Asianet Suvarna News Asianet Suvarna News

ಪ್ರೈವೇಟ್ ಫೋಟೋ ಲೀಕ್ ಮಾಡ್ತೀನಿ ಎಂದ ಗೆಳೆಯನ ವಿರುದ್ಧ ದೂರು ದಾಖಲಿಸಿದ ಖ್ಯಾತ ಯುಟ್ಯೂಬರ್

ಆತ ಒಳ್ಳೆಯವನು ಅಂತ ನಂಬಿದ್ದೆ, ಆರಂಭದಲ್ಲಿ ಹಣ ಕೊಟ್ಟೆ. ಆದರೆ ಅವನು ಫೋಟೋ  ಲೀಕ್ ಮಾಡುವೆ ಎಂದು ಹಣ  ಕೇಳಲು ಆರಂಭಿಸಿದ. ಆದ್ದರಿಂದ  ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ ಎಂದು ಯುಟ್ಯೂಬರ್ ಹೇಳಿದ್ದಾರೆ.

Youtuber  Anjali Chauhan Filed Complaint Against Boyfriend who blackmail mrq
Author
First Published Aug 22, 2024, 5:20 PM IST | Last Updated Aug 22, 2024, 5:20 PM IST

ಮುಂಬೈ: ಇಂದು ಯಾರನ್ನು ನಂಬಬೇಕೆಂದು ಗೊತ್ತೇ ಆಗಲ್ಲ. ನಂಬಿದವರು ಮೋಸ ಮಾಡಿದಾಗ ನಾನು ತಪ್ಪು ಮಾಡಿದೇ ಅಂತ ಗೋಳಾಡುತ್ತಾರೆ. ಅದರಲ್ಲಿಯೂ ಪ್ರೀತಿ ಪ್ರೇಮದಂತ ಪ್ರಕರಣಗಳು ಮೋಸದಲ್ಲಿ ಅಂತ್ಯವಾಗುತ್ತಿರುತ್ತವೆ. ಪ್ರೀತಿಸಿದ ಹುಡುಗ ಮೋಸ ಮಾಡಿದಕ್ಕೆ ಯುವತಿಯರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುತ್ತಾರೆ. ಇದೀಗ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಯುಟ್ಯೂಬರ್ ತನ್ನನ್ನು ಹಣಕ್ಕಾಗಿ ಬ್ಲಾಕ್‌ಮೇಲ್ ಗೆಳೆಯನ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹಾಗಾದ್ರೆ ಯಾರು ಯುಟ್ಯೂಬರ್ ಎಂಬುದರ ಮಾಹಿತಿ ಇಲ್ಲಿದೆ. 

ಯುಟ್ಯೂಬರ್ ಅಂಜಲಿ ಚೌಹಾಣ್ ಗೆಳೆಯನ ವಿರುದ್ಧ ದೂರು ದಾಖಲಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಅಂಜಲಿ, ಆರಂಭದಲ್ಲಿ ಟಿಕ್‌ಟಾಕ್‌ ವಿಡಿಯೋ ಮಾಡುತ್ತಿದ್ದರು. ಟಿಕ್‌ಟಾಕ್ ಬ್ಯಾನ್ ಬಳಿಕ ಯುಟ್ಯೂಬ್‌ಗೆ ಎಂಟ್ರಿ ಕೊಟ್ಟ ಅಂಜಲಿ ಚೌಹಾಣ್ ತಮ್ಮ ವಿಡಿಯೋಗಳಿಂದಲೇ ಜನಪ್ರಿಯರಾದರು. ಅಂಜಲಿ ಚೌಹಾಣ್ ಶಾರ್ಟ್ ವಿಡಿಯೋಗಳು, ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಅಂಜಲಿಯನ್ನು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ ಜನರು ಹೋಲಿಕೆ ಮಾಡುತ್ತಿರುತ್ತಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಂಜಲಿ ಚೌಹಾಣ್ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. 

ನಾಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿ ಎಟಿಎಂ ಸಹಾಯದಿಂದ ಮನೆ ತಲುಪಿದ್ದು ಹೇಗೆ ನೋಡಿ

ಇದೀಗ ತಮ್ಮ ಖಾಸಗಿ ವಿಷಯದಿಂದ ಅಂಜಲಿ ಚರ್ಚೆಯಲ್ಲಿದ್ದಾರೆ. ಎಫ್‌ಐಆರ್ ಪ್ರಕಾರ, ಅಂಜಲಿಗೆ ವಿಕ್ಕಿ ಶರ್ಮಾ ಎಂಬ ಯುವಕನ ಪರಿಚಯವಾಗುತ್ತದೆ. ಸ್ನೇಹ ಪ್ರೀತಿಯಾಗಿ ಬದಲಾಗಲು ತುಂಬಾ ಸಮಯ ಬೇಕಿರಲಿಲ್ಲ. ಪ್ರೀತಿ ಶುರುವಾದ ಬಳಿಕ ಚಾಟಿಂಗ್-ಕಾಲಿಂಗ್ ಶುರುವಾಗಿತ್ತು. ಇಬ್ಬರು ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆದ್ರೆ ವಿಕ್ಕಿ ಶರ್ಮಾ ಇಬ್ಬರ ಕಾಲ್ ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ಕಾಲ್ ರೆಕಾರ್ಡ್ ಮತ್ತು ಖಾಸಗಿ ಫೋಟೋಗಳನ್ನು ಲೀಕ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಹಾಗಾಗಿ ವಿಕ್ಕಿ ಶರ್ಮಾ ವಿರುದ್ಧ ಅಂಜಲಿ ದೂರು ದಾಖಲಿಸಿದ್ದಾರೆ. 

ದೂರು ದಾಖಲಾಗಿರುವ ಕುರಿತು ಅಂಜಲಿ ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಕಾಲ್ ರೆಕಾರ್ಡಿಂಗ್ ಮತ್ತು ಫೋಟೋಗಳನ್ನು ಲೀಕ್ ಮಾಡುವೆ ಎಂದು ವಿಕ್ಕಿ ಹೆದರಿಸುತ್ತಿದ್ದನು. ಆರಂಭದಲ್ಲಿ ನಾನು ವಿಕ್ಕಿಗೆ ಹಣ ಕೊಡಲು ಶುರು ಮಾಡಿದೆ. ಇದುವರೆಗೂ ನಾನು ವಿಕ್ಕಿಗೆ 95 ಸಾವಿರ ರೂಪಾಯಿ ನೀಡಿದ್ದೇನೆ. ಆದ್ರೆ ಆತ ಹಣ ಕೇಳುವದನ್ನೇ ಅಭ್ಯಾಸ ಮಾಡಿಕೊಂಡನು. ಮನುಷ್ಯನಿಗೆ ನಿಯತ್ತು ಎಂಬುವುದು ಇರಬೇಕು. ಆತ ಒಳ್ಳೆಯವನ ಅಂತ ನಂಬಿದ್ದೆ. ಆದರೆ ವಿಕ್ಕಿ ಶರ್ಮಾ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದರಿಂದ ದೂರು ದಾಖಲಿಸಿದ್ದೇನೆ ಎಂದು ಅಂಜಲಿ ಚೌಹಾಣ್ ಹೇಳಿದ್ದಾರೆ. 

ಐದು ಮಕ್ಕಳ ತಾಯಿ ನಾನು, ಬಿಟ್ಟು ಬಿಡೆಂದು ಗೋಗೆರದರೂ ಹಾಳು ಮಾಡಿದ ರಾಜಕಾರಣಿಯ ಕಾಮುಕ ಮಗ!

Latest Videos
Follow Us:
Download App:
  • android
  • ios