ಚಿತ್ತೂ​ರು(ಫೆ.22): ಆಂಧ್ರ​ಪ್ರ​ದೇಶದಲ್ಲಿ ಪಂಚಾ​ಯತ್‌ ಚುನಾ​ವ​ಣೆ​ ಘೋಷಣೆ ಆಗಿರುವ ಬೆನ್ನಲ್ಲೇ, ಮುಖ್ಯ​ಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎ​ಸ್‌​ಆ​ರ್‌ ಕಾಂಗ್ರೆಸ್‌ ಸರ್ಕಾ​ರ ಜನಕ್ಕೆ ತಿರು​ಪ​ತಿಯ ಪ್ರಸಾ​ದ​ದ ಲಡ್ಡು​ಗ​ಳನ್ನು ಆಮಿಷದ ರೂಪದಲ್ಲಿ ವಿತ​ರಿ​ಸುತ್ತಿದೆ ಎಂಬ ಆರೋಪ ಕೇಳಿ​ಬಂದಿದೆ.

ಸ್ಥಳೀಯ ಸಂಸ್ಥೆ​ಗಳ ಚುನಾ​ವಣೆ ಗೆಲು​ವಿ​ಗಾಗಿ ಜಗನ್‌ ಸರ್ಕಾ​ರವು ಇಡೀ ಆಡ​ಳಿತ ಯಂತ್ರ​ವನ್ನೇ ದುರು​ಪ​ಯೋ​ಗ​ಪ​ಡಿ​ಸಿ​ಕೊ​ಳ್ಳು​ತ್ತಿದೆ. ಮತದಾರರಿಗೆ ಬೇಕಾಬಿಟ್ಟಿಯಾಗಿ ತಿರುಪತಿ ಲಡ್ಡು ಹಂಚುತ್ತಿದೆ ಎಂದು ವಿಪಕ್ಷ ತೆಲುಗುದೇಶಂ ದೂರಿದೆ.

ಪಡಿ​ತರ ಪೂರೈ​ಸುವ ವಾಹ​ನ​ಗ​ಳಲ್ಲೇ ಲಡ್ಡು​ಗ​ಳನ್ನು ವಿತ​ರಿ​ಸ​ಲಾ​ಗು​ತ್ತಿದ್ದು, ವೈಎ​ಸ್‌​ಆ​ರ್‌ಪಿ ಪಕ್ಷಕ್ಕೆ ಮತ ಹಾಕು​ವಂತೆ ಸೂಚಿ​ಸ​ಲಾ​ಗು​ತ್ತಿ​ದೆ​ ಎಂದು ಟಿಡಿಪಿ ದೂರಿದೆ.