ಸಂಜಯ್ ಮತ್ತು ವೀಣಾ ಜಿಎಸ್‌ಟಿ ರೋಡ್‌ನಲ್ಲಿ ಮದ್ಯದ ಬಾಟೆಲ್ ಹಿಡಿದು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಕಾರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೆನ್ನೈ: ಚಲಿಸುತ್ತಿರುವ ಕಾರ್ ಸನ್‌ರೂಫ್ ತೆರೆದು ಕೈಯಲ್ಲಿ ಮದ್ಯದ ಬಾಟೆಲ್ ಹಿಡಿದು ಎಂಜಾಯ್ ಮಾಡಿದ್ದ ಜೋಡಿ ಪೊಲೀಸರ ಅತಿಥಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಬಳಿಕ ಪೊಲೀಸರ ಕಾರ್ ನಂಬರ್ ಆಧರಿಸಿ ಜೋಡಿಯನ್ನು ಬಂಧಿಸಿದ್ದಾರೆ. ನಡುರಸ್ತೆಯಲ್ಲಿ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆದಿದ್ದ ಜೋಡಿಯ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಚೆನ್ನೈನ ತಂಬರಂ-ಪಲ್ಲವರಂ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ತಮಿಳುನಾಡಿನ ಕಾನೂನು ವಿದ್ಯಾರ್ಥಿ 23 ವರ್ಷದ ಸಂಜಯ್ ಮತ್ತು ಆತನ ಗೆಳತಿ ವೀಣಾ ಬಂಧಿತ ಜೋಡಿ. ಚಲಿಸುತ್ತಿರುವ ಕಾರ್‌ನಲ್ಲಿ ಜೋಡಿ ಮದ್ಯ ಸೇವನೆ ಮಾಡಿದ್ದಾರೆ.
ಸಂಜಯ್ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು ಹಾಗೂ ರಸ್ತೆ ಸುರಕ್ಷಾ ನಿಯಮಗಳನ್ನು ಉಲ್ಲಂಘಿಸಿದಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಇಷ್ಟು ಮಾತ್ರವಲ್ಲದೇ ಸಂಜಯ್ ಮತ್ತು ವೀಣಾ ಜಿಎಸ್‌ಟಿ ರೋಡ್‌ನಲ್ಲಿ ಮದ್ಯದ ಬಾಟೆಲ್ ಹಿಡಿದು ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಕಾರ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನನ್ ಗಂಡನೂ ಹೀಗೆಯಪ್ಪಾ, ಹೇಳಿ ಹೇಳಿ ಸಾಕಾಗೋಗಿದೆ... ಸೀರಿಯಲ್ ಜೋಡಿಯ ನೋಡಿ ಹೆಂಡ್ತಿಯರ ಗೋಳು!
ವೈರಲ್ ವಿಡಿಯೋದಲ್ಲಿ ಏನಿದೆ?
ಕಾರ್ ಚಲಿಸುತ್ತಿರುವಾಗಲೇ ಜೋಡಿ ಸನ್ ರೂಫ್ ತೆರೆದು, ಸೀಟ್ ಮೇಲೆ ನಿಂತು ಹೊರ ಬಂದಿದ್ದಾರೆ. ತುಂಬಾ ಸಮಯ ಇಬ್ಬರು ಮಾತನಾಡುತ್ತಾ ಇರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಯುವಕ ಕೈಯಲ್ಲಿ ಮದ್ಯದ ಬಾಟೆಲ್ ಹಿಡಿದುಕೊಂಡು ಯುವತಿ ಜೊತೆ ನಿಂತಿದ್ದಾನೆ. ಕಾರ್ ಪಕ್ಕದಲ್ಲಿಯೇ ಆಟೋ, ಬೈಕ್ ಗಳು ಪಾಸ್ ಆಗುತ್ತಿದ್ದರೂ ಜೋಡಿ ಯಾವುದನ್ನೂ ಕೇರ್ ಮಾಡಿಲ್ಲ. ಬೈಕ್‌ನಲ್ಲಿದ್ದ ಸವಾರ ಈ ಜೋಡಿಯನ್ನು ನೋಡುತ್ತಲೇ ಹೋಗುತ್ತಾನೆ. ಒಂದು ವೇಳೆ ಏನಾದ್ರೂ ಅಪಘಾತ ಸಂಭವಿಸಿದ್ರೆ ಜೋಡಿಯ ಅಸಭ್ಯ ವರ್ತನೆಯೇ ಕಾರಣವಾಗುತ್ತಿತ್ತು.
ಬ್ಯುಸಿ ರೋಡ್‌ನಲ್ಲಿ ಜೋಡಿಯ ಅನುಚಿತ ವರ್ತನೆಗೆ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ. ಈ ಜೋಡಿಯತ್ತ ಯಾರಾದ್ರೂ ಚಾಲಕರು ನೋಡಿ ವಾಹನದ ನಿಯಂತ್ರಣ ಕಳೆದುಕೊಂಡರೆ ಸರಣಿ ಅಪಘಾತ ಉಂಟಾಗುತ್ತಿತ್ತು. ವಾಹನ ದಟ್ಟನೆಯುಳ್ಳ ರಸ್ತೆಯಲ್ಲಿ ಈ ರೀತಿ ಮಾಡೋದು ತಪ್ಪು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸಂಜಯ್ ಮತ್ತು ವೀಣಾ ಸುಮಾರು 20 ಕಿಲೋ ಮೀಟರ್ ಹೀಗೆಯೆ ಗಲಾಟೆ ಮಾಡುತ್ತಾ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
ಮಳೆಯಲಿ ಜೊತೆಯಲಿ ಕದ್ದು ಮುಚ್ಚಿ ಮಹಡಿ ಮೇಲೆ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ವೈರಲ್!
