Viral Video: ಲಿಫ್ಟ್‌ನಲ್ಲಿ ಯುವ ಜೋಡಿಯೊಂದು ಮೈಮರೆತು ಪ್ರಣಯದಲ್ಲಿ ತೊಡಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನವದೆಹಲಿ: ಇಂದಿನ ಯುವ ಸಮುದಾಯಕ್ಕೆ ಎಲ್ಲಿ ಹೇಗಿರಬೇಕು ಎಂಬುದರ ತಿಳುವಳಿಕೆಯೇ ಇರಲ್ಲ ಅನ್ನೋದು ಪದೇ ಪದೇ ಸಾಬೀತಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಚೆಲ್ಲ ಚೆಲ್ಲಾಗಿ ಆಡುತ್ತಾ ಟೀಕೆಗೆ ಗುರಿಯಾಗುತ್ತಿರುತ್ತಾರೆ. ಇಷ್ಟು ಮಾತ್ರವಲ್ಲಿ ಇವರ ಅತಿರೇಕದ ವರ್ತನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗಷ್ಟೆ ಪಾರ್ಕಿಂಗ್ ಜಾಗದಲ್ಲಿಯೇ ಕಾರ್ ನಿಲ್ಲಿಸಿ ಯುವ ಜೋಡಿಯೊಂದು ಮೈಮರೆತ್ತಿತ್ತು.ಇದೀಗ ಸಾರ್ವಜನಿಕರು ಬಳಸುವ ಲಿಫ್ಟ್‌ನಲ್ಲಿ ಜೋಡಿಯೊಂದು ತುಟಿಗೆ ತುಟಿ ಸೇರಿಸಿದೆ. ಈ ವೇಳೆ ಜೋಡಿಯೊಂದಿಗೆ ಮತ್ತೋರ್ವ ಯುವತಿ ಸಹ ಇದೇ ಲಿಫ್ಟ್‌ನಲ್ಲಿರೋದನ್ನು ಗಮನಿಸಬಹುದು. ಈ ಎಲ್ಲಾ ದೃಶ್ಯಗಳು ಲಿಫ್ಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು Joker of India ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಏಪ್ರಿಲ್ 21ರಂದು ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದ್ದು, ಇದುವರೆಗೂ 1 ಲಕ್ಷಕ್ಕೂ ಅಧಿಕ ವ್ಯೂವ್, ನೂರಾರು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಅಲ್ಲಿರೋ ಮತ್ತೊಬ್ಬ ಯುವತಿ ತನಗೂ ಯಾರಾದ್ರೂ ಕಿಸ್ ಮಾಡಬಾರದಾ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಿರಬಹುದು. ಇಂತಹ ಕೆಲಸಗಳನ್ನು ಈ ವಯಸ್ಸಿನಲ್ಲಿ ಮಾಡದೇ ಮುದುಕರಾದ್ಮೇಲೆ ಮಾಡೋಕೆ ಆಗುತ್ತಾ ಎಂದು ಕಮೆಂಟ್ ಹಾಕುವ ಮೂಲಕ ಕೆಲವರು ಜೋಡಿಯ ಪರವಾಗಿ ನಿಂತಿದ್ದಾರೆ.
ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!
ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ Joker of Indiaಗೂ ಕೆಲವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರಿಬ್ಬರು ಕಿಸ್ ಮಾಡಿದ್ರೆ ನಿನಗೇನು ಸಮಸ್ಯೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ Joker of India, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಉತ್ತರಿಸಿದ್ದಾರೆ. ಯಾರದ್ದೋ ಖಾಸಗಿ ವಿಡಿಯೋಗಳನ್ನು ಈ ರೀತಿಯಾಗಿ ಹಂಚಿಕೊಳ್ಳುವುದು ತಪ್ಪು. ಕೊನೆಯ ಪಕ್ಷ ವಿಡಿಯೋದಲ್ಲಿರುವ ಮೂವರ ಮುಖವನ್ನು ಬ್ಲರ್ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಲಿಫ್ಟ್‌ನೊಳಗೆ ಇಬ್ಬರು ಯುವತಿಯರ ಜೊತೆ ಓರ್ವ ಯುವಕ ಎಂಟ್ರಿ ಕೊಡುತ್ತಾರೆ. ಕಪ್ಪು ಟೀ ಶರ್ಟ್ ಮತ್ತು ಕನ್ನಡಕ ಧರಿಸಿದ್ದ ಯುವತಿ ಮುನಿಸಿಕೊಂಡಂತೆ ಕಾಣಿಸುತ್ತದೆ. ಆಕೆಯ ಹಿಂದೆಯೇ ಬರೋ ಹುಡುಗ, ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ಈ ಪ್ರಯತ್ನದ ಭಾಗವಾಗಿ ಆಕೆಯ ತುಟಿಗೆ ತುಟಿ ಸೇರಿಸುತ್ತಾನೆ. ಇದಕ್ಕೆ ಯುವತಿ ಸಹ ಯಾವುದೇ ವಿರೋಧವನ್ನು ವ್ಯಕ್ತಪಡಿಸಲ್ಲ. ಈ ಎಲ್ಲವನ್ನು ಪಕ್ಕದಲ್ಲಿದ್ದ ಯುವತಿ ಹತ್ತಿರದಿಂದಲೇ ಎಲ್ಲವನ್ನು ಗಮನಿಸುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಮೂವರ ನಡುವೆ ಮಾತುಕತೆ ನಡೆಯುತ್ತಿರುತ್ತದೆ.
ಇದನ್ನೂ ಓದಿ: ಅಪ್ಪ-ಅಮ್ಮನ ಮದ್ವೆಗೆ ಕರೆದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗಳು: ತಪ್ಪು ಮಾಡಿಬಿಟ್ರಿ ಅಂತಿರೋ ನೆಟ್ಟಿಗರು
ಅನಾವಶ್ಯಕವಾಗಿ ಲಿಫ್ಟ್‌ನಲ್ಲಿರುವ ಬಟನ್‌ಗಳನ್ನು ಮೂವರು ಒತ್ತುತ್ತಿರುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ಹುಡುಗ ಮತ್ತೆ ಮುತ್ತು ಕೊಡಲು ಶುರು ಮಾಡುತ್ತಾಳೆ. ಆ ಬಳಿಕ ಪ್ರೇಯಸಿಯನ್ನು ಬಿಗಿಯಾಗಿ ಅಪ್ಪಿಕೊಂಡು ಕ್ಷಮೆ ಕೇಳಿದಂತೆ ಕಾಣಿಸುತ್ತದೆ. ಇವರಿಬ್ಬರ ಪಕ್ಕದಲ್ಲಿದ್ದ ಯುವತಿ ಲಿಫ್ಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದತ್ತ ನೋಡುತ್ತಾಳೆ. ಕ್ಯಾಮೆರಾ ಇರೋ ವಿಷಯವನ್ನು ಇಬ್ಬರಿಗೂ ಹೇಳುತ್ತಾಳೆ. ಅಷ್ಟರಲ್ಲಿಯೇ ಲಿಫ್ಟ್ ಡೋರ್ ಓಪನ್ ಆಗುತ್ತೆ ಮತ್ತು ಮೂವರು ಹೊರಗೆ ಬರುತ್ತಾರೆ. ಆದರೆ ಈ ಘಟನೆ ಎಲ್ಲಿಯುದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ನೆಟ್ಟಿಗರಿಂದ ಪೋಲಿ ಕಮೆಂಟ್
ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಮೂವರು ಪರಸ್ಪರ ಚುಂಬನ ಮಾಡಿಕೊಳ್ಳಬೇಕಿತ್ತು ಎಂದು ಪೋಲಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಹುಡುಗ ಎರಡು ಬ್ಯಾಗ್ ಧರಿಸಿದ್ದನ್ನು ಸೂಕ್ಷ್ಮವಾಗಿ ಗಮನಿಸಿರುವ ನೆಟ್ಟಿಗರು, ಲವ್‌ನಲ್ಲಿ ಬಿದ್ಲೇಲೇ ಗಂಡ್ಮಕ್ಕಳು ಪಾಡು ಹೀಗೆ ಆಗುತ್ತೆ. ಇಬ್ಬರು ಬ್ಯಾಗ್ ಅವನೇ ಹಾಕಿಕೊಂಡಿದ್ದಾನೆ ಎಂದು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀರಸ್ತು ಶುಭಮಸ್ತು ಶೂಟಿಂಗ್ ವೇಳೆ ಸುಧಾರಾಣಿ ಬಳಿ ತುಳಸಿ ಪಾಪು ಹೇಗಿರತ್ತೆ ನೋಡಿ!
