* ಅಗ್ನಿಪಥ್‌ ವಿರೋಧಿಸಿ ಪ್ರತಿಭಟನೆ* ಹಿಂಸಾಚಾರಕ್ಕೆ ರಾಕೇಶ್ ಬಲಿ* ಸೇನೆ ಸೇರಲು ಬಯಸಿ, ಸಿದ್ಧತೆ ನಡೆಸಿದ್ದ ಯುವಕ

ಸಿಕಂದರಾಬಾದ್(ಜು.18): ಸಹೋದರಿ ಹಾದಿಯಲ್ಲೇ ತೆಲಂಗಾಣದ ಡಿ ರಾಕೇಶ್ ಸೇನೆ ಸೇರುವ ತಯಾರಿಯಲ್ಲಿ ನಿರತರಾಗಿದ್ದರು. ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ರಾಕೇಶ್‌ಗೆ ಕೊರೋನಾದಿಂದಾಗಿ ಲಿಖಿತ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಈಗ ಅಗ್ನಿಪಥ್ ಯೋಜನೆಯನ್ನು ಘೋಷಿಸಲಾಗಿದೆ. ಆದರೆ ಈ ಯೋಜನೆ ಘೋಚಣೆಯಾದ ಬೆನ್ನಲ್ಲೇ ಇದನ್ನು ವಿರೋಧಿಸಿ ಶುಕ್ರವಾರ ಬೆಳಗ್ಗೆ ಸಿಕಂದರಾಬಾದ್ ನಿಲ್ದಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಜನಸಂದಣಿಯ ಮೇಲೆ ರೈಲ್ವೇ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ರಾಕೇಶ್ ಸಾವನ್ನಪ್ಪಿದ್ದಾನೆ. ಗಡಿಯಲ್ಲಿ ಶತ್ರುಗಳನ್ನು ಸದೆಬಡಿಯಬೇಕಿದ್ದ ಮಗ ರಾಜ್ಯ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ರಾಕೇಶ್ ಕುಟುಂಬಸ್ಥರು ಹೇಳಿದ್ದಾರೆ.

ವಾಸ್ತವವಾಗಿ, ಶುಕ್ರವಾರ, ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆದಿತ್ತು. ಈ ವೇಳೆ ಪೊಲೀಸರ ಗುಂಡಿಗೆ ಯುವಕನೊಬ್ಬ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ನಂತರ ಪೊಲೀಸರು ಯುವಕನನ್ನು ದಾಮೋದರ್ ರಾಕೇಶ್ ಎಂದು ಗುರುತಿಸಿದ್ದಾರೆ. ರಾಕೇಶ್ ಸಾವಿನ ಸುದ್ದಿ ಕೇಳಿ ಹೆತ್ತವರು ಕಂಬನಿ ಮಿಡಿದಿದ್ದಾರೆ. ಕೇಂದ್ರದ ಅಗ್ನಿಪಥ ಯೋಜನೆ ವಿರೋಧಿಸಿ ನೂರಾರು ಮಂದಿಯೊಂದಿಗೆ ತಮ್ಮ ಮಗ ಸಿಕಂದರಾಬಾದ್‌ಗೆ ತೆರಳಿದ್ದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣ

ತೆಲಂಗಾಣದ ವಾರಂಗಲ್‌ನ ಖಾನಾಪುರ ಮಂಡಲದ ದಬೀರ್‌ಪೇಟ್ ಗ್ರಾಮದ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ರಾಕೇಶ್ ತನ್ನ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಶೀಘ್ರದಲ್ಲೇ ಸೇನೆಗೆ ಸೇರಲು ಎದುರು ನೋಡುತ್ತಿದ್ದ. ರಾಕೇಶ್ ಸಹೋದರಿ ರಮಾ ಈಗಾಗಲೇ ಬಿಎಸ್‌ಎಫ್‌ಗೆ ಆಯ್ಕೆಯಾಗಿ ಕೋಲ್ಕತ್ತಾದಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ರಾಕೇಶ್ ದೇಶಕ್ಕೆ ಸೇವೆ ಸಲ್ಲಿಸಲು ಬಯಸಿದ್ದರು

ರಾಕೇಶ್ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಕುಮಾರಸ್ವಾಮಿ, ಪ್ರಜ್ಞೆ ಮರಳಿದ ನಂತರ, ರಾಕೇಶ್ ತನ್ನ ಸಹೋದರಿಯಿಂದ ತುಂಬಾ ಸ್ಫೂರ್ತಿ ಪಡೆದಿದ್ದಾನೆ ಮತ್ತು ಬಿಎಸ್ಎಫ್ ಮತ್ತು ಇತರ ಕೇಂದ್ರ ಪಡೆಗಳ ಬಗ್ಗೆ ಆಗಾಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದನು ಎಂದು ಹೇಳಿದರು. ಆತ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸಿದ್ದ ಮತ್ತು ಲಿಖಿತ ಪರೀಕ್ಷೆಗಾಗಿ ಕಾಯುತ್ತಿದ್ದ, ಇದರಿಂದಾಗಿ ತನ್ನ ಕನಸು ನನಸಾಗಿಸಲು ಕಾಯುತ್ತಿದ್ದ. ಆದರೀಗ ನಡೆದಿರುವುದನ್ನು ನೋಡಿ ನನಗೆ ನಂಬಲಾಗುತ್ತಿಲ್ಲ ಎಂದಿದ್ದಾರೆ.

ಈಡೇರದ ಆಸೆಗಾಗಿ ರಾಕೇಶ್ ಇಹಲೋಕ ತ್ಯಜಿಸಿದ

ಇನ್ನು ರಾಕೇಶ್ ಸಿಕಂದರಾಬಾದ್‌ಗೆ ಹೋಗಿ ಪ್ರತಿಭಟನೆ ಮಾಡುವ ಬಗ್ಗೆ ನಮಗೆ ಏನನ್ನೂ ಹೇಳಲಿಲ್ಲ ಎಂದು ಅವರು ಹೇಳಿದರು.. ಆತ ಸೇನೆ ಸೇರುವ ಆಸೆಯಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ನಾವೂ ಆತ ಭಾರತೀಯ ಸೇನೆಗೆ ಸೇರುತ್ತಾನೆ ಎಂದು ನಿರೀಕ್ಷಿಸಿದ್ದೆವು. ಈಗ ಆತನ ಕನಸು ಮತ್ತು ನಮ್ಮ ಆಸೆ ಎರಡೂ ಈಡೇರದೆ ಉಳಿದಿವೆ. ಅವನ ಮನೆಯ ಹೊರಗೆ ನೆರೆದಿದ್ದ ಇತರ ಗ್ರಾಮಸ್ಥರು ರಾಕೇಶ್ ಸೈನ್ಯಕ್ಕೆ ಸೇರುವ ಉತ್ಸಾಹದ ಬಗ್ಗೆ ವಿವರಿಸಿದ್ದಾರೆ. .