತನ್ನ ಮೊಬೈಲ್‌ ಫೋನ್‌ ಕಳ್ಳತನವಾಗಿದೆ ಅದನ್ನು ಹುಡುಕಿಕೊಡಿ ಎಂದು ಪೊಲೀಸ್‌ ಸ್ಟೇಷನ್‌ಗೆ ದೂರು ನೀಡುವ ಹಾದಿಯಲ್ಲಿಯೇ, ಇನ್ನೊಬ್ಬ ಕಳ್ಳ ಈತನ ಬೈಕ್‌ಅನ್ನೇ ಎಗರಿಸಿಬಿಟ್ಟಿದ್ದಾನೆ. ಇನ್ನೂ ಅಚ್ಚರಿಯ ವಿಚಾರವೆಂದರೆ, ಎರಡೂ ಸಂದರ್ಭಗಳಲ್ಲಿ ತನ್ನ ವಸ್ತುಗಳನ್ನು ಕದ್ದ ವ್ಯಕ್ತಿಗಳಿಗೆ ಅವರು ಸಹಾಯ ಮಾಡುತ್ತಿದ್ದರು. ಆದರೆ, ದುರಾದೃಷ್ಟಕ್ಕೆ ಈ ವ್ಯಕ್ತಿಯ ಒಳ್ಳೆಯತನವೇ ಮುಳುವಾಗಿ ಪರಿಣಮಿಸಿದೆ. ಒಂದೇ ದಿನ ಮೊಬೈಲ್‌ ಹಾಗೂ ಬೈಕ್‌ ಎರಡನ್ನೂ ಕಳೆದುಕೊಂಡಿದ್ದಾರೆ. ಕೆಲಸದ ಕಾರಣದಿಂದಾಗಿ ವ್ಯಕ್ತಿ ಇತ್ತೀಚಿಗಷ್ಟೇ ಪುಣೆಗೆ ಶಿಫ್ಟ್‌ ಆಗಿದ್ದರು. ಪುಣೆಯ ಯಾವ ಪ್ರದೇಶದ ಮಾಹಿತಿಗೂ ಆತನಿಗೆ ಇದ್ದಿರಲಿಲ್ಲ. ಜುಲೈ 20 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಸಹಾಯ ಬೇಡಿ ಈತ ಮುಂದೆ ಎದುರಾಗಿದ್ದ. ಅನಾಮಿಕ ವ್ಯಕ್ತಿ, ತನ್ನೂರು ಬುಲ್ದಾನಾಕ್ಕೆ ಹೋಗಲು ಸ್ವಲ್ಪ ಹಣ ಬೇಕು, ಕೊಡ್ತೀರಾ ಎಂದು ಕೇಳಿದ್ದ. ಆತನ ಪರಿ ಪರಿಯಾದ ಬೇಡಿದ್ದರಿಂದ ಯುಪಿಐ ಮೂಲಕ ಆತನಿಗ 500 ರೂಪಾಯಿ ಸಂದಾಯ ಮಾಡಿದ್ದ. ಇದಾದ ಬಳಿಕ, ಒಂದು ಫೋನ್‌ ಕರೆ ಮಾಡಬೇಕು. ನಿಮ್ಮ ಫೋನ್‌ ಕೊಡ್ತೀರಾ? ಎಂದು ಕೇಳಿದ್ದಾನೆ.

ಆತನ ಸ್ಥಿತಿ ಕಂಡು ಮರುಕಪಟ್ಟಿದ್ದ ವ್ಯಕ್ತಿ, ಫೋನ್‌ ಕೊಟ್ಟಿದ್ದಾನೆ. ಆದರೆ, ಫೋನ್‌ ಮಾಡುವ ನೆಪದಲ್ಲಿ ಕ್ಷಣಾರ್ಧದಲ್ಲಿ ಅನಾಮಿಕ ವ್ಯಕ್ತಿ ಫೋನ್‌ ಹಿಡಿದುಕೊಂಡು ಪರಾರಿಯಾಗಿದ್ದಾನೆ. ಆತನನ್ನು ಹಿಡಿಯುವ ಪ್ರಯತ್ನ ಮಾಡಿದರಾದರೂ, ಅದರಲ್ಲಿ ಯಶಸ್ವಿಯಾಗಲಿಲ್ಲ.

ಮುಂದಾಗಿದ್ದೇನು: ನೇರಾನೇರ ಎದುರಲ್ಲೇ ಫೋನ್‌ ಕಳ್ಳತನವಾಗಿದ್ದರಿಂದ, ಅಕ್ಕಪಕ್ಕದವರಿಗೆ ಇಲ್ಲಿ ಪೊಲೀಸ್‌ ಸ್ಟೇಷನ್‌ ಎಲ್ಲಿದೆ ಅನ್ನೋದನ್ನು ವಿಚಾರಿಸಿದ್ದ. ಯಾವ ಕಡೆಯಿಂದ ಹೋದರೆ ಪೊಲೀಸ್‌ ಸ್ಟೇಷನ್‌ಗೆ ಹತ್ತಿರವಾಗುತ್ತದೆ ಎನ್ನುವುದನ್ನು ವಿಚಾರಿಸಿದ್ದ. ಈ ವೇಳೆ ಆತನ ಎದುರಿಗೆ ಬಂದ ಇನ್ನೊಬ್ಬ ವ್ಯಕ್ತಿ, ನನಗೆ ಪೊಲೀಸ್‌ ಸ್ಟೇಷನ್‌ನಲ್ಲಿ ತುಂಬಾ ಜನ ಪರಿಚಯವಿದ್ದಾರೆ. ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ಬೈಕ್‌ ಕೊಡಿ ಎಂದು ಹೇಳಿದ್ದ. ಅದರಂತೆ ಬೈಕ್‌ ಆತನಿಗೆ ಕೊಟ್ಟು ಹಿಂಬದಿ ಸೀಟ್‌ನಲ್ಲಿ ವ್ಯಕ್ತಿ ಕುಳಿತಿದ್ದ. ಕೆಲ ದೂರ ಸಾಗಿದ ಬಳಿಕ, ನನಗೆ ಸಿಗರೇಟ್‌ ಸೇದಬೇಕು ಅನಿಸುತ್ತಿದೆ. ಅಂಗಡಿಗೆ ಹೋಗಿ ಸಿಗರೇಟ್‌ ತಂದುಕೊಡ್ತೀರಾ ಎಂದು ಕೇಳಿದ್ದಾನೆ. ಅದರಂತೆ ಫೋನ್‌ ಕಳೆದುಕೊಂಡಿದ್ದ ವ್ಯಕ್ತಿ, ಸಿಗರೇಟ್‌ ತರಲು ಅಂಗಡಿಗೆ ಹೋಗಿ ಬರುವ ವೇಳೆ, ಬೈಕ್‌ ಓಡಿಸುತ್ತಿದ್ದ ಕಳ್ಳ ಅದರೊಂದಿಗೆ ಪರಾರಿಯಾಗಿದ್ದಾನೆ.

Star Series Bank Note: ಸ್ಟಾರ್‌ ಸರಣಿಯದ್ದು ಕಾನೂನುಬದ್ಧ ನೋಟುಗಳು, ಆರ್‌ಬಿಐ ಸ್ಪಷ್ಟನೆ

29 ವರ್ಷದ ಯುವಕ ಸಿಗರೇಟ್ ತೆಗೆದುಕೊಳ್ಳಲು ಹೋದಾಗ ಕಳ್ಳ ಬೈಕ್ ಸಮೇತ ಪರಾರಿಯಾಗಿದ್ದಾನೆ. ಮಂಗಳವಾರ ಈ ಕುರಿತಾಗಿ ಪುಣೆ ಭೋಸಾರಿ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಫೋನ್‌ ಕದ್ದುಕೊಂಡು ಹೋದ ವ್ಯಕ್ತಿ, ತನ್ನ ಅಕೌಂಟ್‌ನಿಂದ 3 ಸಾವಿರ ರೂಪಾಯಿ ತೆಗೆದುಕೊಂಡಿದ್ದಾನೆ ಎಂದೂ ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸರು ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್‌ 406 ಹಾಗೂ 420 ಕೇಸ್‌ಗಳನ್ನು ದಾಖಲಿಸಿದ್ದಾರೆ. ಹಾಗೇನಾದರೂ ಮುಂದೆ ನಿಮಗೆ ಒಳ್ಳೆಯ ಕೆಲಸ ಮಾಡಬೇಕು ಅಂದಾ ಅನಿಸಿದಾಗ ಈ ಪ್ರಕರಣ ನೆನಪಿನಲ್ಲಿರಲಿ. 

ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಿಂದ 2.09 ಲಕ್ಷ ಕೋಟಿ ಬ್ಯಾಡ್‌ ಲೋನ್‌ ರೈಟ್‌ ಆಫ್‌!