ಶಿಶುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದು ಹೇಗೆ ಎಂದು ಅಸಹ್ಯವಾಗಿ ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹರಿ ಬಿಡುತ್ತಿದ್ದ ಮಹಿಳಾ ಯೂಟ್ಯೂಬರ್ ಓರ್ವಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. 

ಘಾಜಿಯಾಬಾದ್: ಶಿಶುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದು ಹೇಗೆ ಎಂದು ಅಸಹ್ಯವಾಗಿ ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹರಿ ಬಿಡುತ್ತಿದ್ದ ಮಹಿಳಾ ಯೂಟ್ಯೂಬರ್ ಓರ್ವಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಶಿಖಾ ಮೇತ್ರಾಯ್ ಎಂದು ಗುರುತಿಸಲಾಗಿದ್ದು, ಈಕೆ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದವಳು. ಈಕೆ ಕುವರಿ ಬೇಗಂ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ತನ್ನ ಯೂಟ್ಯೂಬ್ ಚಾನೆಲ್‌ನ ಲೈವ್ ಸ್ಟ್ರೀಮ್‌ನಲ್ಲಿ ತನ್ನ ಫಾಲೋವರ್ಸ್‌ಗಳಿಗೆ ಹೇಗೆ ನವಜಾತ ಶಿಶುಗಳಿಗೆ ಲೈಂಗಿಕ ಕಿರುಕುಳ ನೀಡಬಹುದು ಎಂದು ಪಾಠ ಮಾಡುತ್ತಿದ್ದಳು. ಈಕೆಯ ಫಾಲೋವರ್ಸ್‌ಗಳು ಬಹುತೇಕ ಎಳೆ ವಯಸ್ಸಿನ ತರುಣರೇ ಆಗಿದ್ದಾರೆ. 

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

 ಶಿಖಾ ಮೇತ್ರಾಯ್ ಎಂಬ ಈ ವಿಕೃತ ಮನಸ್ಥಿತಿಯ ಯೂಟ್ಯೂಬರ್ ಮಾಡಿದ್ದ ಈ ಆಘಾತಕಾರಿ ವೀಡಿಯೋ ನಂತರ ಮತ್ತೊಂದು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟ್ಟರ್‌ನಲ್ಲಿಯೂ ಪೋಸ್ಟ್ ಆಗಿ ವೈರಲ್ ಆಗಿತ್ತು. ಇದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಗಮನಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡ ದಾಖಲಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಬಂಧನಕ್ಕಾಗಿ ಎರಡು ಪೊಲೀಸ್ ತಂಡವನ್ನು ರಚಿಸಲಾಗಿತ್ತು ಎಂದು ಹೆಚ್ಚುವರಿ ಸಿಪಿ ದಿನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. 

ನಾಯಿ ಜೊತೆ ತಮಾಷೆ ಮಾಡಲು ಹೋಗಿ ಸರಿಯಾಗಿ ಕಚ್ಚಿಸಿಕೊಂಡ ಯೂಟ್ಯೂಬರ್: ವೀಡಿಯೋ ವೈರಲ್

ಎಕಾಂ ನ್ಯಾಯ ಎಂಬ ಫೌಂಡೇಶನೊಂದರ ಸ್ಥಾಪಕರು ಆಗಿರುವ ಸಾಮಾಜಿಕ ಕಾರ್ಯಕರ್ತರು ಆಗಿರುವ ದೀಪಿಕಾ ನಾರಾಯಣ್ ಭಾರದ್ವಾಜ್ ಎಂಬುವವರು ಟ್ವಿಟ್ಟರ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿ, ಅಲ್ಲಿದ್ದ ವೀಡಿಯೋಗಳನ್ನು ತೆಗೆಸಲು ಹೇಳಿದ್ದರು. ಜೊತೆಗೆ ಈ ವಿಕೃತ ಯೂಟ್ಯೂಬರ್‌ ಶಿಖಾ ಮೇತ್ರಾಯ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. 

ವೈರಲ್ ಆದ ವೀಡಿಯೋದಲ್ಲಿ ಏನಿದೆ.

ವೈರಲ್ ಆಗಿರುವ ಈ ಸಮಾಜಘಾತಕ ವೀಡಿಯೋಗಳಲ್ಲಿ, ಕುವರಿ ಬೇಗಂ ಕಾಣಿಸಿಕೊಂಡು ತನ್ನ ಫಾಲೋವರ್ ಒಬ್ಬನ ಮನವಿಯನ್ನು ಓದುತ್ತಾಳೆ. ಇದರಲ್ಲಿ ಆತ ಹಸ್ತಮೈಥುನಕ್ಕೆ ಸಂಬಂಧಿಸಿದಂತೆ ವಿಭಿನ್ನ ಟ್ರಿಕ್ಸ್‌ಗಳನ್ನು ಆಕೆಯ ಬಳಿ ಕೇಳಿದ್ದಾನೆ. ಇದಕ್ಕೆ ಉತ್ತರಿಸುವ ಆಕೆ ಮೊದಲಿಗೆ ನವಜಾತ ಶಿಶುವನ್ನು ಗುರುತಿಸಿ ಬಳಿಕ ಆ ಮಗುವಿನ ತಾಯಿಗೆ ಹೇಳಿ, ನಾನು ಆಕೆಯನ್ನು ಆಡವಾಡಲು ಕರೆದುಕೊಂಡು ಹೋಗುವೆ ಎಂದು ಹೇಳಿ ಬಳಿಕ ಮಗುವನ್ನು ಹೊರಗೆ ಕರೆತನ್ನಿ ಹಾಗೂ ನಿಮಗಿಷ್ಟ ಬಂದಂತೆ ಮಾಡಿ ಎಂದು ಆಕೆ ಹೇಳಿದ್ದಾಳೆ. ವರದಿಗಳ ಪ್ರಕಾರ ಈ ಮಹಿಳೆಯ ಇಡೀ ಚಾನೆಲ್ ಸಂಪೂರ್ಣವಾಗಿ ಆಶ್ಲೀಲ ಕಂಟೆಂಟ್‌ಗಳಿಂದಲೇ ಕೂಡಿದೆ ಎಂದು ತಿಳಿದು ಬಂದಿದೆ. 

ಕಿಕ್ ಇಳಿಸಿದ್ರಾ ಪೊಲೀಸ್ರು: ಪಾರ್ಟಿಗೆ ಹಾವಿನ ವಿಷ ಪೂರೈಸಿದ್ದು ನಿಜ ಎಂದು ಒಪ್ಪಿಕೊಂಡ ಬಿಗ್‌ಬಾಸ್ ಸ್ಪರ್ಧಿ

ಈಕೆಯನ್ನು ಈಗ ಪೊಲೀಸರು ಬಂಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಂದಿರಾಪುರದ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ರಿತೇಶ್ ತ್ರಿಪಾಠಿ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, ಮಹಿಳೆಯನ್ನು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆಕೆಯ ಲ್ಯಾಪ್‌ಟಾಪ್ ಹಾಗೂ ಫೋನ್ ಜಪ್ತಿ ಮಾಡಲಾಗಿದೆ. ಹಾಗೆಯೇ ಆಕೆಯ ಬಂಧನದ ವೀಡಿಯೋವನ್ನು ಗಾಜಿಯಾಬಾದ್ ಪೊಲೀಸರ ಟ್ವಿಟ್ಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈಕೆಯ ವೀಡಿಯೋಗಳಿಗೆ ವ್ಯಾಪಕ ಆಕ್ರೋಶ ಕೇಳಿ ಬಂದ ನಂತರ ಈಕೆ ನಾಪತ್ತೆಯಾಗಿದ್ದಳು. 

ಅದೇನೆ ಇರಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ಹೆಚ್ಚು ಕೇಳಿ ಬರುತ್ತಿದ್ದು, ಪುಟ್ಟ ಪುಟ್ಟ ಮಕ್ಕಳನ್ನು ಸುರಕ್ಷಿತವಾಗಿರಿಸುವುದೇ ಪೋಷಕರಿಗೆ ದೊಡ್ಡ ಸಮಸ್ಯೆಯಾಗಿದೆ. ಇಂತಹ ಸ್ಥಿತಿ ಇರುವಾಗ ಈ ರೀತಿ ಮಕ್ಕಳ ಮೇಲೆ ದೌರ್ಜನ್ಯವೆಸಗುವುದು ಹೇಗೆ ಎಂದು ಪಾಠ ಮಾಡುವ ಈ ಸಮಾಜಘಾತುಕ ಕ್ರಿಮಿಗೆ ಎಂಥಾ ಶಿಕ್ಷೆ ನೀಡಬಹುದು ನೀವೇ ಹೇಳಿ...

Scroll to load tweet…
Scroll to load tweet…
Scroll to load tweet…