ನಾಗ್ಪುರ(ಏ.21): ಮಹಾರಾಷ್ಟ್ರದ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್‌ ಅವರ ಸಂಬಂಧಿ ಯುವಕನೋರ್ವ ಕೊರೋನಾ ಲಸಿಕೆ ಪಡೆದ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದು ಭಾರೀ ವಿವಾದದ ಕಿಡಿ ಹೊತ್ತಿಸಿದೆ.

ಪ್ರಸ್ತುತ 45 ವರ್ಷ ಅಥವಾ ಈ ವಯೋಮಿತಿ ಮೀರಿದವರು ಲಸಿಕೆ ಪಡೆಯಬಹುದು. ಫಡ್ನವೀಸ್‌ ಸಂಬಂಧಿಯಾದ 20 ವರ್ಷದ ತನ್ಮಯ್‌ ಫಡ್ನವೀಸ್‌ ನಾಗ್ಪುರದ ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯಲ್ಲಿ ಲಸಿಕೆ ಪಡೆದಿದ್ದಾರೆ. ಇದು ವಯೋಮಿತಿಯ ಸ್ಪಷ್ಟ ಉಲ್ಲಂಘನೆ.

ಈ ಬಗ್ಗೆ ಅಂತರ ಕಾಯ್ದುಕೊಂಡ ಫಡ್ನವೀಸ್‌, ‘ತನ್ಮಯ್‌ ನನ್ನ ದೂರದ ಸಂಬಂಧಿ. ಅವರು ಲಸಿಕೆ ಪಡೆದಿದ್ದು ಗೊತ್ತಿಲ್ಲ. ಅವರು ನಿಯಮಾವಳಿ ಮೀರಿ ಲಸಿಕೆ ಪಡೆದಿದ್ದರೆ ಅದು ತಪ್ಪು’ ಎಂದಿದ್ದಾರೆ.