Asianet Suvarna News Asianet Suvarna News

ಮೆಟ್ರೋ ರೈಲಿನಲ್ಲಿ ಚೆಲ್ಲಿದ ಆಹಾರ ಕ್ಲೀನ್‌ ಮಾಡಿದ ಯುವಕ: ನೆಟ್ಟಿಗರಿಂದ ಮೆಚ್ಚುಗೆ

ತನ್ನ ಟಿಫಿನ್ ಬಾಕ್ಸ್‌ನಿಂದ ತಪ್ಪಾಗಿ ಆಹಾರ ಚೆಲ್ಲಿ ಹೋಗಿದ್ದು, ನಂತರ ಯುವಕನೊಬ್ಬ ದೆಹಲಿ ಮೆಟ್ರೋದ ಫ್ಲೋರ್‌ ಅನ್ನು ಹೇಗೆ ಸ್ವಚ್ಛಗೊಳಿಸಿದ ಎಂಬುದನ್ನು ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿರುವ ಹಾಗೂ ಲಿಂಕ್ಡ್‌ಇನ್‌ನಲ್ಲಿ ಕಾಣಿಸಿಕೊಂಡಿರುವ ಈ ಫೋಟೋ ತೋರಿಸುತ್ತದೆ.

young boy cleans delhi metro floor after he spilled food internet impressed ash
Author
First Published Dec 4, 2022, 7:37 PM IST

ಪ್ರಧಾನಿ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಭಾರತ ಎಂಬ ಅಭಿಯಾನ ಆರಂಭಿಸಲಾಯ್ತು. ಇದರಿಂದ ಅನೇಕರು ಸ್ಫೂರ್ತಿ ಪಡೆದಿದ್ದು, ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಾಗೂ, ಸ್ವಚ್ಛತೆ ಮತ್ತು ನೈರ್ಮಲ್ಯವು ದೇಶದ ಆರೋಗ್ಯಕರ ಹಾಗೂ ಸುಗಮ ಅಭಿವೃದ್ಧಿಗೆ ಕಾರಣವಾದ ಎರಡು ಪ್ರಮುಖ ಅಂಶಗಳಾಗಿವೆ. ಆದರೂ, ಹೆಚ್ಚಿನ ನಾಗರಿಕರು ತಮ್ಮ ಕರ್ತವ್ಯಗಳನ್ನು ಅನುಸರಿಸುತ್ತಿಲ್ಲ ಮತ್ತು ರಸ್ತೆಗಳು, ಪ್ರವಾಸಿ ಸ್ಥಳಗಳು ಮತ್ತು ಸಾರ್ವಜನಿಕ ಸಾರಿಗೆ, ಪ್ರದೇಶಗಳಲ್ಲಿ ಕಸ ಹಾಕುತ್ತಿರುತ್ತಾರೆ. ಆದರೆ, ದೆಹಲಿ ಮೆಟ್ರೋದ ಒಂದು ಹೃದಯಸ್ಪರ್ಶಿ ಘಟನೆಯು ಸ್ವಚ್ಛತೆ ಮತ್ತು ರಾಷ್ಟ್ರದ ಸ್ವಚ್ಛ ಭಾರತ ಅಭಿಯಾನದ ಕಡೆಗೆ ವ್ಯಕ್ತಿಯ ಜವಾಬ್ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ.

ತನ್ನ ಟಿಫಿನ್ ಬಾಕ್ಸ್‌ನಿಂದ ತಪ್ಪಾಗಿ ಆಹಾರ ಚೆಲ್ಲಿ ಹೋಗಿದ್ದು, ನಂತರ ಯುವಕನೊಬ್ಬ ದೆಹಲಿ ಮೆಟ್ರೋದ ಫ್ಲೋರ್‌ ಅನ್ನು ಹೇಗೆ ಸ್ವಚ್ಛಗೊಳಿಸಿದ ಎಂಬುದನ್ನು ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿರುವ ಹಾಗೂ ಲಿಂಕ್ಡ್‌ಇನ್‌ನಲ್ಲಿ ಕಾಣಿಸಿಕೊಂಡಿರುವ ಈ ಫೋಟೋ ತೋರಿಸುತ್ತದೆ. ಆಶು ಸಿಂಗ್ ಎಂಬ ಬಳಕೆದಾರರು ಲಿಂಕ್ಡ್‌ಇನ್‌ನಲ್ಲಿ ಈ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.

ಇದನ್ನು ಓದಿ: Viral Video: ಮದುವೆಗೆ ಕುಟುಂಬವನ್ನು ಕರೆದೊಯ್ಯಲು ಸಂಪೂರ್ಣ ವಿಮಾನವನ್ನೇ ಬುಕ್‌ ಮಾಡಿದ ವಧು - ವರ..!

ಆಶು ಸಿಂಗ್ ಅವರ ಪೋಸ್ಟ್ ಪ್ರಕಾರ, ಹುಡುಗನೊಬ್ಬ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ, ಅವನು ತನ್ನ ಬ್ಯಾಗ್‌ನಿಂದ ನೀರಿನ ಬಾಟಲಿಯನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ತನ್ನ ಟಿಫಿನ್ ಅನ್ನು ಮೆಟ್ರೋದಲ್ಲಿ ಚೆಲ್ಲುತ್ತಾನೆ. ಈ ಬಗ್ಗೆ. ಅನೇಕರು ತಲೆಕೆಡಿಸಿಕೊಳ್ಳದಿದ್ದರೂ, ಆ ಹುಡುಗ, ಆಶ್ಚರ್ಯಕರವಾಗಿ, ತನ್ನ ನೋಟ್‌ಬುಕ್‌ ಒಂದರಿಂದ ಒಂದು ಪುಟವನ್ನು ಹರಿದು ಕೆಳಕ್ಕೆ ಬಿದ್ದಿದ್ದ ಎಲ್ಲಾ ಆಹಾರವನ್ನು ತೆಗೆದಿದ್ದಾನೆ. ಅಷ್ಟೇ, ಅಲ್ಲದೆ ನಂತರ ಅವನು ತನ್ನ ಕರ್ಚೀಫ್‌ ತೆಗೆದುಕೊಂಡು ಆ ಭಾಗವನ್ನು ಒರೆಸಿದ್ದಾನೆ.

ಲಿಂಕ್ಡ್‌ಇನ್‌ನಲ್ಲಿನ ಪೋಸ್ಟ್ ಹೀಗಿದೆ, ''#ದೆಹಲಿ ಮೆಟ್ರೋದಲ್ಲಿ ಇಯರ್‌ಫೋನ್‌ಗಳನ್ನು ಜೋಡಿಸಿ ಕುಳಿತಿದ್ದ ಒಬ್ಬ ಹುಡುಗ ತನ್ನ ಟಿಫಿನ್ ಬಾಕ್ಸ್ ಕೆಳಗೆ ಬಿದ್ದಾಗ ತನ್ನ ಬ್ಯಾಗ್‌ನಿಂದ ನೀರಿನ ಬಾಟಲಿಯನ್ನು ತೆಗೆಯುತ್ತಿದ್ದನು ಮತ್ತು ಅವನ ಊಟವೆಲ್ಲಾ ನೆಲದ ಮೇಲೆ ಚೆಲ್ಲಿತು. ಹುಡುಗ ತನ್ನ ನೋಟ್‌ಬುಕ್‌ ಒಂದರಿಂದ ಒಂದು ಪುಟವನ್ನು ಹರಿದು ನೆಲದಿಂದ ಎಲ್ಲಾ ಆಹಾರವನ್ನು ತೆಗೆದುಕೊಂಡನು. ನಂತರ ಅವನು ತಮ್ಮ ಕರವಸ್ತ್ರವನ್ನು ತೆಗೆದುಕೊಂಡು ನೆಲವನ್ನು ಒರೆಸಿದನು.

ಇದನ್ನೂ ಓದಿ: Viral Video: ಪೊಲೀಸರು ಎಸೆದ ತರಕಾರಿ ಎತ್ತಿಕೊಳ್ಳಲು ಹೋಗಿ ರೈಲು ಅಪಘಾತದಲ್ಲಿ 2 ಕಾಲು ಕಳೆದುಕೊಂಡ ವ್ಯಾಪಾರಿ..! 

ಈ ಪೋಸ್ಟ್ ಅನ್ನು ಇಲ್ಲಿ ನೋಡಿ:

ಶನಿವಾರ ಬೆಳಿಗ್ಗೆ ಹಂಚಿಕೊಂಡಾಗಿನಿಂದ ಈ ಪೋಸ್ಟ್ ಈವರೆಗೆ 29,000 ಕ್ಕೂ ಹೆಚ್ಚು ಲೈಕ್ಸ್‌ ಮತ್ತು ಸುಮಾರು 350 ಕಮೆಂಟ್‌ಗಳನ್ನು ಗಳಿಸಿದೆ. ಅನೇಕರು ಯುವಕನ ಜವಾಬ್ದಾರಿಯ ಪ್ರಜ್ಞೆಯನ್ನು ಶ್ಲಾಘಿಸಿದರು ಮತ್ತು ಈ ಕೃತ್ಯವನ್ನು ಸ್ಪೂರ್ತಿದಾಯಕ ಉದಾಹರಣೆ ಎಂದು ಹೊಗಳಿದ್ದಾರೆ. ''ನಮ್ಮ ಸುತ್ತಮುತ್ತಲಿನ ಬಹುತೇಕ ಜನರಲ್ಲಿ ಕಾಣೆಯಾಗಿರುವ ಅವರ ನಾಗರಿಕ ಪ್ರಜ್ಞೆಯನ್ನು ಪ್ರಶಂಸಿಸಿ.'' ಎಂದು ಒಬ್ಬರು ಕಮೆಂಟ್‌ ಮಾಡಿದ್ದರೆ, ಮತ್ತೊಬ್ಬರು, ''ಸಾಂಸ್ಕೃತಿಕ ಬದಲಾವಣೆಯು ಹೀಗೆಯೇ ಆಗಬಹುದು. ಅಂತಹ ಸುಂದರವಾದ ಸ್ಪೂರ್ತಿದಾಯಕ ಕಾರ್ಯಗಳನ್ನು ಉತ್ತೇಜಿಸುವುದು ಒಳ್ಳೆಯದು ಎಂದಿದ್ದಾರೆ. 
 
ಹಾಗೂ, ಸ್ವಚ್ಛ ಭಾರತ್‌ ಮಿಷನ್‌ ಇಲ್ಲಿ ಪ್ರಮುಖವಾಗಿದೆ. ಇದು ಪ್ರತಿಯೊಬ್ಬ ಭಾರತೀಯರಲ್ಲಿ ಬಲಗೊಳ್ಳಬೇಕು. ಇದು ಘೋಷಣೆಯ ಬಗ್ಗೆ ಅಲ್ಲ, ನಾವೆಲ್ಲರೂ ಹಂಚಿಕೊಳ್ಳಬೇಕಾದ ದೃಷ್ಟಿ. ನಮ್ಮ ಮುಂದಿನ ಪೀಳಿಗೆಯು ನಮ್ಮ ದೇಶಕ್ಕಾಗಿ ಹೇಗೆ ಎದುರು ನೋಡುತ್ತಿದೆ ಎಂಬುದನ್ನು ಈ ಹುಡುಗ ನಮಗೆ ಸರಿಯಾದ ಉದಾಹರಣೆ ನೀಡುತ್ತಾನೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.  

ಇದನ್ನೂ ಓದಿ: ಭೂರಿ ಭೋಜನವಿದು... ಆನೆಗೆ ಆಹಾರ ಹೇಗೆ ಸಿದ್ಧಪಡಿಸುತ್ತಾರೆ ಗೊತ್ತಾ? ವಿಡಿಯೋ

Follow Us:
Download App:
  • android
  • ios