ಇನ್‌ಸ್ಟಾಗ್ರಾಂ ಲೈವ‌್‌ನಲ್ಲಿ ಗೆಳೆಯರಿಗೆ ಹಾಯ್ ಹೇಳಿದ ಯುವಕ, ಕೆಲವೇ ಕ್ಷಣದಲ್ಲಿ ನಡೆಯಿತು ದುರಂತ, 22 ಹರೆಯದ ಯುವಕ ಲೈವ್ ಮೂಲಕ ಹೆಚ್ಚು ಮಾತನಾಡಿಲ್ಲ.ವಿಶೇಷವಾಗಿ ಗೆಳೆಯರಿಗೆ ಹಾಯ್ ಹೇಳಿದ್ದಾನೆ. ಮುಂದೇನಾಯಿತು.

ಶಿವಪುರಿ (ಮಾ.29) ಇನ್‌ಸ್ಟಾಗ್ರಾಂ ಮೂಲಕ ಲೈವ್ ಆಗಮಿಸಿದ 22 ಹರೆಯದ ಯುವಕ ವಿಶೇಷವಾಗಿ ತನ್ನ ಗೆಳೆಯರಿಗೆ ಹಾಯ್ ಹೇಳಿದ್ದಾನೆ. ಲೈವ್‌ನಲ್ಲಿ ಈತ ಹೆಚ್ಚು ಮಾತನಾಡಿಲ್ಲ. ಆದರೆ ಸುಮಾರು ಅರ್ಧ ಗಂಟೆಗಳ ಲೈವ್‌ ಅಂತ್ಯಗೊಂಡಿದ್ದು ಮಾತ್ರವಲ್ಲ, ಯುವಕನ ಪ್ರಾಣವೂ ಹೋಗಿದೆ. ಈ ದುರಂತ ಘಟನೆ ನಡೆದಿರುವುದು ಮಧ್ಯಪ್ರದೇಶದ ಶಿವಪುರಿಯಲ್ಲಿ. ಮನೋಜ್ ರಜಕ್ ಅನ್ನೋ ಯುವಕ ಮೃತಪಟ್ಟಿದ್ದಾನೆ. ಈತನ ಲೈವ್ ನೋಡಿದ ಗೆಳೆಯರು ಓಡೋಡಿ ಬಂದರೂ ಮನೋಜ್ ರಜಕ‌್‌ನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೋಜ್ ರಜಕ‌ಗೆ ಏನಾಯಿತು?

ಶಿವಪುರಿ ನಿವಾಸಿ ಮನೋಜ್ ರಜಕ್ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಕೆಲ ಗಾರ್ಮೆಂಟ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ. ಬಾಡಿಗೆ ಮನೆಯಲ್ಲಿದ್ದ ಈತ ಅದೇ ಬಾಡಿಗೆ ಮನೆಯಲ್ಲಿ ದುರಂತ ಅಂತ್ಯಕಂಡಿದ್ದಾನೆ. ಈತ ಇನ್‌ಸ್ಟಾಗ್ರಾಂ ಲೈವ್ ಮೂಲಕ ಆಗಮಿಸಿ ಮೊದಲಿಗೆ ಎಲ್ಲಾ ಗೆಳೆಯರಿಗೆ ಹಾಯ್ ಎಂದಿದ್ದಾನೆ. ಬಳಿಕ ಪ್ರೀತಿಯ ಗೆಳೆಯರು ಫ್ಲೈಯಿಂಗ್ ಕಿಸ್ ನೀಡಿದ್ದಾನೆ. ಇಷ್ಟೇ ನೋಡಿ ಬಳಿಕ ಲೈವ್ ಮೂಲಕ ಬದುಕು ಅಂತ್ಯಗೊಳಿಸಿದ್ದಾನೆ.

ಮನೋಜ್ ರಜಕ್‌ ಇನ್‌ಸ್ಟಾಗ್ರಾಂ ಲೈವ್‌ಸ್ಟ್ರೀಮ್‌ಗೆ ಬಂದಾಗ ಗೆಳೆಯರು ಲೈವ್ ಗಮನಿಸಲಿಲ್ಲ. ಕೆಲವೇ ನಿಮಿಷಗಳ ಬಳಿಕ ಲೈವ್ ನೋಟಿಫಿಕೇಶನ್ ನೋಡಿ ಗಮನಿಸಿದ್ದಾರೆ. ಈ ವೇಳೆ ಈತನ ನಡೆ ಗೆಳೆಯರಿಗೆ ಅಚ್ಚರಿಯಾಗಿದೆ. ಪರಿಣಾಮ ಗೆಳೆಯರು ಕರೆ ಮಾಡಿದ್ದಾರೆ.ಉತ್ತರವಿಲ್ಲ. ತಕ್ಷಣವೇ ಇಬ್ಬರು ಗೆಳೆಯರು ಮನೋಜ್ ರಜಕ್ ಇದ್ದ ಬಾಡಿಗೆ ಮನೆಯತ್ತ ಧಾವಿಸಿದ್ದಾರೆ. ಅಷ್ಟರಲ್ಲೇ ಮನೋಜ್ ಕೊನೆಯೆಸಿರು ಎಳೆದಿದ್ದಾನೆ.

ಮೊಬೈಲ್ ವಶಕ್ಕೆ ಪಡೆದ ಪೊಲೀಸ್

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರೆ, ಇತ್ತ ಬಾಡಿಗೆ ಕೋಣೆ ಇಡಿ ತಡಕಾಡಿದ್ದಾರೆ. ಯಾವುದೇ ಡೆತ್ ನೋಟ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಇತ್ತ ಮನೋಜ್ ರಜಕ್ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ತಾಯಿ ಅಗಲಿಕೆಗೆ ಬೆನ್ನಲ್ಲೇ ತಂದೆಯ ಮರು ಮದುವೆ ಶಾಕ್

ಮನೋಜ್ ರಜಕ್ 22 ವಯಸ್ಸಿನ ಯುವಕ. ತಂದೆ ಹಾಗೂ ತಾಯಿಯನ್ನು ಅತೀಯಾಗಿ ಪ್ರೀತಿಸುತ್ತಿದ್ದ. ಆದರೆ ಕೆಲ ಮನೋಜ್ ರಜಕ್ ತಾಯಿ ವರ್ಷ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಾಯಿಯ ಅಗಲಿಕೆ ಮನೋಜ್ ರಜಕ್‌ಗೆ ತೀವ್ರ ಆಘಾತ ತಂದಿತ್ತು. ತಂದೆ ಹಾಗೂ ತಾಯಿ ಜೊತೆ ಸುಂದರ ಜೀವನದ ಕನಸು ಕಂಡಿದ್ದ ಮನೋಜ್‌ಗೆ ತಾಯಿ ಸಾವು ಶಾಕ್ ಆಗಿತ್ತು. ಈ ನೋವಿನಲ್ಲೇ ಮರುಗಿದ ಮನೋಜ್‌ಗೆ ಕೆಲಲ ತಿಂಗಳ ಹಿಂದೆ ತಂದೆ ಶಾಕ್ ನೀಡಿದ್ದರು. ತಾಯಿ ನೋವಿನ ಅಗಲಿಕೆಯಲ್ಲಿರುವಾಗಲೇ ತಂದೆ ಮರು ಮದುವೆಯಾಗಿದ್ದಾರೆ. ತಂದೆ ಮರು ಮದುವೆಯಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇತ್ತ ಮನೋಜ್ ಅನಿವಾರ್ಯವಾಗಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುವಂತಾಗಿತ್ತು. ತಾಯಿ ಅತೀಯಾಗಿ ಪ್ರೀತಿಸಿದ ಇಬ್ಬರು ತನ್ನಿಂದ ದೂರವಾಗಿದ್ದರು. ಇದರಿಂದ ಮನೋಜ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿದೆ.